ವಿದೇಶ

ಇರಾಕ್ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ, 54 ಮಂದಿ ಸಾವು

Raghavendra Adiga

ದೋಹಾ:  ಇರಾಕ್‌ನ ನಾಸಿರಿಯಾದಲ್ಲಿ ಕೋರೊನ ಆಸ್ಪತ್ರೆಯಲ್ಲಿ ಸಂಭವಿಸಿದ ಬೀಕರ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 54 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

"ನಾಸಿರಿಯಾದ ಇಮಾಮ್ ಹುಸೇನ್ ಆಸ್ಪತ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಪಿದೆ" ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಆಮ್ಲಜನಕ ಟ್ಯಾಂಕ್ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಸ್ಥತಿ ನಿಭಾಯಿದ್ದಾರೆ . ಅನೇಕ ರೋಗಿಗಳು ಇನ್ನೂ ಕಾಣೆಯಾಗಿದ್ದು ಬೆಂಕಿಯಿಂದ ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಆರೋಗ್ಯ ಸಚಿವಾಲಯವು ಬೆಂಕಿಯ ಕಾರಣದ ಬಗ್ಗೆ ಅಧಿಕೃತ ಕಾರಣ ತಿಳಿಸಿಲ್ಲ.

ಕೇವಲ ಮೂರು ತಿಂಗಳ ಹಿಂದೆ ತೆರೆಯಲಾದ ಹೊಸ ವಾರ್ಡ್‌ನಲ್ಲಿ 70 ಹಾಸಿಗೆಗಳಿವೆ ಎಂದು ಇಬ್ಬರು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ಅವರು ನಿಯಮಗಳಿಗೆ ಅನುಸಾರ ಹೆಸರು ಬಹಿರಂಗಪಡಿಸದೆ ಮಾದ್ಯಮದವರೊಂದಿಗೆ ಮಾತನಾಡಿದ್ದಾರೆ.

ಬೆಂಕಿ ಮೊದಲು ಕಾಣಿಸಿಕೊಂಡಾಗ ವಾರ್ಡ್ ಒಳಗೆ ಕನಿಷ್ಠ 63 ರೋಗಿಗಳಿದ್ದರು ಎಂದು ಧಿ ಖಾರ್ ಆರೋಗ್ಯ ಇಲಾಖೆಯ ವಕ್ತಾರ ಅಮ್ಮರ್ ಅಲ್-ಜಮಿಲಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಈ ವರ್ಷ ಇರಾಕಿ ಆಸ್ಪತ್ರೆಯಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಮುನ್ನ ಏಪ್ರಿಲ್ ನಲ್ಲಿ ಬಾಗ್ದಾದ್ ನ ಇಬ್ನ್ ಅಲ್-ಖತೀಬ್ ಆಸ್ಪತ್ರೆಯಲ್ಲಿ ಬೆಂಕಿ ಅನಾಹುತವಾಗಿ ಕನಿಷ್ಠ 82 ಜನರು ಸಾವನ್ನಪ್ಪಿದರು, ಆಮ್ಲಜನಕ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತ್ತು.

ಆ ಘಟನೆಯು ಇರಾಕ್‌ನ ಆಸ್ಪತ್ರೆಗಳಲ್ಲಿ ವ್ಯಾಪಕ ನಿರ್ಲಕ್ಷ್ಯ ಮತ್ತು ವ್ಯವಸ್ಥಿತ ವಂಚನೆಯನ್ನು ಬೆಳಕಿಗೆ ತಂದಿತು. ಆದರೆ ವೈದ್ಯರು ಕಳಪೆ  ಸುರಕ್ಷತಾ ನಿಯಮಗಳನ್ನು ನಿರಾಕರಿಸಿದ್ದಾರೆ

SCROLL FOR NEXT