ವಿದೇಶ

8 ತಿಂಗಳ ಹೋರಾಟದ ನಂತರ ಖ್ಯಾತ ಭಾರತೀಯ-ಅಮೆರಿಕನ್ ವೈದ್ಯ ಅಜಯ್ ಲೋಧಾ ಕೊರೋನಾಗೆ ಬಲಿ!

Vishwanath S

ನ್ಯೂಯಾರ್ಕ್: ಕಳೆದ ಎಂಟು ತಿಂಗಳಿನಿಂದ ಕೊರೋನಾ ವಿರುದ್ಧ ಹೋರಾಡುತ್ತಿದ್ದ ಖ್ಯಾತ ಭಾರತೀಯ-ಅಮೆರಿಕನ್ ವೈದ್ಯ ಮತ್ತು ಸಮುದಾಯದ ಮುಖಂಡ ಅಜಯ್ ಲೋಧಾ ಅವರು ಕೊನೆಗೂ ಸಾವನ್ನು ಗೆಲ್ಲಲು ಸಾಧ್ಯವಾಗದೆ ಕೊನೆಯುಸಿರೆಳೆದಿದ್ದಾರೆ.

ಅಮೆರಿಕನ್ ಅಸೋಸಿಯೇಷನ್ ​​ಆಫ್ ಫಿಸಿಶಿಯನ್ಸ್ ಆಫ್ ಇಂಡಿಯನ್ ಆರಿಜಿನ್(ಎಎಪಿಐ) ಮಾಜಿ ಅಧ್ಯಕ್ಷ ಲೋಧಾ, ಕ್ಲೀವ್ಲ್ಯಾಂಡ್ ಕ್ಲಿನಿಕ್ನಲ್ಲಿ ನವೆಂಬರ್ 21ರಂದು ಮೃತಪಟ್ಟಿದ್ದಾರೆ. 58 ವರ್ಷದ ಅಜಯ್ ಲೋಧಾ ಅವರು ಪತ್ನಿ ಸ್ಮಿತಾ, ಮಗ ಅಮಿತ್ ಮತ್ತು ಮಗಳು ಶ್ವೇತಾಳನ್ನು ಅಗರಲಿದ್ದಾರೆ. 

ನ್ಯೂಯಾರ್ಕ್ನ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಟ್ವೀಟ್ ಮಾಡಿದ್ದು, "ಭಾರತೀಯ-ಅಮೇರಿಕನ್ ಸಮುದಾಯದ ಪ್ರಮುಖ ಸದಸ್ಯರಾದ ಡಾ. ಅಜಯ್ ಲೋಧಾ ಅವರ ನಿಧನದ ಬಗ್ಗೆ ತುಂಬಾ ದುಃಖವಾಗಿದೆ. ಅವರು ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತಾನೆ. ಅವರ ನಮ್ರತೆ, ದಯೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ.

ಎಎಪಿಐ ಅಧ್ಯಕ್ಷ ಸುಧಾಕರ್ ಜೊನ್ನಲಗಡ್ಡ ಅವರು “ದೂರದೃಷ್ಟಿಯ ನಾಯಕ” ರವರ ನಿಧನಕ್ಕೆ ಆಘಾತ ಮತ್ತು ದುಃಖ ವ್ಯಕ್ತಪಡಿಸಿದರು. ಅವರು ಸಾವು "ಎಎಪಿಐ ಇತಿಹಾಸದಲ್ಲಿ ಕರಾಳ ದಿನ" ಎಂದು ಹೇಳಿದರು.

2008ರಲ್ಲಿ, ಲೋಧಾ ಅವರಿಗೆ ನರ್ಗಿಸ್ ದತ್ ಸ್ಮಾರಕ ಪ್ರತಿಷ್ಠಾನದ ವರ್ಷದ ವೈದ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. 2016ರಲ್ಲಿ ಪ್ರತಿಷ್ಠಿತ ಎಲ್ಲಿಸ್ ಐಲ್ಯಾಂಡ್ ಮೆಡಲ್ ಆಫ್ ಆನರ್ ಗೌರವಕ್ಕೆ ಪಾತ್ರರಾಗಿದ್ದ ಅವರು 2015-16ರಲ್ಲಿ ಎಎಪಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಲೋಧಾ ಅವರ ನಿಧನಕ್ಕೆ ಜೈಪುರ ಫುಟ್ ಯುಎಸ್ಎ ಅಧ್ಯಕ್ಷ ಪ್ರೇಮ್ ಭಂಡಾರಿ ಸಂತಾಪ ವ್ಯಕ್ತಪಡಿಸಿದರು. ಲೋದಾ ಅವರು "ಆತ್ಮೀಯ ಸ್ನೇಹಿತ" ಮತ್ತು "ಮಹಾನ್ ಮಾನವ" ಎಂದು ವಿವರಿಸಿದರು.

SCROLL FOR NEXT