ವಿದೇಶ

ಭಾರತ ಸರ್ಕಾರದ ನೆಟವರ್ಕ್ಸ್ ಸೇರಿದಂತೆ ಜಗತ್ತಿನಾದ್ಯಂತ ಮೆಘಾ ಹ್ಯಾಕಿಂಗ್: ಚೀನಾದ ಐವರು ಪ್ರಜೆಗಳ ಮೇಲೆ ಅಮೆರಿಕಾ ಆರೋಪ

Nagaraja AB

ವಾಷಿಂಗ್ಟನ್: ಚೀನಾದ ಐವರು ನಾಗರಿಕರು ಭಾರತ ಸರ್ಕಾರದ ನೆಟವರ್ಕ್ಸ್ ಸೇರಿದಂತೆ ಜಗತ್ತಿನಾದ್ಯಂತ 100 ಕಂಪನಿಗಳು ಮತ್ತು ಸಂಸ್ಥೆಗಳನ್ನು ಹ್ಯಾಕಿಂಗ್  ಮೌಲ್ಯಯುತ ಸಾಪ್ಟ್ ವೇರ್ ಮಾಹಿತಿ ಮತ್ತು ವ್ಯವಹಾರ ಬುದ್ದಿಮತೆಯನ್ನು ಕದ್ದಿದ್ದಾರೆ ಎಂದು ಅಮೆರಿಕಾದ ನ್ಯಾಯಾಂಗ ಇಲಾಖೆ ಆರೋಪಿಸಿದೆ.

ಚೀನಾದ ಐದು ಪ್ರಜೆಗಳಿಗೆ ಕಂಪ್ಯೂಟರ್ ಹ್ಯಾಕಿಂಗ್ ಆರೋಪಿಸಿ ಮತ್ತು ಇಬ್ಬರು ಮಲೇಷ್ಯಾದ ಪ್ರಜೆಗಳಿಗೆ ಶುಲ್ಕ ವಿಧಿಸುವ ವಿಷಯದಲ್ಲಿ ಮೂರು ದೋಷಾರೋಪಣೆಗಳನ್ನು ಅನ್‌ಸೀಲ್ ಮಾಡಲಾಗಿದೆ ಎಂದು ಡೆಪ್ಯೂಟಿ ಯುಎಸ್ ಅಟಾರ್ನಿ ಜನರಲ್ ಜೆಫ್ರಿ ರೋಸೆನ್ ಬುಧವಾರ ಘೋಷಿಸಿದ್ದಾರೆ.

ಕಂಪ್ಯೂಟರ್ ಹ್ಯಾಕಿಂಗ್ ಗೆ ಸಂಬಂಧಿಸಿದಂತೆ ಚೀನಾದ ಐವರು ಪ್ರಜೆಗಳು ಮತ್ತು  ಇಂತಹ ಹ್ಯಾಕರ್ ಗಳಿಗೆ ನೆರವು ನೀಡಿದ ಆರೋಪದ ಮೇಲೆ ಮಲೇಷ್ಯಾದ ಇಬ್ಬರು ನಾಗರಿಕರ ಮೇಲೆ ಪ್ರಕರಣ ದಾಖಲಿಸಿ ಅಮೆರಿಕ ಉಪ ಅಟಾರ್ನಿ ಜನರಲ್ ಜೆಫ್ರಿ ರೋಸೆನ್ ಬುಧವಾರ ಘೋಷಿಸಿದ್ದಾರೆ.

ಅಮೆರಿಕಾದ ನ್ಯಾಯ ಇಲಾಖೆ ಪ್ರಕಾರ ಮಲೇಷ್ಯಾದ ನಾಗರಿಕರನ್ನು ಭಾನುವಾರ ಬಂಧಿಸಲಾಗಿದ್ದು, ಚೀನೀ ಪ್ರಜೆಗಳು ಪರಾರಿಯಾಗಿದ್ದಾರೆಂದು ಘೋಷಿಸಲಾಗಿದೆ. ಚೀನಾದ ನಾಗರಿಕಿಂದ ಸೈಬರ್ ದಾಳಿಯನ್ನು ಪ್ರಮುಖ ಅಸ್ತ್ರವನ್ನಾಗಿ ಅಮೆರಿಕಾ ನ್ಯಾಯಾಂಗ ಇಲಾಖೆ ಬಳಸಿಕೊಳ್ಳುತ್ತಿದೆ.

ಚೀನಾದ ಹೊರಗಡೆ ಹ್ಯಾಕಿಂಗ್ ಮಾಡುವ ಸೈಬರ್ ಅಪರಾಧಿಗಳನ್ನು ಸುರಕ್ಷಿತಗೊಳಿಸುತ್ತಾ   ಚೀನಾದ ಕಮ್ಯೂನಿಸ್ಟ್ ಪಕ್ಷ ವಿಭಿನ್ನ ಮಾರ್ಗವನ್ನು ಅನುಸುರಿಸುತ್ತಿರುವುದು ವಿಷಾದನೀಯ.   ಬೌದ್ಧಿಕ ಆಸ್ತಿಯನ್ನು ಕದಿಯುವ ಮೂಲಕ ಚೀನಾ ದೇಶಕ್ಕೆ ಸಹಾಯ ಮಾಡಲಾಗುತ್ತಿದೆ ಎಂದು ಉಪ ಜನರಲ್ ಹೇಳಿದ್ದಾರೆ.

ಚೀನಾದ ಐವರು ಆರೋಪಿಗಳೊಂದಿಗೆ ಮಲೇಷಿಯಾದ ಇಬ್ಬರು ಆರೋಪಿಗಳು ಸೇರಿಕೊಂಡು   ಸಂಪನ್ಮೂಲಗಳನ್ನು ತಮ್ಮ ಅಕ್ರಮ ವೆಬ್‌ಸೈಟ್ ಮೂಲಕ ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ ಎಂದು ರೋಸೆನ್ ಆರೋಪಿಸಿದ್ದಾರೆ.

SCROLL FOR NEXT