ಟೆಡ್ರೊಸ್ ಅಧಾನೋಮ್ 
ವಿದೇಶ

ಕೋವಿಡ್ ಮೂಲ ಪತ್ತೆ ತನಿಖೆಗೆ ಸಹಕರಿಸಿ: ಚೀನಾಗೆ ಡಬ್ಲ್ಯುಎಚ್‌ಒ ಕರೆ

ಕೋವಿಡ್ -19 ಮೂಲದ ಬಗ್ಗೆ ನಡೆಯುತ್ತಿರುವ ತನಿಖೆಗೆ ಸಹಕರಿಸುವಂತೆ ಚೀನಾಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಕರೆ ನೀಡಿದೆ.

ನ್ಯೂಯಾರ್ಕ್: ಕೋವಿಡ್-19 ಮೂಲದ ಬಗ್ಗೆ ನಡೆಯುತ್ತಿರುವ ತನಿಖೆಗೆ ಸಹಕರಿಸುವಂತೆ ಚೀನಾಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕರೆ ನೀಡಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥಟೆಡ್ರೊಸ್ ಅಧಾನೋಮ್ ಅವರು ಶನಿವಾರ ನಡೆದ ಗ್ರೂಪ್ ಆಫ್ ಸೆವೆನ್ (ಜಿ 7) ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ವಿಡಿಯೋ ಕಾನ್ಫರೆನ್ಸ್ ವೇಳೆ  ಈ ಹೇಳಿಕೆ ನೀಡಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ (ಡಬ್ಲ್ಯುಎಸ್ಜೆ) ವರದಿ ಮಾಡಿದೆ.

ವೈರಸ್ ಮೂಲದ ಬಗ್ಗೆತನಿಖೆ ನಡೆಯುತ್ತಿರುವಾಗ ಉತ್ತಮ ಸಹಕಾರ ಮತ್ತು ಪಾರದರ್ಶಕತೆ ಇರುವುದಾಗಿ ನಾನು ಆಶಿಸುತ್ತೇನೆ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕರು ಹೇಳಿದ್ದಾರೆ. "ನಿಮಗೆ ತಿಳಿದಿರುವಂತೆ ನಮಗೆ ಚೀನಾದ ಕಡೆಯಿಂದ ಸಹಕಾರ ಬೇಕು" ಎಂದು ಅವರು ಹೇಳಿದರು.

"ಈ ವೈರಸ್‌ನ ಮೂಲವನ್ನು ಅರ್ಥಮಾಡಿಕೊಳ್ಳಲು ಅಥವಾ ತಿಳಿಯಲು ಅಥವಾ ಕಂಡುಹಿಡಿಯಲು ನಮಗೆ ಪಾರದರ್ಶಕ ತನಿಖೆ ಅಗತ್ಯವಿದೆ. ವರದಿ ಬಿಡುಗಡೆಯಾದ ನಂತರ ಡೇಟಾ ಹಂಚಿಕೆಯಲ್ಲಿ ವಿಶೇಷವಾಗಿ ಕಚ್ಚಾ ದತ್ತಾಂಶದಲ್ಲಿ ಸಂದೇಹವಿದೆ".

ತನಿಖೆಯ ಮುಂದಿನ ಹಂತಗಳ ಸಿದ್ಧತೆಗಳು ನಡೆಯುತ್ತಿದ್ದು  ವೈರಸ್‌ನ ಮೂಲದ ಬಗ್ಗೆ ಜಿ 7 ನಾಯಕರು ಶನಿವಾರ ಚರ್ಚಿಸಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಈ ವಾರದ ಆರಂಭದಲ್ಲಿ, ಯುನೈಟೆಡ್ ಸ್ಟೇಟ್ಸ್ (ಯುಎಸ್) ಹಾಗೂ ಯುಕೆ ಡಬ್ಲ್ಯುಎಚ್‌ಒ ಕರೆದ ಕೋವಿಡ್ 19 ಮೂಲದ ಅಧ್ಯಯನದ ಮುಂದಿನ ಹಂತಕ್ಕೆ 'ಸಮಯೋಚಿತ, ಪಾರದರ್ಶಕ ಮತ್ತು ಪುರಾವೆ ಆಧಾರಿತ ಸ್ವತಂತ್ರ ಪ್ರಕ್ರಿಯೆಗೆ' ಬೆಂಬಲ ನೀಡಿತು.

"ಡಬ್ಲ್ಯುಎಚ್‌ಒ ಕರೆದ ಕೋವಿಡ್ ಮೂಲದ ಅಧ್ಯಯನದ ಮುಂದಿನ ಹಂತದ ತನಿಖೆ ಪ್ರಕ್ರಿಯೆಯಲ್ಲಿ ಸಮಯೋಚಿತ, ಪಾರದರ್ಶಕ ಮತ್ತು ಪುರಾವೆ ಆಧಾರಿತ ಸ್ವತಂತ್ರ ಪ್ರಕ್ರಿಯೆಯನ್ನು ಬೆಂಬಲಿಸುತ್ತೇವೆ" ಜಂಟಿ ಹೇಳಿಕೆ ತಿಳಿಸಿದೆ. ಯುಎಸ್ ಅಧ್ಯಕ್ಷ ಜೋ ಬೈಡನ್ ಗುರುವಾರ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಭೇಟಿಯಾದ ನಂತರ ಈ ಹೇಳಿಕೆ ಹೊರಬಂದಿದೆ.

ಇತ್ತೀಚೆಗೆ, ವೈರಸ್ ನ ಮೂಲವನ್ನು ಇನ್ನಷ್ಟು ತನಿಖೆ ಮಾಡುವ ಕುರಿತು ಬೇಡಿಕೆ ತೀವ್ರಗೊಂಡಿವೆ. ಸಾಂಕ್ರಾಮಿಕ ಮೂಲದ ಬಗ್ಗೆ ಅಮೆರಿಕದ ಹೊಸ ಗುಪ್ತಚರ ತನಿಖೆಗೆ ಅಧ್ಯಕ್ಷ  ಬೈಡನ್ ಆದೇಶಿಸಿದ್ದಾರೆ

ಪ್ರಪಂಚದಾದ್ಯಂತ ಹಾನಿ ಉಂಟುಮಾಡಿದ ಕೊರೋನಾವೈರಸ್ಮೂಲವು 1.5 ವರ್ಷಗಳ ನಂತರವೂ ನಿಗೂಢವಾಗಿಯೇ ಉಳಿದಿದೆ ಚೀನಾದ ನಗರವಾದ ವುಹಾನ್‌ನಲ್ಲಿ ಸೋಂಕಿನ ಮೊದಲ ಪ್ರಕರಣ ವರದಿಯಾಗಿದೆ. ಈಗ, ವಿಜ್ಞಾನಿಗಳು ಮತ್ತು ವಿಶ್ವ ನಾಯಕರು ವೈರನ್ ನೈಸರ್ಗಿಕವಾಗಿ ಹುಟ್ಟಿಕೊಂಡಿದೆಯೆ ಅಥವಾ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಸೋರಿಕೆಯಾಗಿದೆಯೇ ಎಂದು ಕಂಡುಹಿಡಿಯಲು ಹೆಚ್ಚಿನ ತನಿಖೆಗಾಗಿ ಆಗ್ರಹಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

SCROLL FOR NEXT