ಅಮೆರಿಕಾ ಅಧ್ಯಕ್ಷ ಜೋ ಬೈಡನ್ 
ವಿದೇಶ

ಅಫ್ಘಾನಿಸ್ತಾನದಿಂದ ಸೇನೆ ಹಿಂತೆಗೆದುಕೊಂಡದ್ದು 'ತಾರ್ಕಿಕ ಮತ್ತು ಸರಿಯಾದ ನಿರ್ಧಾರ': ಟೀಕೆಗಳ ತಿರಸ್ಕರಿಸಿದ ಬೈಡನ್

ಅಫ್ಗಾನಿಸ್ತಾನದಲ್ಲಿ ಬಿಕ್ಕಟ್ಟಿನ ನಡುವೆ ಸೇನೆಯನ್ನು ಹಿಂತೆಗೆದುಕೊಂಡ ತನ್ನ ಕ್ರಮವನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಸಮರ್ಥಿಸಿಕೊಂಡಿದ್ದಾರೆ. 

ವಾಷಿಂಗ್ಟನ್: ಅಫ್ಗಾನಿಸ್ತಾನದಲ್ಲಿ ಬಿಕ್ಕಟ್ಟಿನ ನಡುವೆ ಸೇನೆಯನ್ನು ಹಿಂತೆಗೆದುಕೊಂಡ ತನ್ನ ಕ್ರಮವನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಸಮರ್ಥಿಸಿಕೊಂಡಿದ್ದಾರೆ. 

ಅಮೆರಿಕ ತನ್ನ ಪಡೆಗಳನ್ನು ವಾಪಸ್ ಕರೆದುಕೊಳ್ಳಲು ಆರಂಭಿಸಿದ ಬಳಿಕ ತಾಲಿಬಾನ್ ಉಗ್ರರು ದೇಶವನ್ನು ಆಕ್ರಮಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಅಲ್ಲಿ ಆತಂಕಕಾರಿ ವಾತಾವರಣ ನಿರ್ಮಾಣವಾಗಿದ್ದು, ಹಲವರು ಸಾವನ್ನಪ್ಪಿದ್ದಾರೆ. ಹಾಗಾಗಿ, ಅಮೆರಿಕಾದ ನಿರ್ಧಾರವನ್ನು ಹಲವರು ಟೀಕಿಸಿದ್ದರು.

ಈ ಹಿನ್ನೆಲೆಯಲ್ಲಿ ಟೀಕೆಗಳ ತಿರಸ್ಕರಿಸಿ ನಿನ್ನೆ ವೈಟ್ ಹೌಸ್ ನಲ್ಲಿ ಮಾತನಾಡಿರುವ ಬೈಡನ್ ಅವರು, ಅಫ್ಘಾನಿಸ್ತಾನದಿಂದ ಸೇನೆ ಹಿಂತೆಗೆದುಕೊಂಡದ್ದು ‘ತಾರ್ಕಿಕ, ವೈಚಾರಿಕ ಮತ್ತು ಸರಿಯಾದ ನಿರ್ಧಾರ’ ಎಂದು ಇತಿಹಾಸದಲ್ಲಿ ದಾಖಲಾಗುತ್ತದೆ ಎಂದು ಹೇಳಿದ್ದಾರೆ.

ತಾಲಿಬಾನಿಗಳು ಮೂಲಭೂತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬೈಡನ್ ಹೇಳಿದ್ದಾರೆ. ‘ಈ ಹಿಂದೆ ಯಾವುದೇ ಸಂಘಟನೆ ಮಾಡದ, ಆಫ್ಗಾನ್ ಜನರ ಯೋಗಕ್ಷೇಮದ ರಕ್ಷಣೆ ಮತ್ತು ಒಗ್ಗೂಡಿಸುವಿಕೆಯತ್ತ ತಾಲಿಬಾನ್ ಮುಂದಾಗಲಿದೆಯೇ? ಎಂದು ಬೈಡನ್ ಪ್ರಶ್ನಿಸಿದ್ದಾರೆ.

ಒಂದೊಮ್ಮೆ ತಾಲಿಬಾನ್ ಅದನ್ನು ಮಾಡಿದರೆ ಅವರಿಗೆ ಎಲ್ಲ ರೀತಿಯ ನೆರವು ಬೇಕಾಗುತ್ತದೆ. ತಾಲಿಬಾನಿಗಳು ಇಲ್ಲಿಯವರೆಗೆ ಅಮೆರಿಕ ಪಡೆಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಅವರು ನಮ್ಮ ಪಡೆಗಳನ್ನು ನಿಯಂತ್ರಿಸುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಅವರು ಅದನ್ನು ಮುಂದುವರಿಸುತ್ತಾರೋ ಇಲ್ಲವೋ ಎಂಬುದನ್ನು ನಾವು ಕಾದು ನೋಡುತ್ತೇವೆ. ಅವರು ಹೇಳುವುದು ಸತ್ಯವಾಗಿದೆಯೋ ಇಲ್ಲವೋ ಎಂದು ನಾವು ನೋಡುತ್ತೇವೆಂದು ಹೇಳಿದ್ದಾರೆ.

ಈ ವಾರಾಂತ್ಯದಲ್ಲಿ ಕೇವಲ 30 ಗಂಟೆಗಳ ಅವಧಿಯಲ್ಲಿ ಅಸಾಧಾರಣ ಸಂಖ್ಯೆಯಲ್ಲಿ ಜನರ ಸ್ಥಳಾಂತ ಮಾಡಿದ್ದೇವೆ. 36 ಗಂಟೆಗಳಲ್ಲಿ ಅಮೆರಿಕಾದ ಸುಮಾರು 11,000 ಜನರನ್ನು ಕಾಬುಲ್ ನಿಂದ ಸ್ಥಳಾಂತರ ಮಾಡಲಾಗಿದೆ. ಅಮೆರಿಕಾದ ಜನರನ್ನು ಅಫ್ಗಾನಿಸ್ತಾನ ರಾಷ್ಟ್ರೀದ ಶೀಘ್ರಗತಿಯಲ್ಲಿ ಹಾಗೂ ಸುರಕ್ಷಿತರಾಗಿ ಸ್ಥಳಾಂತರ ಮಾಡಲು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ನನ್ನ ನಿರ್ದೇಶನದ ಮೇರೆಗೆ ಅಧಿಕಾರಿಗಳು ಅಮೆರಿಕಾ ಪ್ರಜೆಗಳನ್ನು ಫೋನ್, ಇಮೇಲ್ ಹಾಗೂ ಇತರೆ ಮಾಧ್ಯಮಗಳ ಮೂಲಕ ಸಂಪರ್ಕಿಸಿ, ಸ್ಥಳಾಂತರ ಮಾಡುವ ಕೆಲಸಗಳನ್ನು ಮಾಡುತ್ತಿದ್ದಾರೆ. ಭಾನುವಾರ ಒಂದೇ ದಿನ 23 ಅಮೆರಿಕಾ ವಾಯುಪಡೆಯ ವಿಮಾನಗಳು ಕಾಬುಲ್'ಗೆ ತೆರಳಿದ್ದು, 3,900 ಪ್ರಯಾಣಿಕರನ್ನು ಸ್ಥಳಾಂತರಿಸಿದೆ. ಬೇರೆ ರಾಷ್ಟ್ರಗಳ ಜನರನ್ನೂ ಸ್ಥಳಾಂತರ ಮಾಡುವ ಕೆಲಸವನ್ನು ಅಮೆರಿಕಾ ಮಾಡುತ್ತಿದೆ ಎಂದಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಬಿಕ್ಕುಟ್ಟಿನ ನಡುವಲ್ಲೇ ಅಮೆರಿಕಾ ತನ್ನ ಸೇನೆಯನ್ನು ಹಿಂಪಡೆದುಕೊಂಡಿದ್ದರ ಕುರಿತು ನಿನ್ನೆಯಷ್ಟೇ ಭಾರತ ಮೂಲದ ಅಮೆರಿಕದ​ ರಾಜಕಾರಣಿ ಮತ್ತು ವಿಶ್ವಸಂಸ್ಥೆಯ ಮಾಜಿ ಅಧಿಕಾರಿ ನಿಕ್ಕಿ ಹ್ಯಾಲೆ ಅಸಮಾಧಾನ ವ್ಯಕ್ತಪಡಿಸಿದ್ದರು. 

ಯುಎಸ್​ ತಾಲಿಬಾನ್ ಜೊತೆ ಮಾತುಕತೆ ನಡೆಸುತ್ತಿಲ್ಲ. ಅವರು ಸಂಪೂರ್ಣವಾಗಿ ತಾಲಿಬಾನ್‌ಗೆ ಶರಣಾಗಿದ್ದಾರೆ. ಪ್ರಮುಖ ನ್ಯಾಟೋ ಕೇಂದ್ರವಾಗಿದ್ದ ಬಾಗ್ರಾಮ್ ಏರ್‌ಫೋರ್ಸ್ ಬೇಸ್​, ಜೊತೆಗೆ ನಾವು ಪಡೆಯಬೇಕಿದ್ದ 85 ಬಿಲಿಯನ್ ಡಾಲರ್​ ಮೌಲ್ಯದ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಅವರು(ಯುಎಸ್)​ ಉಗ್ರರಿಗೆ ಒಪ್ಪಿಸಿದ್ದಾರೆ. ಅಫ್ಘನ್​ನಲ್ಲಿದ್ದ ಅಮೆರಿಕನ್​ ಜನರನ್ನು ಬೈಡನ್​ ಅವರ ವಾಪಸಾತಿ​ ನೀತಿಯ ಮೂಲಕ ಕೈಬಿಡಲಾಗಿದೆ. ಇದು ಸಂಪೂರ್ಣ ಶರಣಾಗತಿ ಮತ್ತು ಮುಜುಗರದ ರೀತಿಯ ವೈಫಲ್ಯ ಟೀಕಿಸಿದ್ದರು. 

ಬೈಡನ್‌ ಆಡಳಿತಕ್ಕೆ ಬಂದ ಏಳು ತಿಂಗಳಲ್ಲಿ ಏನಾಯಿತು? ನಾವು ಸಂಪೂರ್ಣವಾಗಿ ಶರಣಾಗಿದ್ದೇವೆ. ಪ್ರಪಂಚದ ದೃಷ್ಟಿಯಲ್ಲಿ ನಮ್ಮನ್ನು ನಾವು ಅವಮಾನಿಸಿಕೊಂಡಿದ್ದೇವೆ. ಸದ್ಯ ನೀವು ರಾಕ್ಷಸರ ಜೊತೆ ಮಾತುಕತೆ ಮುಂದಾಗಬೇಕಾದ ಸಂದರ್ಭ ಬಂದಿದೆ. ಆ ಮಾತುಕತೆ ಶಕ್ತಿಯುತವಾಗಿರಬೇಕೇ ಹೊರತು ದೌರ್ಬಲ್ಯದಿಂದ ಕೂಡಿರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. 

ಇದು ಗಂಭೀರ ವಿಚಾರವಾಗಿದೆ. ಅಮೆರಿಕಾಗೆ ಹಿಂತಿರುಗಲು ನೀಡಿದ್ದ ಆಗಸ್ಟ್​ 31ರ ವರೆಗಿನ ಗಡುವನ್ನು ಬೈಡನ್​ ಸರ್ಕಾರ ವಿಸ್ತರಿಸಬೇಕು. ಅಮೆರಿಕನ್ನರನ್ನು ಕಾಪಾಡಬೇಕಿದೆ. ನಾವು ಭರವಸೆಗಳನ್ನು ನೀಡಿದಂತೆ ಅಫ್ಘಾನ್ ಮಿತ್ರರಿಗೆ ಸಹಾಯ ಮಾಡಬೇಕಿದೆ. ಇದನ್ನು ಬಹಳ ಪ್ರಬಲ ರೀತಿಯಲ್ಲಿ ಮುಂದುವರಿಸುತ್ತೇವೆ ಎಂದು ನಾವು ಖಚಿತಪಡಿಸಿಕೊಳ್ಳಬೇಕಿದೆ ಎಂದು ಹೇಳಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

SCROLL FOR NEXT