ವಿದೇಶ

ಯುದ್ಧ ಭೂಮಿಯಾಗಿ ಮಾರ್ಪಟ್ಟ ನಾಗೋರ್ನೊ-ಕರಾಬಖ್‌: ಅಜರ್ ಬೈಜಾನ್‍ನ 3,000ಕ್ಕೂ ಹೆಚ್ಚು ಸೈನಿಕರು ಸಾವು

Vishwanath S

ಯೆರೆವಾನ್: ಸಂಘರ್ಷ ಪೀಡಿತ ನಾಗೋರ್ನೊ-ಕರಾಬಖ್ ನಲ್ಲಿ ಯುದ್ಧಗಳು ಭುಗಿಲೆದ್ದಾಗಿನಿಂದ ಅಜರ್ ಬೈಜಾನ್ ಸೇನೆ 3,000 ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ ಎಂದು ಸ್ವಯಂ ಘೋಷಿತ ಗಣರಾಜ್ಯ ಅರ್ಟ್ ಸಖ್ ಅಧ್ಯಕ್ಷರ ಪತ್ರಿಕಾ ಕಾರ್ಯದರ್ಶಿ ಶನಿವಾರ ತಿಳಿಸಿದ್ದಾರೆ.

ಅಜರ್ ಬೈಜಾನ್ ಈಗಾಗಲೇ 3,000 ಸೈನಿಕರನ್ನು ಕಳೆದುಕೊಂಡಿದೆ ಎಂದು ಗುಪ್ತಚರ ದತ್ತಾಂಶಗಳಿಂದ ಗೊತ್ತಾಗಿದೆ. ಹೆಚ್ಚಿನ ಮೃತದೇಹಗಳು ತಟಸ್ಥ ವಲಯದಲ್ಲೇ ಉಳಿದಿವೆ. ಇವುಗಳ ಸ್ಥಳಾಂತರಕ್ಕೆಗೆ ಏನೂ ಮಾಡಲಾಗುತ್ತಿಲ್ಲ ಎಂದು ವಾಗ್ರಾಮ್ ಪೊಗೊಸ್ಯಾನ್ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದಿದ್ದಾರೆ.

ಅಜರ್ ಬೈಜಾನ್ ಮತ್ತು ಅರ್ಮೇನಿಯಾ ನಡುವಿನ ವಿವಾದಿತ ನಾಗೋರ್ನೊ-ಕರಾಬಖ್ ಪ್ರಾಂತ್ಯ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಈ ಪ್ರಾಂತ್ಯದ ಏಳು ಜಿಲ್ಲೆಗಳು ಅಜರ್ ಬೈಜಾನ್ ಗೆ ಸೇರಿರುವುದಾಗಿ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿದ್ದರೂ, ಸ್ವಯಂ ಘೋಷಿತ ಅರ್ಟ್ ಸಖ್ ಈ ಪ್ರದೇಶವನ್ನು ನಿಯಂತ್ರಣದಲ್ಲಿಟ್ಟುಕೊಂಡಿದೆ. 

ಕಳೆದ ವಾರ ಅಜರ್ ಬೈಜಾನ್ ನ ಒಂದು ಹೆಲಿಕಾಪ್ಟರ್ ಮತ್ತು ಮೂರು ಡ್ರೋಣ್ ಗಳನ್ನು ಅರ್ಮೇನಿಯಾ ಹೊಡೆದುರುಳಿಸಿದ ನಂತರ ಘರ್ಷಣೆ ತೀವ್ರಗೊಂಡಿದೆ.

SCROLL FOR NEXT