ವಿದೇಶ

ಚೀನಾದಿಂದ ಮತ್ತೊಂದು ಶಾಕಿಂಗ್ ನ್ಯೂಸ್: ಬಾವಲಿಗಳಲ್ಲಿ ಹೊಸ ಕೊರೋನಾ ವೈರಸ್ ಕಂಡುಹಿಡಿದ ಸಂಶೋಧಕರು!

Nagaraja AB

ಬೀಜಿಂಗ್: ಕೋವಿಡ್-19 ಸಾಂಕ್ರಾಮಿಕದ ಹುಟ್ಟಿನ ತನಿಖೆಗೆ ಬಗ್ಗೆ ಒತ್ತಾಯಗಳು ಹೆಚ್ಚಾಗುತ್ತಿರುವಂತೆಯೇ, ಚೀನಾದ ಸಂಶೋಧಕರು ಬಾವಲಿಗಳಲ್ಲಿ ಹೊಸ ಕೊರೋನಾವೈರಸ್ ಕಂಡುಹಿಡಿದಿದ್ದಾರೆ. ಅವುಗಳಲ್ಲಿ ರೈನೋಲೋಫಸ್ ಪುಸಿಲಸ್ ವೈರಸ್ ಒಂದಾಗಿದ್ದು, ಬಹುಶಃ ಇದುವರೆಗಿನ ಕೋವಿಡ್ -19 ವೈರಸ್‌ಗೆ ಇದೇ ಕಾರಣವಾಗಿರಬಹುದು ಎಂದು ಚೀನಾ ಸಂಶೋಧಕರು ಹೇಳಿದ್ದಾರೆ. 

ಚೀನಾದ ಯುನಾನ್ ಪ್ರಾಂತ್ಯದ ಸಣ್ಣ ಪ್ರದೇಶದಲ್ಲಿ ನಡೆದಿರುವ ಸಂಶೋಧನೆಯಲ್ಲಿ ಬಾವಲಿಗಳಲ್ಲಿ ಎಷ್ಟು ಕೊರೋನಾವೈರಸ್ ಇರುತ್ತವೆ, ಎಷ್ಟು ಜನರಿಗೆ ಮತ್ತು ಹಂದಿಗಳು, ಜಾನುವಾರುಗಳು, ಇಲಿಗಳು, ಬೆಕ್ಕುಗಳು, ನಾಯಿಗಳು ಮತ್ತು ಕೋಳಿಗಳು ಒಳಗೊಂಡಂತೆ ಎಷ್ಟು ವನ್ಯಜೀವಿಗಳಿಗೆ ಹರಡುವ ಸಾಮರ್ಥ್ಯವನ್ನು ಹೊಂದಿವೆ ಎಂಬುದರ ಮೇಲೆ ಚೀನಾ ಬೆಳಕು ಚೆಲ್ಲಿದೆ.

2020 ರ ಆರಂಭದಲ್ಲಿ ವುಹಾನ್ ನಲ್ಲಿ ಕಾಣಿಸಿಕೊಂಡ ನೋವಲ್ ಕೊರೋನಾವೈರಸ್, ಸಾರ್ಸ್ -ಕೋವ್-2 ಜಾಗತಿಕ ಸಾಂಕ್ರಾಮಿಕವಾಗಿ ಹರಡಿ, ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡಿದೆ. ಈ ಮಧ್ಯೆ ಬಾವಲಿಗಳಲ್ಲಿ ಚೀನಾ ಸಂಶೋಧಕರು ಹೊಸ ಕೊರೋನಾವೈರಸ್ ಕಂಡುಹಿಡಿದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಸಂಶೋಧಕರು ಮೇ 2019 ಮತ್ತು ನವೆಂಬರ್ 2020 ರ ನಡುವೆ ಯುನ್ನಾನ್ ಪ್ರಾಂತ್ಯದ ಒಂದು ಕೌಂಟಿಯಲ್ಲಿ ಉಷ್ಣವಲಯದ ಸಸ್ಯೋದ್ಯಾನ ಮತ್ತು ಪಕ್ಕದ ಪ್ರದೇಶಗಳಲ್ಲಿ ಸಣ್ಣ, ಅರಣ್ಯ ವಾಸಿಸುವ ಬಾವಲಿಗಳಿಂದ 283 ಮಲ ಮಾದರಿಗಳು, 109 ಮೌಖಿಕ ಸ್ವ್ಯಾಬ್‌ಗಳು ಮತ್ತು 19 ಮೂತ್ರದ ಮಾದರಿಗಳನ್ನು ಸಂಗ್ರಹಿಸಿದರು.

ಒಟ್ಟಾರೆಯಾಗಿ, ನಾವು ವಿವಿಧ ಬಾವಲಿ ತಳಿಗಳಿಂದ ಒಟ್ಟಾರೇ 24 ಕೊರೋನಾ ವೈರಸ್ ಜೀನೋಮ್‌ಗಳನ್ನು ಒಟ್ಟುಗೂಡಿಸಿದ್ದೇವೆ, ಇದರಲ್ಲಿ  SARS-CoV-2 ನಂತಹ ನಾಲ್ಕು ಕೊರೋನಾವೈರಸ್ ಗಳು ಸೇರಿವೆ ಎಂದು ಶಾಂಡಾಂಗ್ ಯೂನಿವರ್ಸಿಟಿಯ ಚೀನಾದ ಸಂಶೋಧಕರು ಹೇಳಿರುವುದಾಗಿ ಜರ್ನಲ್ ಸೆಲ್ ನಲ್ಲಿ ವರದಿಯೊಂದು ಪ್ರಕಟವಾಗಿದೆ.

ಇವುಗಳಲ್ಲಿ ಒಂದು ವೈರಸ್ ಸಾರ್ಸ್-ಕೋವ್-2 ಗೆ ಹೋಲುತ್ತದೆ. ಇದೇ ಸಾಂಕ್ರಾಮಿಕಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ ಎಂದು ಚೀನಾ ಸಂಶೋಧಕರು ಹೇಳಿದ್ದಾರೆ.

SCROLL FOR NEXT