ವಿದೇಶ

ಸುಳ್ಳು ಸುದ್ದಿಯೊಂದಿಗೆ ಸಾಮಾಜಿಕ ಮಾಧ್ಯಮಗಳು 'ಜನರನ್ನು ಕೊಲ್ಲುತ್ತಿವೆ': ಬೈಡನ್

Nagaraja AB

ವಾಷಿಂಗ್ಟನ್:  ಕೊರೋನಾ ವೈರಸ್ ಮತ್ತು ಲಸಿಕೆ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿರುವ ಫೇಸ್ ಬುಕ್ ನಂತಹ ಸಾಮಾಜಿಕ ಮಾಧ್ಯಮಗಳನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಟೀಕಿಸಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ವೈರಸ್ ಮತ್ತು ಅದನ್ನು ತಡೆಗಟ್ಟುವ ಲಸಿಕೆಗಳ ಸುರಕ್ಷತೆ ಬಗ್ಗೆ ಫೇಸ್ ಬುಕ್ ನಂತಹ ಸಾಮಾಜಿಕ ಮಾಧ್ಯಮಗಳು ಸುಳ್ಳು ಸುದ್ದಿ ಹರಡುವ ಮೂಲಕ ಜನರನ್ನು ಕೊಲ್ಲುತ್ತಿವೆ ಎಂದರು. ಈ ಹಿಂದೆ ಲಸಿಕೆ ಪಡೆಯದವರಲ್ಲಿ ಕೋವಿಡ್-19 ಸಾಂಕ್ರಾಮಿಕವಾಗಿ ಹೊರಹೊಮ್ಮುತ್ತಿರುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಲಸಿಕೆ ಪಡೆಯದವರಲ್ಲಿ ಮಾತ್ರ ಸಾಂಕ್ರಾಮಿಕ ಇರುವುದಾಗಿ ಹೇಳುವ ಮೂಲಕ ಸಾಮಾಜಿಕ ಮಾಧ್ಯಮಗಳು ಜನರನ್ನು ಕೊಲ್ಲುತ್ತಿವೆ. ಲಸಿಕೆ ಪಡೆಯದ ಜನರು ಅಪಾಯದಲ್ಲಿರುವುದರಿಂದ ಲಸಿಕೆ ವ್ಯಾಪ್ತಿ ಕಡಿಮೆ ಪ್ರಮಾಣದಲ್ಲಿರುವ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳು ಇರುವುದನ್ನು ನಾವು ನೋಡುತ್ತಿದ್ದೇವೆ ಎಂದು ಅವರು ತಿಳಿಸಿದರು. 

ಕೊರೋನಾ ವೈರಸ್ ಬಗ್ಗೆ ಸುಳ್ಳು ಸುದ್ದಿ ಹರಡುವಿಕೆ ನಿಲ್ಲಿಸುವಲ್ಲಿ ಫೇಸ್ ಬುಕ್ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಆರೋಪಿಸಿದರು. 

SCROLL FOR NEXT