ವಿದೇಶ

ಮೈಕ್ರೋಸಾಫ್ಟ್ ನಲ್ಲಿ ಕೆಲವು ಉದ್ಯೋಗಿಗಳಿಗೆ ಶಾಶ್ವತ ವರ್ಕ್ ಫ್ರಮ್ ಹೋಮ್ ಸೌಲಭ್ಯ!

Srinivas Rao BV

ವಾಷಿಂಗ್ ಟನ್: ಕೆಲವು ಉದ್ಯೋಗಿಗಳಿಗೆ ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ಸೌಲಭ್ಯ ಕಲ್ಪಿಸಲು ಮೈಕ್ರೋಸಾಫ್ಟ್ ಸಂಸ್ಥೆ ಮುಂದಾಗಿದೆ. 

ಕೋವಿಡ್-19 ನಿಂದಾಗಿ ಉಂಟಾಗಿರುವ ಪರಿಸ್ಥಿತಿಯಲ್ಲಿ ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನು ಜನವರಿ ತಿಂಗಳವರೆಗೂ ವಿಸ್ತರಣೆ ಮಾಡುವುದಾಗಿ ಮೈಕ್ರೋಸಾಫ್ಟ್ ತಿಳಿಸಿದ್ದು, ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವನ್ನು ಶಾಶ್ವತವಾಗಿ ಬಳಕೆ ಮಾಡಿಕೊಳ್ಳಲು ಬಯಸುವ ಉದ್ಯೋಗಿಗಳು ಮೇಲಧಿಕಾರಿಗಳ ಅನುಮತಿ ಪಡೆದು ಶಾಶ್ವತವಾಗಿ ಮನೆಯಿಂದಲೇ ಕಾರ್ಯನಿರ್ವಹಿಸಬಹುದಾಗಿದೆ. ಆದರೆ ಅವರು ತಮ್ಮ ಕಚೇರಿಯಲ್ಲಿ ಬಳಕೆ ಮಾಡುವ ಜಾಗವನ್ನು ಬಿಟ್ಟುಕೊಡಬೇಕಾಗುತ್ತದೆ.

ಕೋವಿಡ್-19 ನಾವು ಜೀವನ ನಡೆಸುವುದು ಕೆಲಸ ಮಾಡುವುದರ ಕುರಿತು ಹೊಸ ದಿಕ್ಕಿನಲ್ಲಿ ಯೋಚನೆ ಮಾಡುವಂತೆ ಮಾಡಿದೆ. ಉದ್ಯೋಗಿಗಳಿಗೆ ಸಾಧ್ಯವಾದಷ್ಟೂ ಹೆಚ್ಚಿನ ಅವಕಾಶಗಳನ್ನು, ಸೌಲಭ್ಯಗಳನ್ನು ಕಲ್ಪಿಸಲಿದ್ದೇವೆ ಎಂದು ಮೈಕ್ರೋಸಾಫ್ಟ್ ನ ಚೀಫ್ ಪೀಪಲ್ ಆಫೀಸರ್ ಕ್ಯಾಥ್ಲೀನ್ ಹೋಗನ್ ಹೇಳಿದ್ದಾರೆ.

ತಾತ್ಕಾಲಿಕವಾಗಿ ಅಮೆರಿಕಾದಲ್ಲಿರುವ ಮೈಕ್ರೋಸಾಫ್ಟ್ ನ ಕಚೇರಿಗಳನ್ನು ತೆರೆಯದಿರಲು ಸಂಸ್ಥೆ ನಿರ್ಧರಿಸಿದೆ. ಮನೆಯಿಂದಲೇ ಕೆಲಸ ನಿರ್ವಹಿಸುವವರಿಗೆ ವೇತದಲ್ಲಿಯೂ ಬದಲಾವಣೆಯಾಗಲಿದೆ ಎಂದು ತಿಳಿದುಬಂದಿದೆ. ಜೂನ್ ತಿಂಗಳಾಂತ್ಯಕ್ಕೆ 163,000 ಜನರನ್ನು ನೇಮಕ ಮಾಡಿಕೊಂಡಿದೆ. ಫೇಸ್ ಬುಕ್ ಸೇರಿದಂತೆ ಹಲವು ಸಂಸ್ಥೆಗಳು ಈಗಾಗಲೇ ವರ್ಕ್ ಫ್ರಮ್ ಹೋಮ್ ಸೌಲಭ್ಯವನ್ನು ಶಾಶ್ವತವಾಗಿ ನೀಡಿದೆ.

SCROLL FOR NEXT