ಭಾರತದ ಅಮೆರಿಕ ರಾಯಭಾರಿ ಟಿ ಎಸ್ ಸಂಧು 
ವಿದೇಶ

ಅಮೆರಿಕ ಬೈಡನ್ ಸರ್ಕಾರದ 25 ಮಿಲಿಯನ್ ಕೋವಿಡ್-19 ಲಸಿಕೆ ಹಂಚಿಕೆ ಯೋಜನೆಯಲ್ಲಿ ಭಾರತ ಪ್ರಮುಖ ರಾಷ್ಟ್ರ: ರಾಯಭಾರಿ

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ದೂರವಾಣಿ ಸಂಭಾಷಣೆ ಕುರಿತು ಅಮೆರಿಕದ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಎಎನ್ ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ದೂರವಾಣಿ ಸಂಭಾಷಣೆ ಕುರಿತು ಅಮೆರಿಕದ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಎಎನ್ ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಎರಡೂ ದೇಶಗಳ ಉನ್ನತ ನಾಯಕರ ಮಧ್ಯೆ ನಡೆದ ಮಾತುಕತೆ ಉನ್ನತ ಮಟ್ಟದ ಸರಣಿ ಮಾತುಕತೆಯ ಮುಂದುವರಿದ ಭಾಗವಾಗಿದೆ. ಪ್ರಧಾನಿ ಮೋದಿಯವರು ಬೈಡನ್ ಆಡಳಿತದ ಈ 100 ದಿನಗಳಲ್ಲಿ ಎರಡು ಬಾರಿ ಫೋನ್ ಸಂಭಾಷಣೆ, ಎರಡು ಶೃಂಗಸಭೆ, ಕ್ವಾಡ್ ಮತ್ತು ಹವಾಮಾನ ಬದಲಾವಣೆ ಕುರಿತು ಮಾತುಕತೆ ನಡೆಸಿದ್ದಾರೆ ಎಂದರು.

ಕೋವಿಡ್-19 ಲಸಿಕೆ: ಇಬ್ಬರೂ ನಾಯಕರು ಭಾರತ-ಅಮೆರಿಕ ಸಹಭಾಗಿತ್ವದಲ್ಲಿ ಲಸಿಕೆಗಳ ಉತ್ಪಾದನೆ ಮತ್ತು ಹಂಚಿಕೆಯನ್ನು ವೃದ್ಧಿಪಡಿಸುವ ಕುರಿತು ಪರಸ್ಪರ ಸಹಕಾರ ನೀಡಲು ಒಲವು ತೋರಿಸಿದರು, ಕೋವಿಡ್ ನಿಂದಾಗಿ ಉಂಟಾಗಿರುವ ಜಾಗತಿಕ ಮಟ್ಟದ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳನ್ನು ಯಾವ ರೀತಿ ಪುನಶ್ಚೇತನಗೊಳಿಸಬಹುದು ಮತ್ತು ಕ್ವಾಡ್ ಬಗ್ಗೆ ಕೂಡ ಚರ್ಚೆ ನಡೆಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ತಗ್ಗಿದ ನಂತರ ಪರಿಸ್ಥಿತಿ ಸುಧಾರಿಸಿದ ಮೇಲೆ ಭಾರತಕ್ಕೆ ಭೇಟಿ ನೀಡುವಂತೆ ಕಮಲಾ ಹ್ಯಾರಿಸ್ ಅವರನ್ನು ಪ್ರಧಾನಿ ಮೋದಿ ಕೇಳಿಕೊಂಡರು ಎಂದು ಸಂಧು ಹೇಳಿದ್ದಾರೆ.

ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಪ್ರಧಾನಿ ಮೋದಿ ನಡುವಿನ ಮಾತುಕತೆ ಸೌಹಾರ್ದಯುತವಾಗಿತ್ತು, ಅಮೆರಿಕಾದಿಂದ ಕೋವಿಡ್ ಲಸಿಕೆ ಪೂರೈಕೆಯ ಭರವಸೆ ನೀಡಿದ ಕಮಲಾ ಹ್ಯಾರಿಸ್ ಅವರಿಗೆ ಮೋದಿಯವರು ಧನ್ಯವಾದ ಹೇಳಿದರು. ಅಮೆರಿಕ ಸರ್ಕಾರದ ನೆರವು, ಬೆಂಬಲವನ್ನು ಕೂಡ ಪ್ರಧಾನಿ ಮೋದಿ ಶ್ಲಾಘಿಸಿದರು ಎಂದರು.

ಅಧ್ಯಕ್ಷ ಬೈಡನ್ 25 ಮಿಲಿಯನ್ ಲಸಿಕೆಗಳ ಜಾಗತಿಕ ಹಂಚಿಕೆ ಯೋಜನೆಯನ್ನು ಘೋಷಿಸಿದ್ದಾರೆ. 2 ವಿಭಾಗಗಳ ಅಡಿಯಲ್ಲಿ ವಿತರಣೆ ಮಾಡಲಿದ್ದು, ಭಾರತ ಎರಡೂ ವಿಭಾಗಗಳಲ್ಲಿ ಗುರುತಿಸಿಕೊಂಡಿದ್ದು, ಕೋವಾಕ್ಸ್ ಮತ್ತು ನೇರ ಪೂರೈಕೆಯ ಅಡಿಯ ಹಂಚಿಕೆಯ ಪ್ರಕಾರ ಭಾರತ ಲಸಿಕೆಗಳನ್ನು ಪಡೆಯಲಿದೆ ಎಂದು ಭಾರತದ ಅಮೆರಿಕ ರಾಯಭಾರಿ ತರಂಜಿತ್ ಸಿಂಗ್ ಸಂಧು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT