ವಿದೇಶ

ಟ್ರಂಪ್ ಸೇರಿ ಅಂತಾರಾಷ್ಟ್ರೀಯ ಮನವಿ ಕಡಗಣಿಸಿ ಕುಸ್ತಿಪಟುವಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಿದ ಇರಾನ್

Vishwanath S

ಟೆಹರಾನ್: ಇರಾನ್ ಸರ್ಕಾರ ಕೊನೆಗೂ ಕುಸ್ತಿ ಕ್ರೀಡಾಪಟುಗೆ ಮರಣ ದಂಡನೆ ಶಿಕ್ಷೆ ಜಾರಿಗೊಳಿಸಿದೆ.

ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಭದ್ರತಾ ಸಿಬ್ಬಂದಿಯೊಬ್ಬರನ್ನು ಹತ್ಯೆ ಮಾಡಿದ್ದ ಆರೋಪದ ಮೇಲೆ ಈ ಶಿಕ್ಷೆ ವಿಧಿಸಲಾಗಿದೆ. 

ನವೀದ್ ಅಫ್ಕಾರಿ(27) ಎಂಬ ಕುಸ್ತಿ ಕ್ರೀಡಾಪಟುವಿಗೆ ಮರಣ ಶಿಕ್ಷೆ ವಿಧಿಸಿದ್ದಾರೆ. 2018ರಲ್ಲಿ ನಡೆದಿದ್ದ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನವೀದ್ ಭದ್ರತಾ ಗಾರ್ಡ್ ಒಬ್ಬರನ್ನು ಹತ್ಯೆ ಮಾಡಿದ್ದ ಎಂಬ ಆರೋಪ ಎದುರಿಸುತ್ತಿದ್ದರು.

ಇನ್ನು ನವೀದ್ ಅಫ್ಕಾರಿಗೆ ಗಲ್ಲು ಶಿಕ್ಷೆಗೆ ಗುರಿ ಮಾಡದಂತೆ ಅಮೆರಿಕಾ ಅಧ್ಯಕ್ಷ ಸೇರಿದಂತೆ ಹಲವು ದೇಶಗಳು ಮನವಿ ಮಾಡಿತ್ತು.

SCROLL FOR NEXT