ವಿದೇಶ

ಆಫ್ಘಾನಿಸ್ತಾನದ ನೂತನ ತಾಲಿಬಾನ್ ಸರ್ಕಾರಕ್ಕೆ ಸಾಲ, ಇತರೆ ಸಂಪನ್ಮೂಲಗಳ ನೆರವಿಲ್ಲ: ಐಎಂಎಫ್

Srinivasamurthy VN

ವಾಷಿಂಗ್ಟನ್: ಪ್ರಜಾಪ್ರಭುತ್ವ ಸರ್ಕಾರವನ್ನು ಪತನಗೊಳಿಸಿ ಅಧಿಕಾರಕ್ಕೇರಿರುವ ಆಫ್ಘಾನಿಸ್ತಾನದ ನೂತನ ತಾಲಿಬಾನ್ ಸರ್ಕಾರಕ್ಕೆ ಸಧ್ಯಕ್ಕೆ ಸಾಲ ಅಥವಾ ಇತರ ಸಂಪನ್ಮೂಲಗಳ ನೆರವು ನೀಡುವುದಿಲ್ಲ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.

ಜಗತ್ತಿನ 190 ರಾಷ್ಟ್ರಗಳಿಗೆ ಸಾಲ ನೀಡುವ ಸಂಸ್ಥೆ ಐಎಂಎಫ್, ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ಹೊಸ ತಾಲಿಬಾನ್ ಸರ್ಕಾರವು ಸಾಲ ಅಥವಾ ಇತರ ಸಂಪನ್ಮೂಲಗಳ ಪಡೆಯಲು ಅನುಮತಿಸುವುದಿಲ್ಲ ಎಂದು ಹೇಳಿದೆ. ಐಎಂಎಫ್ ಅಂತಾರಾಷ್ಟ್ರೀಯ ಸಮುದಾಯದ ಅಭಿಪ್ರಾಯಗಳ ಮೇರೆಗೆ ಈ ಕಠಿಣ ನಿಲುವು  ತಳೆದಿರುವುದಾಗಿ ಐಎಂಎಫ್ ಸ್ಪಷ್ಟಪಡಿಸಿದೆ.  

"ಅಫ್ಘಾನಿಸ್ತಾನದಲ್ಲಿ ಸರ್ಕಾರವನ್ನು ಗುರುತಿಸುವ ಬಗ್ಗೆ ಪ್ರಸ್ತುತ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಸ್ಪಷ್ಟತೆಯ ಕೊರತೆಯಿದೆ, ಇದರ ಪರಿಣಾಮವಾಗಿ ದೇಶವು ಎಸ್‌ಡಿಆರ್ ಅಥವಾ ಇತರ ಐಎಂಎಫ್ ಸಂಪನ್ಮೂಲಗಳ ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಎಸ್ ಡಿಆರ್ ಎಂಬುದು ಐಎಂಎಫ್ ನೀಡುವ ವಿಶೇಷ ಡ್ರಾಯಿಂಗ್ ಹಕ್ಕುಗಳಾಗಿದ್ದು, ಇದು IMF ಸದಸ್ಯ ರಾಷ್ಟ್ರಗಳು ಪಾವತಿ ಹೊಣೆಗಾರಿಕೆಗಳನ್ನು ಪೂರೈಸಲು ಮೀಸಲಾಗಿರುವ ಮೀಸಲು ಸೇವೆಯಾಗಿ ಕಾರ್ಯನಿರ್ವಹಿಸುತ್ತದೆ. 

SCROLL FOR NEXT