ವಿದೇಶ

ಸಹಾಯಕ್ಕೆ ಬದ್ಧ ಎಂದಿದ್ದ ಚೀನಾದಿಂದ, ಭಾರತಕ್ಕೆ ಕೋವಿಡ್-19 ವೈದ್ಯಕೀಯ ಸರಕು ಸಾಗಣೆ ವಿಮಾನಗಳಿಗೆ ತಡೆ!

Srinivas Rao BV

ಬೀಜಿಂಗ್: ಕೋವಿಡ್-19 ಪರಿಸ್ಥಿತಿ ಭಾರತದಲ್ಲಿ ಕೈ ಮೀರುತ್ತಿದ್ದು, ಸಹಾಯ ಮಾಡುವುದಕ್ಕೆ ಬದ್ಧ ಎಂದು ಹೇಳಿದ್ದ ಚೀನಾ ಈಗ ಭಾರತಕ್ಕೆ ವೈದ್ಯಕೀಯ ಪೂರೈಕೆ ಮಾಡಬೇಕಿದ್ದ ವಿಮಾನಗಳನ್ನು ತಡೆದಿದೆ. 

ಸರ್ಕಾರಿ ಸ್ವಾಮ್ಯದ ಸಿಚುವಾನ್ ಏರ್ಲೈನ್ಸ್ ಭಾರತಕ್ಕೆ ಕೋವಿಡ್-19 ವೈದ್ಯಕೀಯ ಉಪಕರಣಗಳನ್ನು ಸಾಗಣೆ ಮಾಡುತ್ತಿದ್ದ ಸರಕು ಸಾಗಣೆ ವಿಮಾನಗಳನ್ನು 15 ದಿನಗಳ ಕಾಲ ತಡೆಹಿಡಿದೆ. ಭಾರತಕ್ಕೆ ಸಂಕಷ್ಟದ ಸ್ಥಿತಿಯಲ್ಲಿ ಅಗತ್ಯವಿರುವ ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಹಾಗೂ ಇತರ ವೈದ್ಯಕೀಯ ಪೂರೈಕೆಗಳನ್ನು ಚೀನಾದಿಂದ ಭಾರತ ತರಿಸಿಕೊಳ್ಳುತ್ತಿತ್ತು. ಆದರೆ ಚೀನಾ ಭರವಸೆಯ ನಡುವೆಯೂ ಕಾರ್ಗೋ ವಿಮಾನವನ್ನು ತಡೆಗಟ್ಟಿದೆ. 

ಭಾರತದಲ್ಲಿ ಪ್ಯಾಂಡಮಿಕ್ ಪರಿಸ್ಥಿತಿಯ ದಿಢೀರ್ ಬದಲಾವಣೆಗಳಿಂದಾಗಿ, ಹೊರಗಿನಿಂದ ಬರುವ ಕೋವಿಡ್-19 ಸೋಂಕುಗಳನ್ನು ತಡೆಗಟ್ಟುವುದಕ್ಕಾಗಿ ಮುಂದಿನ 15 ದಿನಗಳ ಕಾಲ ಭಾರತಕ್ಕೆ ತೆರಳುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಸಂಸ್ಥೆ ಹೇಳಿರುವುದನ್ನು ಪಿಟಿಐ ವರದಿ ಮಾಡಿದೆ. ಈ ನಿರ್ಧಾರದಿಂದ ನಮ್ಮ ಸಂಸ್ಥೆಗೆ ಬೃಹತ್ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಸಂಸ್ಥೆ ತಿಳಿಸಿದೆ. 15 ದಿನಗಳ ನಂತರ ನಿರ್ಧಾರ ಬದಲಾವಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. 

SCROLL FOR NEXT