ವಿದೇಶ

ತಾಲಿಬಾನ್ ಎಫೆಕ್ಟ್: ಆಫ್ಘಾನಿಸ್ತಾನದ ಎಲ್ಲ ಖಾಸಗಿ ಬ್ಯಾಂಕ್ ಗಳೂ ದಿವಾಳಿ!

Srinivasamurthy VN

ಕಾಬೂಲ್: ತಾಲಿಬಾನ್ ಆಡಳಿತದ ಆರಂಭವಾದ ಕೆಲವೇ ತಿಂಗಳುಗಳ ಅಂತರದಲ್ಲಿ ಆಫ್ಘಾನಿಸ್ತಾನದ ಎಲ್ಲ ಖಾಸಗಿ ಬ್ಯಾಂಕ್ ಗಳು ದಿವಾಳಿಯಾಗಿದೆ ಎನ್ನಲಾಗಿದೆ

ಈ ಬಗ್ಗೆ ಸ್ವತಃ ಆಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಅಮ್ರುಲ್ಲಾ ಸಲೇಹ್ ಅವರು ಮಾಹಿತಿ ನೀಡಿದ್ದು, ಆಫ್ಘಾನಿಸ್ತಾನದಲ್ಲಿರುವ ಎಲ್ಲ ಖಾಸಗಿ ಬ್ಯಾಂಕ್ ಗಳು ದಿವಾಳಿಯಾಗಿವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ದೇಶದ ಎಲ್ಲಾ ಖಾಸಗಿ ಬ್ಯಾಂಕ್‌ಗಳು ಈಗ ದಿವಾಳಿಯಾಗಿವೆ. AIB ಅನ್ನು ಹೊರತುಪಡಿಸಿ ಎಲ್ಲ ಬ್ಯಾಂಕ್ ಗಳು ದಿವಾಳಿಯಾಗಿದ್ದು, ಮಾನವೀಯ ನಿಧಿಗಳ ವರ್ಗಾವಣೆಗೆ ಈ ಹಣವನ್ನು ಬಳಸಬಹುದು ಎಂದು ಹೇಳಿದ್ದಾರೆ. 

ಅಂತೆಯೇ ಈ ಹಿಂದೆ ತಾಲಿಬಾನ್ ನ 'ತಾಲಿಬ್ ಜುಂಟಾ' ಮೌನವಾಗಿ ಎಲ್ಲಾ ಖಾಸಗಿ ಬ್ಯಾಂಕ್‌ಗಳ ಮೇಲೆ ಹಿಡಿತ ಸಾಧಿಸಿತ್ತು. ಬಳಿಕ ಆ ಖಾಸಗಿ ಬ್ಯಾಂಕ್ ಗಳ ಮಾಲೀಕರು ಮತ್ತು CEO ಗಳು ಅಪಹರಣಕ್ಕೀಡಾಗಿ, ಚಿತ್ರಹಿಂಸೆಗೆ ಹೆದರಿ ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಪಾಕಿಸ್ತಾನದ ವಿರುದ್ಧವೂ ಹರಿಹಾಯ್ದಿರುವ ಸಲೇಹ್, ಪಾಕಿಸ್ತಾನ ತನ್ನ ತದ್ರೂಪು ಆಡಳಿತ ಸಹವರ್ತಿಗೆ ಹಣವನ್ನು ಚುಚ್ಚಬೇಕು ಎಂದು ಕಿಡಿಕಾರಿದ್ದಾರೆ.

SCROLL FOR NEXT