ವಿದೇಶ

ಮ್ಯಾನ್ಮಾರ್: ಪದಚ್ಯುತ ನಾಯಕಿ ಸೂ ಕಿ ವಿರುದ್ಧ ಮತ್ತೆ 4 ಹೆಚ್ಚುವರಿ ಪ್ರಕರಣ ದಾಖಲು

Srinivasamurthy VN

ರಂಗೂನ್: ಮ್ಯಾನ್ಮಾರ್ ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂ ಕಿ ವಿರುದ್ಧ ಹೆಚ್ಚುವರಿಯಾಗಿ 4 ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಆಂಗ್ ಸಾನ್ ಸೂ ಕಿ ಅವರ ಪರ ವಕೀಲರು, ಆಂಗ್ ಸಾನ್ ಸೂ ಕಿ ವಿರುದ್ಧ ಹೆಚ್ಚುವರಿಯಾಗಿ 4 ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಈ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಆದರೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ ಎಂದು ಹೇಳಿದ್ದಾರೆ.

ಆಂಗ್ ಸಾನ್ ಸೂ ಕಿ ಮಾತ್ರವಲ್ಲದೇ ಅವರ ಸರ್ಕಾರದಲ್ಲಿ ಸಚಿವರಾಗಿದ್ದ ಮಿನ್ ಥು ವಿರುದ್ಧವೂ 2 ಪ್ರಕರಣ ದಾಖಲಾಗಿರುವ ಮಾಹಿತಿ ಲಭಿಸಿದೆ. ಭ್ರಷ್ಟಾಚಾರದ ಆರೋಪ ಇಲ್ಲದಿದ್ದರೂ ಪ್ರಕರಣ ದಾಖಲಾಗಿರುವುದು ಅಚ್ಚರಿಯಾಗಿದೆ. ಈ ಬಗ್ಗೆ ವಿವರ ಪಡೆಯುತ್ತೇವೆ ಎಂದು ಆಂಗ್ಸಾನ್ ಸೂ ಕಿ ಅವರ ಕಾನೂನು  ಸಲಹೆಗಾರರ ತಂಡ ಹೇಳಿದೆ. 

ಈ ಪ್ರಕರಣಗಳನ್ನು ದೇಶದ 2ನೇ ಬೃಹತ್ ನಗರ ಮಂಡಾಲೇಯಲ್ಲಿ ದಾಖಲಿಸಿರುವುದರಿಂದ, 76 ವರ್ಷದ ಸೂ ಕಿ, ಈಗ ದೇಶದ 4 ನಗರಗಳಲ್ಲಿ ಕಾನೂನು ಸಮರ ಎದುರಿಸುವಂತಾಗಿದೆ. 

ಫೆಬ್ರವರಿ 1ರಂದು ಸೇನೆ ನಡೆಸಿದ ಕ್ಷಿಪ್ರ ಕ್ರಾಂತಿಯಿಂದ ಅಧಿಕಾರ ಕಳೆದುಕೊಂಡಿರುವ ಸೂ ಕಿ, ಅಂದಿನಿಂದ ಬಂಧನಲ್ಲಿದ್ದಾರೆ. ರಾಜಧಾನಿ ನೇಪಿಡಾವ್ಯ ನ್ಯಾಯಾಲಯದಲ್ಲಿ ಸೂ ಕಿ ವಿರುದ್ಧ ವಾಕಿಟಾಕಿ ರೇಡಿಯೋಗಳನ್ನು ಹೊಂದಿರುವುದು ಮತ್ತು ಕಾನೂನು ಬಾಹಿರವಾಗಿ ಆಮದು ಮಾಡಿಕೊಂಡಿರುವುದು, ಕೊರೋನ  ಸೋಂಕಿನ ವಿರುದ್ಧದ ನಿಯಮಗಳನ್ನು ಉಲ್ಲಂಘಿಸಿರುವ ಪ್ರಕರಣ ದಾಖಲಾಗಿದೆ. 

ಈ ಮಧ್ಯೆ, ಹಿಂಸಾಚಾರದಿಂದ ತತ್ತರಿಸಿರುವ ಮ್ಯಾನ್ಮಾರ್ನಲ್ಲಿ ಭಿನ್ನಾಭಿಪ್ರಾಯ ಪರಿಹಾರಕ್ಕೆ ಮಾತುಕತೆ ನಡೆಸುವಂತೆ ವಿಶ್ವಸಂಸ್ಥೆ ಕರೆ ನೀಡಿದೆ. 

SCROLL FOR NEXT