ಎರಿಕ್ ಗಾರ್ಸೆಟ್ಟಿ 
ವಿದೇಶ

ಎರಿಕ್ ಗಾರ್ಸೆಟ್ಟಿ ಭಾರತದ ನೂತನ ರಾಯಭಾರಿಯಾಗಿ ನೇಮಕ

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶುಕ್ರವಾರ ಲಾಸ್ ಏಂಜಲೀಸ್ ಮೇಯರ್ ಎರಿಕ್ ಗಾರ್ಸೆಟ್ಟಿಯವರನ್ನು ಭಾರತದ ನೂತನ ರಾಯಭಾರಿಯಾಗಿ ನೇಮಕ ಮಾಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶುಕ್ರವಾರ ಲಾಸ್ ಏಂಜಲೀಸ್ ಮೇಯರ್ ಎರಿಕ್ ಗಾರ್ಸೆಟ್ಟಿಯವರನ್ನು ಭಾರತದ ನೂತನ ರಾಯಭಾರಿಯಾಗಿ ನೇಮಕ ಮಾಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಅವರು ಸೆನೆಟ್ ಸಮ್ಮತಿ ದೃಡಿಕರಣ ಪಡೆದರೆ 'ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅಧ್ಯಯನ ಮಾಡಿದ 50 ವರ್ಷದ ಗಾರ್ಸೆಟ್ಟಿ 2021 ರ ಜನವರಿ ನಂತರ ನವದೆಹಲಿಯಲ್ಲಿ ಅಮೆರಿಕ ರಾಯಭಾರಿಯಾಗಿ ಸದ್ಯ ಕೆಲಸ ನಿರ್ವಹಿಸುತ್ತಿರುವ ಕೆನ್ನೆತ್ ಜಸ್ಟರ್ ಅವರ ಉತ್ತರಾಧಿಕಾರಿಯಾಗಿ ಮುಂದುವರದಿಯಲಿದ್ದಾರೆ. 

ಎರಿಕ್ ಎಂ ಗಾರ್ಸೆಟ್ಟಿ 2013 ರಿಂದ ಲಾಸ್ ಏಂಜಲೀಸ್ ನಗರದ ಮೇಯರ್ ಆಗಿದ್ದು, ಸಿಟಿ ಕೌನ್ಸಿಲ್ ಸದಸ್ಯರಾಗಿ 12 ವರ್ಷಗಳ ನಂತರ, ಕೌನ್ಸಿಲ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಯುಎಸ್ ನೇವಿ ರಿಸರ್ವ್ ಕಾಂಪೊನೆಂಟ್‌ನಲ್ಲಿ ಗುಪ್ತಚರ ಅಧಿಕಾರಿಯಾಗಿ 12 ವರ್ಷಗಳಲ್ಲಿ ಗಾರ್ಸೆಟ್ಟಿ  ಕಮಾಂಡರ್, ಯುಎಸ್ ಪೆಸಿಫಿಕ್ ಫ್ಲೀಟ್ ಮತ್ತು ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿಯಡಿಯಲ್ಲಿ ಸೇವೆ ಸಲ್ಲಿಸಿದರು, 2017 ರಲ್ಲಿ ಲೆಫ್ಟಿನೆಂಟ್ ಆಗಿ ನಿವೃತ್ತರಾದರು.

ಅವರು ಆಗ್ನೇಯ ಏಷ್ಯಾ ಮತ್ತು ಈಶಾನ್ಯ ಆಫ್ರಿಕಾದಲ್ಲಿ ರಾಷ್ಟ್ರೀಯತೆ, ಜನಾಂಗೀಯತೆ ಮತ್ತು ಮಾನವ ಹಕ್ಕುಗಳ ಕುರಿತು ಕ್ಷೇತ್ರಕಾರ್ಯಗಳನ್ನು ನಡೆಸಿದ್ದಾರೆ. ಅವರು ಯುಎಸ್ ಮೇಯರ್‌ಗಳ ಸಮ್ಮೇಳನದಲ್ಲಿ ಲ್ಯಾಟಿನೋ ಅಲೈಯನ್ಸ್ ಆಫ್ ಮೇಯರ್‌ಗಳ ಸ್ಥಾಪಕ ಅಧ್ಯಕ್ಷರಾಗಿದ್ದಾರೆ, ಲ್ಯಾಟಿನೋ ಚುನಾಯಿತ ಮತ್ತು ನೇಮಕಗೊಂಡ ಅಧಿಕಾರಿಗಳ ರಾಷ್ಟ್ರೀಯ ಸಂಘದ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

"ಇಂದು, ಭಾರತದ ಯುಎಸ್ ರಾಯಭಾರಿಯಾಗಿ ಸೇವೆ ಸಲ್ಲಿಸಲು ನಾನು ಅವರ ನಾಮನಿರ್ದೇಶಿತ ಎಂದು ಅಧ್ಯಕ್ಷರು ಘೋಷಿಸಿದರು. ಈ ಸ್ಥಾನದಲ್ಲಿ ಸೇವೆ ಸಲ್ಲಿಸಲು ಅವರ ನಾಮನಿರ್ದೇಶನವನ್ನು ಸ್ವೀಕಾರಕ್ಕೆ  ನನಗೆ ಗೌರವವಿದೆ" ಎಂದು ಅವರು ಲಾಸ್ ಏಂಜಲೀಸ್ ಮೇಯರ್ ಅವರಿಗೆ ಸೇರಿದ್ದ  ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದಾರೆ.

"ನಾನು ಕಾರ್ಯಕರ್ತನಾಗಿ, ಶಿಕ್ಷಕನಾಗಿ, ನೌಕಾ ಅಧಿಕಾರಿಯಾಗಿ, ಸಾರ್ವಜನಿಕ ಸೇವಕನಾಗಿ, ಮತ್ತು ದೃಢವಾಗಿದ್ದು, ಮುಂದಿನ ರಾಯಭಾರಿಯಾಗಿ ಅದೇ ಬದ್ದತೆಯನ್ನು ಮುಂದುವರಿಸುವೆ" ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಡೆನಿಸ್ ಕ್ಯಾಂಪ್ಬೆಲ್ ಬಾಯರ್ ಮತ್ತು ಪೀಟರ್ ಡಿ. ಹಾಸ್ ಅವರನ್ನು ಕ್ರಮವಾಗಿ ಮೊನಾಕೊ ಮತ್ತು ಬಾಂಗ್ಲಾದೇಶದ ರಾಯಭಾರಿಗಳಾಗಿ ನಾಮನಿರ್ದೇಶನ ಮಾಡಲಾಗಿದ್ದು ಬರ್ನಾಡೆಟ್ಟೆ ಎಂ. ಮೀಹನ್ ಅವರನ್ನು ಚಿಲಿಯ ರಾಯಭಾರಿಯಾಗಿ ನೇಮಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT