ವಿದೇಶ

ಡ್ರೋನ್ ಸ್ಟ್ರೈಕ್ ನಲ್ಲಿ ಐಎಸ್ ಆತ್ಮಾಹುತಿ ಬಾಂಬರ್ ಗಳ ಹತ್ಯೆಯನ್ನು ದೃಢಪಡಿಸಿದ ಅಮೆರಿಕ

Nagaraja AB

ಕಾಬೂಲ್: ಅಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಅಂಗಸಂಸ್ಥೆಯಿಂದ ಭಾನುವಾರ ಕಾಬೂಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಲಿಟರಿ ಸ್ಥಳಾಂತರದ ಮೇಲೆ ದಾಳಿ ನಡೆಯುವ ಮುನ್ನ ಯುಎಸ್ ಡ್ರೋನ್ ದಾಳಿಯು ಬಹು ಆತ್ಮಾಹುತಿ  ಬಾಂಬರ್‌ಗಳನ್ನು ಹೊತ್ತೊಯ್ಯುವ ವಾಹನವನ್ನು ಸ್ಫೋಟಿಸಿತು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ತಾಲಿಬಾನ್ ಜೊತೆಗೆನ ಧೀರ್ಘ ಯುದ್ಧವನ್ನು ಅಂತ್ಯಗೊಳಿಸಿ ತನ್ನ ಸೇನೆಯನ್ನು ಹಿಂತೆಗೆತ ಹಾಗೂ ಸಹಸ್ರಾರು ಆಪ್ಘನ್ನರು ಹಾಗೂ ವಿದೇಶಿ ನಾಗರಿಕರ ಏರ್ ಲಿಫ್ಟ್ ಗೆ ಎರಡು ದಿನಗಳ ಮುಂಚಿತವಾಗಿ ಅಮೆರಿಕ ಏರ್ ಸ್ಟೈಕ್ ನಡೆಸಿದೆ.

ಪ್ರಯಾಣ ದಾಖಲೆಗಳನ್ನು ಹೊಂದಿರುವ ಜನರು ಇನ್ನೂ ಮುಕ್ತವಾಗಿ ದೇಶವನ್ನು ತೊರೆಯಲು ಸಾಧ್ಯವಾಗುತ್ತದೆ ಎಂದು ತಾಲಿ ಬಾನ್‌ನಿಂದ ಆಶ್ವಾಸನೆ ಸಿಕ್ಕಿರುವುದಾಗಿ ನ್ಯಾಟೋ ಮತ್ತು ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ಸೇರಿದಂತೆ ಸುಮಾರು 100 ರಾಷ್ಟ್ರಗಳು ಸಹಿ ಮಾಡಿರುವ ಹೇಳಿಕೆಯೊಂದನ್ನು ಅಮೆರಿಕ ರಾಜ್ಯ ಇಲಾಖೆ ಬಿಡುಗಡೆ ಮಾಡಿದೆ. 

ಮಂಗಳವಾರ ಯುಎಸ್ ಸೇನೆ ಹಿಂತೆಗೆತ ಪೂರ್ಣಗೊಂಡ ನಂತರ ಮತ್ತು ವಿಮಾನ ನಿಲ್ದಾಣದ ನಿಯಂತ್ರಣವನ್ನು ಅವರು ವಹಿಸಿಕೊಂಡ ನಂತರ ಸಾಮಾನ್ಯ ಪ್ರಯಾಣಕ್ಕೆ ಅವಕಾಶ ನೀಡುವುದಾಗಿ ತಾಲಿಬಾನ್ ಹೇಳಿದೆ.

SCROLL FOR NEXT