ಕ್ಸಿ- ಜಿನ್ ಪಿಂಗ್ 
ವಿದೇಶ

ಯುದ್ಧದ ಸಿದ್ಧತೆ ಕಡೆಗೆ ಗಮನ ಹರಿಸುವಂತೆ ಚೀನಾ ಸೇನೆಗೆ ಕ್ಸಿ-ಜಿನ್ ಪಿಂಗ್ ಸೂಚನೆ

ಆ ಹೈಲರ್ಟ್ ಆಗಿ ಇರುವಂತೆ ಹಾಗೂ ಯುದ್ಧದ ಸಿದ್ದತೆ ಕಡೆಗೆ ಗಮನ ಹರಿಸುವಂತೆ ಚೀನಾ ಸೇನೆಗೆ ಆ ರಾಷ್ಟ್ರದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಹೇಳಿಕೆ ನೀಡಿರುವ ಬಗ್ಗೆ ವರದಿಯಾಗಿದೆ.

ಬೀಜಿಂಗ್ : ಆ ಹೈಲರ್ಟ್ ಆಗಿ ಇರುವಂತೆ ಹಾಗೂ ಯುದ್ಧದ ಸಿದ್ದತೆ ಕಡೆಗೆ ಗಮನ ಹರಿಸುವಂತೆ ಚೀನಾ ಸೇನೆಗೆ ಆ ರಾಷ್ಟ್ರದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಹೇಳಿಕೆ ನೀಡಿರುವ ಬಗ್ಗೆ ವರದಿಯಾಗಿದೆ.

ಕಡಲ ತೀರದ ತೀರದ ಕಾರ್ಪ್ಸ್ ಕಮಾಂಡರ್ಸ್ ಜೊತೆಗಿನ ಸಂವಾದದ ವೇಳೆಯಲ್ಲಿ ಕ್ಸಿ- ಜಿನ್ ಪಿಂಗ್ ಈ ರೀತಿಯ ಹೇಳಿಕೆ ನೀಡಿದ್ದು, ಕೌಶಲ್ಯಗಳನ್ನು ಹೆಚ್ಚಿಸಲು ಹೆಚ್ಚು ವಾಸ್ತವಿಕ ಯುದ್ಧ ತರಬೇತಿಯನ್ನು ಕೈಗೊಳ್ಳಬೇಕು ಮತ್ತು ಯುದ್ಧ ಸಿದ್ಧಾಂತಗಳು, ತರಬೇತಿ ವಿಧಾನಗಳು ಮತ್ತು ಕಾರ್ಯ ಯೋಜನೆಗಳ ವಿಷಯದಲ್ಲಿ ಹೊಸತನವನ್ನು ಸಾಧಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಆದಾಗ್ಯೂ, ಕೆಲ ದಿನಗಳಿಂದಲೂ ಚೀನಾದೊಂದಿಗೆ ಗಡಿ ವಿವಾದ ಇರುವ ಭಾರತಕ್ಕೆ ಈ ರೀತಿಯ ಹೇಳಿಕೆ ನೀಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಬುಧವಾರ ಸಮುದ್ರ ತೀರದ- ಮರೀನ್ ಕಾರ್ಪ್ಸ್ ಕೇಂದ್ರ ಕಚೇರಿಗೆ ಮೊದಲ ಬಾರಿಗೆ ಭೇಟಿ ನೀಡಿದ ಕ್ಸಿ- ಜಿನ್ ಪಿಂಗ್, ಚೀನಾದ ಸಾಗರೋತ್ತರ ಹಿತಾಸಕ್ತಿ ಮತ್ತು ಕಡಲ ತೀರದ ಮೇಲಿನ ಹಕ್ಕುಗಳು ಹಾಗೂ ದೇಶದ ಭದ್ರತೆ ಮತ್ತು ಏಕತೆಯನ್ನು ರಕ್ಷಿಸುವ ಮಹತ್ವದ ಹೊಣೆಗಾರಿಕೆ ಕಡಲ ತೀರದ ಸೇನೆಯ ಆದ್ಯತೆಯಾಗಬೇಕೆಂದು ಅವರು ಒತ್ತಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT