ವಿದೇಶ

ಉಯಿಘರ್ ಮುಸ್ಲಿಮರ ವಿಷಯದಲ್ಲಿ ಚೀನಾ ಕ್ರಮ ಸರಿ: ಇಮ್ರಾನ್ ಖಾನ್‌

Nagaraja AB

ಇಸ್ಲಾಮಾಬಾದ್: ಉಯಿಘರ್ ಮುಸ್ಲಿಮರನ್ನು ಕಾನ್ಸಂಟ್ರೇಶನ್ ಕ್ಯಾಂಪ್ ಗಳಲ್ಲಿ ಚೀನಾ ಬಂಧಿಸಿರುವ ಬಗ್ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ. ಚೀನಾದ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಉಯಿಘರ್ ಮುಸ್ಲಿಮರ ವಿಷಯದಲ್ಲಿ ಪಾಶ್ಚಿಮಾತ್ಯ ಮಾಧ್ಯಮಗಳು ಅತಿರಂಜಿತ ವರದಿ ಮಾಡುತ್ತಿವೆ. ಮಾಧ್ಯಮ ವರದಿಗಳಿಗೆ ಸಂಪೂರ್ಣ ಭಿನ್ನ ವಾತಾವರಣವಿದೆ ಎಂದು ಅವರು ಹೇಳಿದರು.

ಚೀನಾದೊಂದಿಗೆ ನಾವು ನಿಕಟ ಸಂಬಂಧ ಹೊಂದಿದ್ದೇವೆ. ಹಾಗಾಗಿ ಈ ವಿಷಯದಲ್ಲಿ  ಚೀನಾ ದೃಷ್ಟಿಕೋನವನ್ನು ನಾವು ಬೆಂಬಲಿಸಲಿದ್ದೇವೆ ಎಂದು ಇಮ್ರಾನ್ ಪ್ರತಿಕ್ರಿಯಿಸಿದ್ದಾರೆ. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ವ್ಯಾಪಕವಾಗಿದೆ. ಆದರೆ ಮಾಧ್ಯಮಗಳು ಅವುಗಳನ್ನು ನಿರ್ಲಕ್ಷಿಸಿ ಕೇವಲ ಹಾಂಗ್ ಕಾಂಗ್ ಬಗ್ಗೆ ಗಮನ ಹರಿಸುತ್ತಿವೆ. ಇದು ಸಂಪೂರ್ಣ ವಂಚನೆ ಎಂದು ದೂರಿದ್ದಾರೆ. 

ಕಾಶ್ಮೀರದಂತಹ ಪ್ರದೇಶದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಆದರೆ ಪಾಶ್ಚಿಮಾತ್ಯ ಮಾಧ್ಯಮಗಳು ಅದರ ಬಗ್ಗೆ ಬಾಯಿಬಿಡುತ್ತಿಲ್ಲ ಎಂದು ಇಮ್ರಾನ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಹಲವಾರು ಮಂದಿ ಉಯಿಘರ್ ಮುಸ್ಲಿಮರನ್ನು ನಿರ್ಬಂಧಿಸಿ, ಬೆದರಿಕೆ ಹಾಕುತ್ತಿರುವ ಬಗ್ಗೆ ಅಮೆರಿಕಾ ಕಾಂಗ್ರೆಸ್ ಆಯೋಗ   ವರದಿಯನ್ನು ಬಿಡುಗಡೆ ಮಾಡಿದೆ. ಉಯಿಘರ್ ಮುಸ್ಲಿಮರ ವಿಷಯದಲ್ಲಿ ಚೀನಾ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಎಂದು ಆಯೋಗ ಹೇಳಿದೆ.

SCROLL FOR NEXT