ವಿದೇಶ

ಕಾಬೂಲ್: ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ; ವಾಣಿಜ್ಯ ವಿಮಾನಗಳು ರದ್ದು; ಝೆಕ್ ಪ್ರಜೆಗಳ ಸ್ಥಳಾಂತರ ಪ್ರಾರಂಭ

Srinivas Rao BV

ಕಾಬೂಲ್: ಆಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ, ಹಲವಾರು ಮಂದಿ ದೇಶ ತೊರೆಯಲು ಪ್ರಾರಂಭಿಸುತ್ತಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನಸಾಗರ ಹರಿದುಬರುತ್ತಿದೆ. 

ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ಉಂಟಾಗಿರುವ ಹಿನ್ನೆಲೆಯಲ್ಲಿ ಕಾಬೂಲ್ ನಿಂದ ಹೊರಹೋಗುವ ವಾಣಿಜ್ಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ. 

"ಲೂಟಿ, ಅವಾಂತರಗಳನ್ನು ತಡೆಯುವುದಕ್ಕಾಗಿ ಹಮೀದ್ ಕರ್ಜಾಯ್ ವಿಮಾನ ನಿಲ್ದಾಣದಿಂದ ಯಾವುದೇ ವಾಣಿಜ್ಯ ವಿಮಾನಗಳು ಕಾರ್ಯನಿರ್ವಹಣೆ ಮಾಡುವುದಿಲ್ಲ. ದಯವಿಟ್ಟು ವಿಮಾನ ನಿಲ್ದಾಣಕ್ಕೆ ಧಾವಿಸಬೇಡಿ" ಎಂದು ಕಾಬೂಲ್ ವಿಮಾನ ನಿಲ್ದಾಣ ಪ್ರಾಧಿಕಾರ ಸಂದೇಶ ಕಳಿಸಿದೆ. ಈ ನಡುವೆ ಝೆಕ್ ಗಣರಾಜ್ಯ ಸ್ಥಳಾಂತರಿಸುವಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕಾಬೂಲ್ ಅಂತಾರಾಷ್ಟ್ರೀಯ ವಿಮಾನದಿಂದ ಟೇಕ್ ಆಫ್ ಆಗಿ ಪ್ರೇಗ್ ಗೆ ಬಂದಿಳಿದಿದೆ. 

ಸೋಮವಾರದ ವಿಮಾನದಲ್ಲಿ 46 ಮಂದಿ ಇದ್ದರು ಎಂದು ಪ್ರಧಾನಿ ಆಂಡ್ರೆಜ್ ಬಾಬಿಸ್ ಮಾಹಿತಿ ನೀಡಿದ್ದಾರೆ. ಝೆಕ್ ಪ್ರಜೆಗಳು, ಝೆಕ್ ರಾಯಭಾರಿ ಕಚೇರಿಗಳು ಆಫ್ಘನ್ ಸಿಬ್ಬಂದಿಗಳು ಹಾಗೂ ನ್ಯಾಟೋ ಮಿಷನ್ ಗಳಲ್ಲಿ ಝೆಕ್ ಸಶಸ್ತ್ರ ಪಡೆಗಳಿಗೆ ಸಹಾಯ ಮಾಡಿದ್ದ ಆಪ್ಘನ್ ವ್ಯಾಖ್ಯಾನಕಾರರು ಅವರ ಕುಟುಂಬ ಸದಸ್ಯರೊಂದಿಗೆ ಇದ್ದರು. 

ಪ್ರಧಾನಿ ಆಂಡ್ರೆಜ್ ಬಾಬಿಸ್ ಹೆಚ್ಚಿನ ಮಾಹಿತಿ ನೀಡಿಲ್ಲ, ಆಫ್ಘಾನಿಸ್ತಾನದಿಂದ ಎಷ್ಟು ವಿಮಾನಗಳು ಝೆಕ್ ಗೆ ತೆರಳಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲ. ಝೆಕ್ ಆಂತರಿಕ ಸಚಿವ ಜಾನ್ ಹಮಾಸೆಕ್ ಟ್ವೀಟ್ ಮಾಡಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಇದ್ದು ಝೆಕ್ ವಿಮಾನಗಳು ಟೇಕ್ ಆಫ್ ಆಗಿದ್ದೆ ಒಂದು ಪವಾಡ ಎಂದು ಹೇಳಿದ್ದಾರೆ. 

SCROLL FOR NEXT