ವಿದೇಶ

73 ದಶಲಕ್ಷಕ್ಕೂ ಅಧಿಕ ಜನರಿಂದ ಅಮೆರಿಕ ಅಧ್ಯಕ್ಷೀಯ ಚರ್ಚೆ ವೀಕ್ಷಣೆ: 2016ಕ್ಕೆ ಹೋಲಿಸಿದರೆ ಶೇ.13 ರಷ್ಟು ಕಡಿಮೆ!

Nagaraja AB

ವಾಷಿಂಗ್ಟನ್:  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಡೆಮಾಕ್ರಟಿಕ್ ಪಕ್ಷದ ಪ್ರತಿಸ್ಪರ್ಧಿ ಜೋ ಬಿಡೆನ್ ನಡುವಿನ ಮೊದಲ ಅಧ್ಯಕ್ಷೀಯ ಚರ್ಚೆಯನ್ನು 73 ಮಿಲಿಯನ್ ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಎಂದು ನೀಲ್ಸನ್ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

‘ಸೆ 29ರಂದು ಮಂಗಳವಾರ ನಡೆದ 2020ರ ಅಧ್ಯಕ್ಷೀಯ ಚುನಾವಣೆಯ ಮೊದಲ ಚರ್ಚೆಯನ್ನು ವೀಕ್ಷಿಸಲು ಅಂದಾಜು 73.1 ದಶಲಕ್ಷ ಜನರು ಟ್ಯೂನ್ ಮಾಡಿದ್ದಾರೆ  ಎಂದು ಪ್ರಕಟಣೆ ತಿಳಿಸಿದೆ.

ಮಂಗಳವಾರ ನಡೆದ ಅಧ್ಯಕ್ಷೀಯ ಚರ್ಚೆಯ ವೀಕ್ಷಕರ ಸಂಖ್ಯೆ ಹಿಂದೆ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಎದುರಾಳಿ ಹಿಲರಿ ಕ್ಲಿಂಟನ್ ಅವರ ನಡುವಿನ 2016ರ ಮೊದಲ ಚರ್ಚೆಗಿಂತ ಶೇ 13 ರಷ್ಟು ಕಡಿಮೆಯಾಗಿದೆ.

2016ರ ಸೆ 26 ರಂದು ಟ್ರಂಪ್ ಮತ್ತು ಕ್ಲಿಂಟನ್ ನಡುವಿನ ಮೊದಲ ಚರ್ಚೆಯನ್ನು 8 ಕೋಟಿ 40 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದರು.
ಮುಂದಿನ ಎರಡು ಅಧ್ಯಕ್ಷೀಯ ಚರ್ಚೆಗಳು ಅ 15 ರಂದು ಫ್ಲೋರಿಡಾದಲ್ಲಿ ಮತ್ತು ಅ 22 ರಂದು ಟೆನ್ನೆಸ್ಸಿಯಲ್ಲಿ ನಡೆಯಲಿವೆ. ಉಪಾಧ್ಯಕ್ಷ ಅಭ್ಯರ್ಥಿಗಳ ಏಕೈಕ ಚರ್ಚೆಯನ್ನು ಅ 7 ರಂದು ಉಟಾವದಲ್ಲಿ ನಿಗದಿಪಡಿಸಲಾಗಿದೆ.

SCROLL FOR NEXT