ವಿದೇಶ

ಪ್ರಣಬ್ ಮುಖರ್ಜಿ ಸಮರ್ಪಿತ ಸಾರ್ವಜನಿಕ ಸೇವಕರಾಗಿದ್ದರು: ಜೋ ಬಿಡೆನ್

Srinivasamurthy VN

ವಾಷಿಂಗ್ಟನ್: ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಮರ್ಪಿತ ಸಾರ್ವಜನಿಕ ಸೇವಕರಾಗಿದ್ದರು ಎಂದು ಅಮೆರಿಕದ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.

ಪ್ರಣಬ್ ಮುಖರ್ಜಿ ಅವರ ಸಾವಿನ ವಿಚಾರದ ಕುರಿತು ಟ್ವೀಟ್ ಮಾಡಿರುವ ಜೋ ಬಿಡೆನ್ ಅವರು, 'ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಾರ್ವಜನಿಕ ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ನಮ್ಮ ಎರಡು ರಾಷ್ಟ್ರಗಳ ಮಹತ್ವವನ್ನು ಆಳವಾಗಿ  ನಂಬಿದ್ದರು. ಜಿಲ್ ಮತ್ತು ನಾನು ಅವರ ನಿಧನವನ್ನು ಕೇಳಿ ದುಃಖಿತರಾಗಿದ್ದೇವೆ. ನಮ್ಮ ಪ್ರಾರ್ಥನೆಗಳು ಅವರ ಪ್ರೀತಿಪಾತ್ರರಿಗೆ ಮತ್ತು ಭಾರತೀಯ ಜನರಿಗಾಗಿದೆ ಎಂದು ಹೇಳಿದ್ದಾರೆ.

ಭಾರತದ ಅತ್ಯಂತ ಗೌರವಾನ್ವಿತ ರಾಜಕಾರಣಿಗಳಲ್ಲಿ ಒಬ್ಬರಾದ ಪ್ರಣಬ್ ಮುಖರ್ಜಿ ಸೋಮವಾರ ಸಂಜೆ ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾದರು. ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದ ಅವರು ಈ ತಿಂಗಳ ಆರಂಭದಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆಯ ನಂತರ ಕೋಮಾದಲ್ಲಿದ್ದರು. ಪ್ರಣಬ್ ಮುಖರ್ಜಿ 2012  ರಿಂದ 2017 ರವರೆಗೆ ಭಾರತದ ರಾಷ್ಟ್ರಪತಿಯಾಗಿದ್ದರು. ಅವರಿಗೆ 2019 ರಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಮತ್ತು 2008 ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸಲಾಯಿತು.

SCROLL FOR NEXT