ವಿದೇಶ

ಅಮೆರಿಕ: ಮಗಳ ಜನ್ಮದಿನದಂದೇ ಭಾರತೀಯ ಮೂಲದ ಗ್ಯಾಸ್ ಸ್ಟೇಷನ್ ಮಾಲೀಕನ ಗುಂಡಿಕ್ಕಿ ಹತ್ಯೆ

Lingaraj Badiger

ನ್ಯೂಯಾರ್ಕ್: ಅಮೆರಿಕದ ಜಾರ್ಜಿಯಾದಲ್ಲಿ ಪೊಲೀಸ್ ಠಾಣೆಯ ಬಳಿಯೇ ಹಾಡಹಗಲೇ 45 ವರ್ಷದ ಭಾರತೀಯ ಮೂಲದ ಗ್ಯಾಸ್ ಸ್ಟೇಷನ್ ಮಾಲೀಕನನ್ನು ದರೋಡೆಕೋರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜಾರ್ಜಿಯಾದ ಪೂರ್ವ ಕೊಲಂಬಸ್‌ನಲ್ಲಿರುವ ಬ್ಯೂನಾ ವಿಸ್ಟಾ ರಸ್ತೆಯಲ್ಲಿರುವ ಸೈನೋವಸ್ ಬ್ಯಾಂಕ್‌ನ ಹೊರಗೆ ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಭಾರತೀಯ ಮೂಲದ ಅಮಿತ್ ಕುಮಾರ್ ಪಟೇಲ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಮಸ್ಕೋಜಿ ಕೌಂಟಿ ಕೊರೋನರ್ ಅಧಿಕಾರಿ ಹೇಳಿರುವುದಾಗಿ WTVM ಟಿವಿ ಚಾನೆಲ್ ವರದಿ ಮಾಡಿದೆ.

ಬ್ಯಾಂಕ್ ಕಟ್ಟಡವು ಕೊಲಂಬಸ್ ಪೋಲೀಸ್ ಇಲಾಖೆಯ ಪೂರ್ವ ಆವರಣದಲ್ಲಿದೆ. ಅದರ ಪ್ರವೇಶದ್ವಾರವು ದುಷ್ಕರ್ಮಿಗಳು ಗುಂಡು ಹಾರಿಸಿದ ಸ್ಥಳದಿಂದ ಕೆಲವೇ ಅಡಿಗಳಷ್ಟು ದೂರದಲ್ಲಿದೆ ಎಂದು ಲೆಡ್ಜರ್-ಎನ್ಕ್ವೈರರ್ ವರದಿ ಮಾಡಿದೆ.

ಪಟೇಲ್ ಅವರು ಸ್ಟೀಮ್ ಮಿಲ್ ರಸ್ತೆ ಮತ್ತು ಬ್ಯೂನಾ ವಿಸ್ಟಾ ರಸ್ತೆಯ ಮೂಲೆಯಲ್ಲಿರುವ ಚೆವ್ರಾನ್ ಗ್ಯಾಸ್ ಸ್ಟೇಷನ್‌ನ ಮಾಲೀಕರಾಗಿದ್ದರು ಎಂದು WTVM ವರದಿ ಮಾಡಿದೆ.

ಪಟೇಲ್ ಅವರು ವಾರಾಂತ್ಯದಲ್ಲಿ ಬ್ಯಾಂಕಿಗೆ ಹಣ ಜಮೆ ಮಾಡಲು ಬಂದಾಗ ಪ್ರವೇಶದ್ವಾರದಲ್ಲಿಯೇ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿದರು ಎಂದು ಹತ್ಯೆಯಾದ ಅಮಿತ್ ಕುಮಾರ್ ಅವರ ಬಿಸಿನೆಸ್ ಪಾರ್ಟನರ್ ವಿನ್ನಿ ಪಟೇಲ್ ಅವರು ಹೇಳಿದ್ದಾರೆ.

ಶೂಟರ್ ಹಣವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ವಿನ್ನಿ ಪಟೇಲ್ ತಿಳಿಸಿದ್ದಾರೆ.

"ಇಂದು ಅವರ ಮಗಳ ಹುಟ್ಟುಹಬ್ಬ. ಅವರು ಹುಟ್ಟುಹಬ್ಬ ಆಚರಿಸಲು ಸಿದ್ಧರಾಗಿದ್ದರು" ಎಂದು ಆರು ವರ್ಷಗಳಿಂದ ಅಮಿತ್ ಪಟೇಲ್ ಅವರೊಂದಿಗೆ ವ್ಯವಹಾರ ಮಾಡುತ್ತಿರುವ ವಿನ್ನಿ ಅವರು ಹೇಳಿದ್ದಾರೆ.

SCROLL FOR NEXT