ವಿದೇಶ

ಕೋವಿಡ್-19: ವಿಶ್ವದಾದ್ಯಂತ ಕೊರೋನಾ ಪ್ರಕರಣಗಳ ಸಂಖ್ಯೆ 6 ಕೋಟಿ

Manjula VN

ವಾಷಿಂಗ್ಟನ್: ವಿಶ್ವದಾದ್ಯಂತ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 6 ಕೋಟಿ 08 ಲಕ್ಷ ದಾಟಿದೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾವೈರಸ್ ಸಂಪನ್ಮೂಲ ಕೇಂದ್ರದ ಇತ್ತೀಚಿನ ಮಾಹಿತಿಯಂತೆ, ಜಾಗತಿಕವಾಗಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 1,429,643ರಷ್ಟಿದ್ದು, ಚೇತರಿಸಿಕೊಂಡವರ ಸಂಖ್ಯೆ 38,983,715ರಷ್ಟಿದೆ.

ಅತಿ ಹೆಚ್ಚು ದೃಢಪಟ್ಟ ಕೊರೊನಾವೈರಸ್ ಪ್ರಕರಣಗಳಲ್ಲಿ, ಅಮೆರಿಕ, ಭಾರತ ಮತ್ತು ಬ್ರೆಜಿಲ್ ಮೊದಲ ಮೂರು ರಾಷ್ಟ್ರಗಳಾಗಿವೆ. ಫ್ರಾನ್ಸ್ ನಾಲ್ಕನೇ ಮತ್ತು ರಷ್ಯಾ ಐದನೇ ಸ್ಥಾನದಲ್ಲಿದೆ.

ಅಮೆರಿಕದಲ್ಲಿ ಈವರೆಗೆ 12,877,783 ಕೋಟಿಗೂ ಆಧಿಕ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ವಿಶ್ವದ ಎಲ್ಲಾ ದೇಶಗಳ ಒಟ್ಟು ಸಾವಿನ ಸಂಖ್ಯೆಗಿಂತ ಅಮೆರಿಕದಲ್ಲಿ ಅತಿ ಹೆಚ್ಚು ಕೋವಿಡ್-19 ಸಾವಿನ ಸಂಖ್ಯೆಯನ್ನು ಹೊಂದಿದೆ. (263,394 ಕ್ಕಿಂತ ಹೆಚ್ಚು).

SCROLL FOR NEXT