ಇಮ್ರಾನ್ ಖಾನ್ 
ವಿದೇಶ

ಸೇನೆಗೆ ಮಕ್ಕಳ ಸೇರ್ಪಡೆ: ಅಮೆರಿಕಾದ ವಾದವನ್ನು ತಿರಸ್ಕರಿಸಿದ ಪಾಕಿಸ್ತಾನ

ಅಮೆರಿಕದ ಚೈಲ್ಡ್ ಸೋಲ್ಜರ್ಸ್ ಪ್ರಿವೆನ್ಷನ್ ಆಕ್ಟ್  (ಸಿಎಸ್‌ಪಿಎ) ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವುದಕ್ಕೆ ಪಾಕಿಸ್ತಾನ ತನ್ನ ಅಸಮ್ಮತಿ ಸೂಚಿಸಿದೆ.

ಇಸ್ಲಾಮಾಬಾದ್: ಅಮೆರಿಕದ ಚೈಲ್ಡ್ ಸೋಲ್ಜರ್ಸ್ ಪ್ರಿವೆನ್ಷನ್ ಆಕ್ಟ್  (ಸಿಎಸ್‌ಪಿಎ) ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವುದಕ್ಕೆ ಪಾಕಿಸ್ತಾನ ತನ್ನ ಅಸಮ್ಮತಿ ಸೂಚಿಸಿದೆ. ಈ ಕ್ರಮವು "ವಾಸ್ತವಿಕವಾದ ದೀಷ ಹಾಗೂ ತಿಳುವಳಿಕೆ ಕೊರತೆ"ಯಿಂದ ಕೂಡಿದೆ. ಅಲ್ಲದೆ ಪಾಕಿಸ್ತಾನದ ವಿರುದ್ಧದ "ಆಧಾರರಹಿತ ಸಮರ್ಥನೆಗಳನ್ನು" ಹೊಂದಿದ್ದು ಅದನ್ನು ಪರಿಶೀಲಿಸಬೇಕು ಎಂದು ಅಮೆರಿಕಾಗೆ ಒತ್ತಾಯಿಸಿದೆ.

2020 ರಲ್ಲಿ ಸೈನ್ಯದಲ್ಲಿ ಮಕ್ಕಳನ್ನು ನೇಮಕ ಮಾಡಿದ್ದಅಥವಾ ಬಳಸಿದ ದೇಶಗಳ ಪಟ್ಟಿಗೆ ಯುನೈಟೆಡ್ ಸ್ಟೇಟ್ಸ್ ಪಾಕಿಸ್ತಾನವನ್ನು ಸೇರಿಸಿದೆ. ಈ ಪಟ್ಟಿಯಲ್ಲಿರುವ  ದೇಶಗಳಿಗೆ ಮಿಲಿಟರಿ ನೆರವಿನ ಮೇಲೆ ನಿರ್ಬಂಧ ಹೇರಲು ಅವಕಾಶವಾಗಲಿದೆ.

ಅಮೆರಿಕಾದ  ಈ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪಾಕಿಸ್ತಾನದ ವಿದೇಶಾಂಗ ಕಚೇರಿ ಶನಿವಾರ ಹೇಳಿಕೆ ನೀಡಿ ವರದಿಯನ್ನು ಪ್ರಕಟಿಸುವ ಮೊದಲು ಯಾವುದೇ ಆಡಳಿತ ಸಂಸ್ಥೆಯನ್ನು ಅಮೆರಿಕಾ  ಸಂಪರ್ಕಿಸಿಲ್ಲ. "ತೀರ್ಮಾನಕ್ಕೆ ಬಂದ ಆಧಾರದ ಬಗ್ಗೆ ಯಾವುದೇ ವಿವರಗಳನ್ನು ನೀಡಲಾಗಿಲ್ಲ" ಎಂದು ಹೇಳಿರುವುದಾಗಿ ಡಾನ್ ವರದಿ ಮಾಡಿದೆ.

"ಭಯೋತ್ಪಾದಕ ಗುಂಪುಗಳು ಸೇರಿದಂತೆ ರಾಷ್ಟ್ರದ ಆಡಳಿತೇತರ ಸಶಸ್ತ್ರ ಗುಂಪುಗಳ ವಿರುದ್ಧ ಹೋರಾಡುವಲ್ಲಿ ಪಾಕಿಸ್ತಾನದ ಪ್ರಯತ್ನಗಳು ಉತ್ತಮವಾಗಿದೆ  " ಎಂದು ಪಾಕಿಸ್ತಾನವು ಯಾವುದೇ ಆಡಳಿತೇತರ  ಶಸ್ತ್ರ ಗುಂಪು ಮಕ್ಕಳನ್ನು ಸೇನೆಗೆ ನೇಮಕ ಮಾಡುವ ಬಗ್ಗೆ  ಅಥವಾ ಸೈನಿಕರಾಗಿ ಬಳಸುವ ಬಗ್ಗೆ ನಾವು ಬೆಂಬಲಿಸುವುದಿಲ್ಲಎಂದು ಹೇಳಿಕೆಯು ಒತ್ತಿಹೇಳಿತು.

ಪಾಕಿಸ್ತಾನವು "ಈ ಉಪಟಳದ ವಿರುದ್ಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ"ಹೋರಾಡಲು ಬದ್ಧವಾಗಿದೆ ಎಂದು ಅದು ಹೇಳಿದೆ. ಸಿಎಸ್‌ಪಿಎ ಪಟ್ಟಿಯು ಸೈನ್ಯದಲ್ಲಿ ಮಕ್ಕಳನ್ನು ನೇಮಕ ಮಾಡಿದ ಅಥವಾ ಬಳಸಿದ ವಿದೇಶಿ ಸರ್ಕಾರಗಳನ್ನು ಒಳಗೊಂಡಿದೆ. ಈ ಕುರಿತು ಪರಿಶೀಲಿಸಲ್ಪಟ್ಟ ಘಟಕಗಳಲ್ಲಿ ಸಶಸ್ತ್ರ ಪಡೆಗಳು, ಪೊಲೀಸ್, ಇತರ ಭದ್ರತಾ ಪಡೆಗಳು ಮತ್ತು ಸರ್ಕಾರ ಬೆಂಬಲಿತ ಸಶಸ್ತ್ರ ಗುಂಪುಗಳು ಸೇರಿವೆ. 2010 ರಲ್ಲಿ ಮೊದಲ ಸಿಎಸ್‌ಪಿಎ ಪಟ್ಟಿಯಲ್ಲಿ ಆರು ಸರ್ಕಾರಗಳನ್ನು ಗುರುತಿಸಲಾಗಿದೆ. ಈ ವರ್ಷ ಈ ಪಟ್ಟಿಯಲ್ಲಿರುವ ದೇಶಗಳ ಸಂಖ್ಯೆ 15 ಕ್ಕೆ ತಲುಪಿದೆ, ಇದುವರೆಗೆ ಪಾಕಿಸ್ತಾನ ಹಾಗೂ ಟರ್ಕಿ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ಮಕ್ಕಳನ್ನು ಸೈನ್ಯಕ್ಕೆ ಸೇರಿಸಲಾಗಿದೆ ಎಂದು ಪಟ್ಟಿ ವಿವರಿಸಿದೆ.

ಸಿಎಸ್‌ಪಿಎ ಈ ಕೆಳಗಿನ ಯುಎಸ್ ಕಾರ್ಯಕ್ರಮಗಳಟ್ಟಿಮಾಡಿದ ಸರ್ಕಾರಗಳನ್ನು ನಿಷೇಧಿಸುವ,ಅಂತರರಾಷ್ಟ್ರೀಯ ಮಿಲಿಟರಿ ಶಿಕ್ಷಣ ಮತ್ತು ತರಬೇತಿ, ವಿದೇಶಿ ಮಿಲಿಟರಿ ಹಣಕಾಸು, ಹೆಚ್ಚುವರಿ ರಕ್ಷಣಾ ಸಾಮಗ್ರಿ  ಮತ್ತು ಶಾಂತಿಪಾಲನಾ ಕಾರ್ಯಾಚರಣೆಗಳು. ಶಾಂತಿಪಾಲನಾ ಕಾರ್ಯಾಚರಣೆ ಪ್ರಾಧಿಕಾರಕ್ಕೆ ಅನುಸಾರವಾಗಿ ಕೈಗೊಂಡ ಕೆಲವು ಕಾರ್ಯಕ್ರಮಗಳಿಗೆ ವಿನಾಯಿತಿ ನೀಡಿಕೆ ಅಂತಹ ಸರ್ಕಾರಗಳಿಗೆ ಮಿಲಿಟರಿ ಸಾಮಗ್ರಿಗಳ  ನೇರ ವಾಣಿಜ್ಯ ಮಾರಾಟಕ್ಕೆ ಪರವಾನಗಿ ನೀಡುವುದನ್ನು ಇದು ನಿಷೇಧಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT