ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ 
ವಿದೇಶ

ಚೀನಾದ ವಿರುದ್ಧ ಪಶ್ಚಿಮದ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕಾದ ಅಗತ್ಯವಿದೆ: ಕೆನಡಾ ಪ್ರಧಾನಿ ಟ್ರುಡೊ

ಆಗಾಗ್ಗೆ ಪಶ್ಚಿಮದ ರಾಷ್ಟ್ರಗಳನ್ನು ಪರಸ್ಪರ ಎತ್ತಿಕಟ್ಟುವ ನಾಟಕವಾಡುತ್ತಿರುವ ಚೀನಾದ ವಿರುದ್ಧ ಪಶ್ಚಿಮ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕಾದ ಅಗತ್ಯವಿದೆ ಎಂದು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಒಟ್ಟಾವಾ: ಆಗಾಗ್ಗೆ ಪಶ್ಚಿಮದ ರಾಷ್ಟ್ರಗಳನ್ನು ಪರಸ್ಪರ ಎತ್ತಿಕಟ್ಟುವ ನಾಟಕವಾಡುತ್ತಿರುವ ಚೀನಾದ ವಿರುದ್ಧ ಪಶ್ಚಿಮ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕಾದ ಅಗತ್ಯವಿದೆ ಎಂದು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಚೀನಾದ ಹೆಚ್ಚಿನ ಬಲವಂತದ ರಾಜತಾಂತ್ರಿಕತೆ ವಿರುದ್ಧ ಸಮಾನ ಮನಸ್ಕ ರಾಷ್ಟ್ರಗಳು ಒಟ್ಟಾಗಬೇಕು ಎಂದು ಕೆನಡಾದ ಟೆಲಿವಿಷನ್ ನೆಟ್ ವರ್ಕ್ ಗ್ಲೋಬಲ್ ಟೆಲಿವಿಷನ್ ಗೆ ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ಟ್ರುಡೊ ಹೇಳಿದ್ದಾರೆ. 

ನಾವು ಒಟ್ಟಾಗಿ ಅತ್ಯುತ್ತಮವಾದ ಕೆಲಸ ಮಾಡಬೇಕಾದ ಅಗತ್ಯವಿದೆ ಮತ್ತು ದೃಢವಾಗಿ ನಿಲ್ಲಬೇಕಾಗಿದೆ. ಇದರಿಂದ ಚೀನಾ ನಾಟಕ ವಾಡಲು ಸಾಧ್ಯವಿಲ್ಲ ಮತ್ತು ನಮ್ಮಲ್ಲಿಯೇ ಪರಸ್ಪರ ಎತ್ತಿಕಟ್ಟಿ ವಿಭಜಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ನಾವು ಸ್ಪರ್ಧೆ ನೀಡುವಂತಹರಾಗಿದ್ದು, ಮುಕ್ತ ಮಾರುಕಟ್ಟೆ ಹಾದಿಯಲ್ಲಿ ಚೀನಾ ಸಮಯಕ್ಕೆ ತಕ್ಕಂತೆ ನಮ್ಮಲ್ಲಿಯೇ ಪರಸ್ಪರ ಎತ್ತಿಕಟ್ಟುವ ನಾಟಕವಾಡುತ್ತಿದೆ. ನಾವುಗಳು ಅತ್ಯುತ್ತಮವಾಗಿ ಒಟ್ಟಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ ಮತ್ತು ಸದೃಢವಾಗಿ ನಿಲ್ಲಬೇಕಾಗಿದೆ. ಇದರಿಂದ ಚೀನಾ ನಮ್ಮನ್ನು ವಿಭಜಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. 

ಈ ತಿಂಗಳ ಆರಂಭದಲ್ಲಿ 2022ರ ಬೀಜಿಂಗ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್  ಗೇಮ್ಸ್ ಗಾಗಿ ರಾಜತಾಂತ್ರಿಕತೆಯನ್ನು ಬಹಿಷ್ಕರಿಸಿ ಕೆನಡಾ ಪ್ರಧಾನಿ ಘೋಷಿಸಿದ್ದರು.  ಚೀನಾದಲ್ಲಿ ಮಾನವ ಹಕ್ಕು ಉಲ್ಲಂಘನೆ ವರದಿಯಿಂದ ಕೆನಡಾ ಅಸಮಾಧಾನಗೊಂಡಿದ್ದು, ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಗೇಮ್ಸ್ ಗಾಗಿ ರಾಜತಾಂತ್ರಿಕ ಪ್ರತಿನಿಧಿಗಳನ್ನು ಬೀಚಿಂಗ್ ಗೆ ಕಳುಹಿಸುವುದಿಲ್ಲ , ಈ ಕ್ರೀಡಾಕೂಟದಲ್ಲಿ ನಮ್ಮ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಲು ಬೆಂಬಲವನ್ನು ಮುಂದುವರೆಸುವುದಾಗಿ  ಟ್ರುಡೋ ಹೇಳಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

SCROLL FOR NEXT