ವಿದೇಶ

ವಿಶ್ವಾದ್ಯಂತ 10 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ: ಅಮೆರಿಕ, ಬ್ರೆಜಿಲ್, ಭಾರತದ ಮೇಲೆ ಹೆಚ್ಚು ಪರಿಣಾಮ

Sumana Upadhyaya

ಪ್ಯಾರಿಸ್: ಕೊರೋನಾ ವೈರಸ್ ನಿಂದ ವಿಶ್ವಾದ್ಯಂತ 10 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಎಎಫ್ ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಕೊರೋನಾ ವೈರಸ್ ವಿಶ್ವದ ಆರ್ಥಿಕತೆ, ಸಾಮಾಜಿಕ, ರಾಜಕೀಯ ಪರಿಸ್ಥಿತಿ, ಸಾಮಾನ್ಯ ಜನಜೀವನ ಮೇಲೆ ಇನ್ನಿಲ್ಲದಂತ ಪರಿಣಾಮವನ್ನುಂಟುಮಾಡಿದ್ದು, ಭಾರತ, ಬ್ರೆಜಿಲ್ ಮತ್ತು ಅಮೆರಿಕಾ ದೇಶಗಳು ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಅನುಭವಿಸುತ್ತಿವೆ.

ಕೊರೋನಾ ವೈರಸ್ ಕಾರಣದಿಂದ ಇನ್ನೂ ಕೆಲವು ಲಾಕ್ ಡೌನ್ ಸ್ಥಿತಿಗತಿ ಹಾಗೆಯೇ ಮುಂದುವರಿದಿದೆ. ಕ್ರೀಡೆ, ಮನರಂಜನೆ, ಅಂತಾರಾಷ್ಟ್ರೀಯ ಪ್ರವಾಸ ಮೈದಾನ ಅಭಿನಮಾನಿಗಳು, ಪ್ರೇಕ್ಷಕರು ಮತ್ತು ಪ್ರವಾಸಿಗರಿಗೆ ಇನ್ನೂ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಇತ್ತೀಚೆಗೆ ಬಹುತೇಕ ಲಾಕ್ ಡೌನ್ ಸಡಿಲಿಕೆಯಾಗಿರುವುದರಿಂದ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ.

ನಿನ್ನೆಯ ಹೊತ್ತಿಗೆ ಕೊರೋನಾಗೆ ವಿಶ್ವಾದ್ಯಂತ 10 ಲಕ್ಷದ 009 ಮಂದಿ ಬಲಿಯಾಗಿದ್ದಾರೆ. ಇನ್ನು 3 ಕೋಟಿ 30 ಲಕ್ಷದ 18 ಸಾವಿರದ 877 ಮಂದಿಗೆ ಸೋಂಕು ತಗಲಿದೆ. ಅಮೆರಿಕಾದಲ್ಲಿ ಅತಿ ಹೆಚ್ಚು ಸಾವು 2 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ನಂತರದ ಸ್ಥಾನಗಳಲ್ಲಿ ಬ್ರೆಜಿಲ್, ಭಾರತ, ಮೆಕ್ಸಿಕೊ ಮತ್ತು ಬ್ರಿಟನ್ ದೇಶಗಳಿವೆ.

SCROLL FOR NEXT