ವಿದೇಶ

ಕೋವಿಡ್-19: ಜಾಗತಿಕ ಸಾವಿನ ಸಂಖ್ಯೆ 3 ಕೋಟಿ ಗಡಿಯತ್ತ!

Manjula VN

ವಾಷಿಂಗ್ಟನ್: ಕೊರೋನಾ ಕಾರಣದಿಂದ ವಿಶ್ವದಲ್ಲಿ ಈವರೆಗೆ ಮಾರಕ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 2.893 ಮಿಲಿಯನ್‌ಗಳಿಗೆ (ಸರಿ ಸುಮಾರು 3 ಕೋಟಿ) ತಲುಪಿದೆ.

ವಿಶ್ವದಲ್ಲಿ ಈವರೆಗೆ ಸುಮಾರು 133.5 ಮಿಲಿಯನ್ ಪ್ರಕರಣಗಳು ದಾಖಲಾಗಿವೆ. ಎಂದು ಅಮೆರಿಕದ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯವು ತನ್ನ ಇತ್ತೀಚಿನ ವರದಿ ಹೇಳಿದೆ.

ಪ್ರತಿದಿನದ ಸರಾಸರಿ ಸಾವಿನ ಸಂಖ್ಯೆಯಲ್ಲಿ ಬ್ರೆಜಿಲ್ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. ಪ್ರತಿದಿನ ವಿಶ್ವದಾದ್ಯಂತ ಸಂಭವಿಸುವ ಕೋವಿಡ್‌ ಸಂಬಂಧಿತ ನಾಲ್ಕು ಸಾವುಗಳಲ್ಲಿ ಒಂದು ಸಾವಿನ ಪ್ರಕರಣ ಬ್ರೆಜಿಲ್‌ನಲ್ಲಿ ವರದಿಯಾಗುತ್ತಿದೆ ಎಂದು ತಿಳಿದುಬಂದಿದೆ.

ಕೊರೋನಾ ವೈರಸ್‌ನಿಂದಾಗಿ ಬ್ರೆಜಿಲ್‌ನಲ್ಲಿ ಭೀಕರ ಪರಿಸ್ಥಿತಿ ಎದುರಾಗಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದ್ದು, ಸುಸಜ್ಜಿತ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವ ದೇಶವೇ ಇಂದು ಅತ್ಯಂತ ಗಂಭೀರ ಸ್ಥಿತಿಯಲ್ಲಿದೆ ಎಂದು ಅದು ಹೇಳಿದೆ.

ಇದೀಗ ಬ್ರೆಜಿಲ್‌ ತುಂಬಾ ಗಂಭೀರ ಪರಿಸ್ಥಿತಿ ಎದುರಿಸುತ್ತಿದೆ. ಅನೇಕ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳು ಶೇ 90ಕ್ಕಿಂತಲೂ ಹೆಚ್ಚು ತುಂಬಿವೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮಾರಿಯಾ ವ್ಯಾನ್ ಕೆರ್ಖೋವ್ ಕಳೆದ ಗುರುವಾರ ಹೇಳಿದ್ದರು. 

ಭಾರತದಲ್ಲೂ ಗುರುವಾರ ಕೋವಿಡ್‌ 19 ಸೋಂಕು ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಅಮೆರಿಕದ ನಂತರ ಒಂದು ದಿನದಲ್ಲಿ ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿದ ಎರಡನೇ ರಾಷ್ಟ್ರವೆನಿಸಿದೆ. 

ಭಾರತದಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರ ರಾಜ್ಯದಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು, ಆಸ್ಪತ್ರೆಗಳು ಕೋವಿಡ್‌ ರೋಗಿಗಳಿಂದ ತುಂಬಿ ಹೋಗಿವೆ. ಆ ರಾಜ್ಯದಲ್ಲಿ ಶಾಪಿಂಗ್ ಮಾಲ್‌ಗಳು, ಚಿತ್ರಮಂದಿರಗಳು, ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಪೂಜಾ ಸ್ಥಳಗಳನ್ನು ಮುಚ್ಚಲು ಪ್ರಾರಂಭಿಸಲಾಗಿದೆ.

SCROLL FOR NEXT