ವಿದೇಶ

ಟ್ರಂಪ್ ಹೇಳಿದರೆ ನಾನು ಕೊರೋನಾಗೆ ಲಸಿಕೆ ತೆಗೆದುಕೊಳ್ಳುವುದಿಲ್ಲ: ಕಮಲಾ ಹ್ಯಾರಿಸ್

Srinivas Rao BV

ವಾಷಿಂಗ್ ಟನ್: ಕೊರೋನಾ ನಿಭಾಯಿಸುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಸಂಪೂರ್ಣವಾಗಿ ವಿಫಲಗೊಂಡಿದ್ದು, ಇದು ಅಮೆರಿಕ ಇತಿಹಾಸದಲ್ಲೇ ಅತಿ ದೊಡ್ಡ ವೈಫಲ್ಯ ಎಂದು ಡೆಮಾಕ್ರೆಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ರಿಪಬ್ಲಿಕನ್ ಪಕ್ಷದ ಆಭ್ಯರ್ಥಿ, ಹಾಲಿ ಉಪಾಧ್ಯಕ್ಷ ಮೈಕ್ ಪೆನ್ಸ್ ಜೊತೆ ಚರ್ಚೆ ನಡೆಸಿದ ವೇಳೆ ಕಮಲಾ ಹ್ಯಾರಿಸ್ ಅಮೆರಿಕದಲ್ಲಿ ಲಕ್ಷಾಂತರ ಜನ ಸಾವನ್ನಪ್ಪಿದ್ದು ಕೊರೋನಾ ನಿಭಾಯಿಸುವಲ್ಲಿ ಟ್ರಂಪ್ ಆಡಳಿತ ವಿಫಲಗೊಂಡಿದೆ.

ಟ್ರಂಪ್ ಆಡಳಿತದ ಅಸಮರ್ಥತೆಯಿಂದಾಗಿ ಕೋವಿಡ್-19 ಗೆ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ. ಆರ್ಥಿಕತೆ ಜರ್ಜರಿತಗೊಂಡಿದೆ ಎಂದು ಸಾಲ್ಟ್ ಲೇಕ್ ಸಿಟಿ ನಡೆದ ಚರ್ಚೆಯಲ್ಲಿ ಕಮಲಾ ಹ್ಯಾರೀಸ್ ಹೇಳಿದ್ದಾರೆ.

ಕಾಂಟ್ಯಾಕ್ಟ್ ಟ್ರೇಸಿಂಗ್, ಟೆಸ್ಟಿಂಗ್, ಲಸಿಕೆಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಬಿಡೆನ್ ಅವರ ಉದ್ದೇಶ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಹೇಳಿದರೆ ನಾನು ಕೊರೋನಾಗೆ ಲಸಿಕೆ ತೆಗೆದುಕೊಳ್ಳುವುದಿಲ್ಲ, ವಿಜ್ಞಾನಿಗಳು ಹೇಳಿದರೆ ಮಾತ್ರ ಲಸಿಕೆಯನ್ನು ತೆಗೆದುಕೊಳ್ಳುತ್ತೇನೆ ಎಂದೂ ಕಮಲಾ ಹ್ಯಾರಿಸ್ ಹೇಳಿದ್ದಾರೆ.

SCROLL FOR NEXT