ವಿದೇಶ

ಅಮೆರಿಕ: ಟಿಕ್ ಟಾಕ್ ನಿಷೇಧದ ವಿರುದ್ಧ ಧ್ವನಿ ಎತ್ತಿದ ಇನ್ಸ್ಟಾಗ್ರಾಮ್ ಮುಖ್ಯಸ್ಥ! 

Srinivasamurthy VN

ಅಮೆರಿಕಾದಲ್ಲಿ ತನ್ನ ಪ್ರತಿಸ್ಪರ್ಧಿ ಟಿಕ್ ಟಾಕ್ ನ್ನು ನಿಷೇಧ ಮಾಡಿದರೆ ಅದಕ್ಕೆ ಇನ್ಸ್ಟಾಗ್ರಾಮ್ ಯಾಕೆ ಧ್ವನಿ ಎತ್ತಬೇಕು ಎಂಬ ಪ್ರಶ್ನೆ ಶೀರ್ಷಿಕೆ ನೋಡಿ ನಿಮ್ಮ ಮನಸಲ್ಲಿ ಮೂಡುವುದು ಸಹಜ. ಆದರೆ ಈ ರೀತಿ ಪ್ರತಿಸ್ಪರ್ಧಿಗಳನ್ನು ನಿಷೇಧಿಸುವುದು ಸರಿಯಲ್ಲ ಎನ್ನುತ್ತಿದ್ದಾರೆ ಇನ್ಸ್ಟಾಗ್ರಾಮ್ ನ ಮುಖ್ಯಸ್ಥ ಆಡಮ್ ಮೊಸ್ಸೆರಿ.

ಸಿಎನ್ ಬಿಸಿ ಸಂದರ್ಶನದಲ್ಲಿ ಮಾತನಾಡಿರುವ ಆಡಮ್ ಮೊಸ್ಸೆರಿ, ಕಿರು ವಿಡಿಯೋಗಳ ವೇದಿಕೆಯನ್ನು ಅಮೆರಿಕಾದಲ್ಲಿ ನಿಷೇಧ ಮಾಡುವುದು ತಪ್ಪು ಪೂರ್ವನಿದರ್ಶನಕ್ಕೆ ದಾರಿ ಮಾಡಿಕೊಡಲಿದೆ ಎಂದಿದ್ದಾರೆ.

ಟಿಕ್ ಟಾಕ್ ನ್ನು ಅಮೆರಿಕಾದಲ್ಲಿ ಮಾರಾಟ ಮಾಡದೇ ಇದ್ದಲ್ಲಿ ನಿಷೇಧ ಮಾಡುವುದಾಗಿ ಎಚ್ಚರಿಕೆ ನೀಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದಕ್ಕಾಗಿ ಗಡುವು ವಿಧಿಸಿದ್ದಾರೆ.

ಟಿಕ್ ಟಾಕ್ ನಿಷೇಧಕ್ಕೆ ಮುಂದಾಗುತ್ತಿರುವ ತೀವ್ರವಾದ ಕ್ರಮದಿಂದ ತಾವೇನು ಉತ್ಸಾಹಭರಿತರಾಗಿಲ್ಲ ಎಂದು ಹೇಳಿರುವ ಆಡಮ್ ಮೊಸ್ಸೆರಿ, ಈ ರೀತಿಯ ಕ್ರಮಗಳಿಂದ ಫೇಸ್ ಬುಕ್ ಒಡೆತನದ ಇನ್ಸ್ಟಾಗ್ರಾಮ್ ಗೆ ಲಾಭವಾಗುವುದರ ಬದಲು ಅಪಾಯವೇ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

ದೇಶಗಳು ಈ ರೀತಿಯಾಗಿ ತಮ್ಮೊಳಗೇ ಪ್ರತ್ಯೇಕವಾದ ಇಂಟರ್ ನೆಟ್ ವೇದಿಗೆಳನ್ನು ಹೊಂದಲು ಪ್ರಾರಂಭಿಸಿದರೆ, ಅಲ್ಪಾವಧಿಯ ಪ್ರಯೋಜಗಳಿಂದ, ಸಮಸ್ಯೆಗಳೇ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.

ಇನ್ಸ್ಟಾಗ್ರಾಮ್ ಸಹ ಟಿಕ್ ಟಾಕ್ ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ರೀಲ್ಸ್ ಎಂಬ ಕಿರು ವಿಡಿಯೋಗಳ ವೇದಿಕೆಯನ್ನು ಪ್ರಾರಂಭಿಸಿತ್ತು.

ಇದೇ ವೇಳೆ ಭಾರತದಲ್ಲಿ ಟಿಕ್ ಟಾಕ್ ನಿಷೇಧಗೊಂಡಾಗಿನಿಂದಲೂ ತಮ್ಮ ಸಂಸ್ಥೆ ವೇಗಗತಿಯ ಬೆಳವಣಿಗೆ ದಾಖಲಿಸುತ್ತಿದೆ ಎಂದು ಹೇಳಿದ್ದಾರೆ. 

SCROLL FOR NEXT