ನಟ ದಿಲೀಪ್ ಕುಮಾರ್ 
ವಿದೇಶ

ಆತ ಕೇವಲ ನಟ ಅಲ್ಲ, ಒಂದು ಪ್ರತಿಷ್ಠಾನವೂ ಹೌದು..: ಪಾಕ್ ನಲ್ಲಿರುವ ದಿಲೀಪ್ ಕುಮಾರ್ ಸೋದರ ಸಂಬಂಧಿ

ದಿವಂಗತ ನಟ ದಿಲೀಪ್ ಕುಮಾರ್ ಬಗ್ಗೆ ಪಾಕಿಸ್ತಾನದಲ್ಲಿ ಸೆನೆಟರ್ ಆಗಿರುವ ಅವರ ಸೋದರ ಸಂಬಂಧಿ ಮೊಹ್ಸೀನ್ ಅಜೀಜ್ ಮಾತನಾಡಿದ್ದು ದಿಲೀಪ್ ಕುಮಾರ್ ಕಲಿಯುವವರಿಗೆ ವಿದ್ಯಾಲಯವಿದ್ದಂತೆ ಎಂದು ಹೇಳಿದ್ದಾರೆ. 

ಪೇಷಾವರ್: ದಿವಂಗತ ನಟ ದಿಲೀಪ್ ಕುಮಾರ್ ಬಗ್ಗೆ ಪಾಕಿಸ್ತಾನದಲ್ಲಿ ಸೆನೆಟರ್ ಆಗಿರುವ ಅವರ ಸೋದರ ಸಂಬಂಧಿ ಮೊಹ್ಸೀನ್ ಅಜೀಜ್ ಮಾತನಾಡಿದ್ದು ದಿಲೀಪ್ ಕುಮಾರ್ ಪ್ರತಿಷ್ಠಾನವೂ ಹೌದು ಎಂದು ಹೇಳಿದ್ದಾರೆ. 

ದಿಲೀಪ್ ಕುಮಾರ್ ಅವರಂತಹ ವ್ಯಕ್ತಿಗಳು ಶತಮಾನಕ್ಕೆ ಒಬ್ಬರು ಎಂದು ಸಂತಾಪ ಸಂದೇಶದಲ್ಲಿ ಮೊಹ್ಸೀನ್ ಅಜೀಜ್ ತಿಳಿಸಿದ್ದಾರೆ. 

1922 ರ ಡಿಸೆಂಬರ್ 11 ರಂದು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಜನಿಸಿದ್ದ ದಿಲೀಪ್ ಕುಮಾರ್, ದೀರ್ಘಾವಧಿಯ ಅನಾರೋಗ್ಯದಿಂದ ಕಳೆದ ವಾರ ಮುಂಬೈ ನ ಆಸ್ಪತ್ರೆಯಲ್ಲಿ ನಿಧನರಾದರು. 

"ದಿಲೀಪ್ ಕುಮಾರ್ ಅವರಂತಹ ವ್ಯಕ್ತಿಗಳು ಶತಮಾನಕ್ಕೆ ಒಬ್ಬರಾಗಿರುತ್ತಾರೆ, ಅವರು ಕೇವಲ ನಟರಷ್ಟೇ ಅಲ್ಲ, ಪ್ರತಿಷ್ಠಾನವೂ ಹೌದು, ಅವರ ಕಠಿಣ ಪರಿಶ್ರಮದ ಮೂಲಕ ಲಕ್ಷಾಂತರ ಮಂದಿಯ ಹೃದಯ ಗೆದ್ದಿದ್ದಾರೆ ಎಂದು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ನಾಯಕ ಅಜೀಜ್ ಹೇಳಿದ್ದಾರೆ.

1998 ರಲ್ಲಿ ದಿಲೀಪ್ ಕುಮಾರ್ ಅವರಿಗೆ ಪಾಕಿಸ್ತಾನ ಸರ್ಕಾರ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ನಿಶಾನ್-ಎ-ಇಮ್ತಿಯಾಜ್ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?