ವಿದೇಶ

ಭಾರತದಲ್ಲಿ ಕೋವಿಡ್-19 ಹೆಚ್ಚಳ: ಪ್ರಧಾನಿ ಮೋದಿಗೆ ಚೀನಾ ಅಧ್ಯಕ್ಷ ಕ್ಸೀ ಜಿನ್ಪಿಂಗ್ ಪತ್ರ

Srinivas Rao BV

ಬೀಜಿಂಗ್: ಭಾರತದಲ್ಲಿ ಕೋವಿಡ್-19 ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಚೀನಾ ಅಧ್ಯಕ್ಷ ಕ್ಸೀ ಜಿನ್ಪಿಂಗ್ ಪತ್ರ ಬರೆದಿದ್ದಾರೆ. 

ಕೋವಿಡ್-19 ನಿಯಂತ್ರಣಕ್ಕೆ ಸಹಾಯಹಸ್ತ ಚಾಚಿರುವ ಕ್ಸೀಜಿನ್ಪಿಂಗ್,  ಭಾರತದ ಪರಿಸ್ಥಿತಿಗೆ ಮರುಗಿದ್ದಾರೆ. "ಸಾಂಕ್ರಾಮಿಕದ ವಿರುದ್ಧ ಹೋರಾಡುವುದಕ್ಕೆ ಭಾರತಕ್ಕೆ ಸಹಕಾರ ನೀಡುವುದಕ್ಕೆ ಚೀನಾ ಬಯಸುತ್ತಿದೆ" ಎಂದು ಕ್ಸೀ ಜಿನ್ಪಿಂಗ್ ಪತ್ರದ ಮೂಲಕ ತಿಳಿಸಿದ್ದಾರೆ. 

ಇದಕ್ಕೂ ಮುನ್ನ ಭಾರತಕ್ಕೆ ನೆರವು ನೀಡುವುದಾಗಿ ಹೇಳಿದ್ದ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ, "ಚೀನಾದಲ್ಲಿ ಉತ್ಪಾದನೆಯಾದ ಸಾಂಕ್ರಮಿಕ ತಡೆಗೆ ಅಗತ್ಯವಿರುವ ಉಪಕರಣಗಳು ಭಾರತಕ್ಕೆ ಶೀಘ್ರವೇ ತಲುಪುತ್ತಿದೆ" ಎಂದು ಹೇಳಿದ್ದಾರೆ. 

ವಿದೇಶಾಂಗ ಸಚಿವ ಎಸ್ ಜೈಶಂಕರ್ ಗೆ ಪತ್ರ ಬರೆದಿದ್ದ ಚೀನಾ ವಿದೇಶಾಂಗ ಸಚಿವರು ಭಾರತದ ಸವಾಲಿನ ಪರಿಸ್ಥಿತಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದರು. "ಕೊರೋನಾ ವೈರಸ್ ಮನುಕುಲದ ಸಮಾನ ಶತ್ರುವಾಗಿದೆ. ಅದನ್ನು ಎದುರಿಸಲು ಅಂತಾರಾಷ್ಟ್ರೀಯ ಸಮುದಾಯ ಪರಸ್ಪರ ಸಹಕಾರ ನೀಡಬೇಕಿದೆ" ಎಂದು ಚೀನಾ ವಿದೇಶಾಂಗ ಸಚಿವರು ಹೇಳಿದ್ದರು. 

SCROLL FOR NEXT