ವಿದೇಶ

ಶಾಂಘೈ ಸಹಕಾರ ಸಭೆಯಲ್ಲಿ ಭಾರತ-ಪಾಕ್ ಎಸ್ಎಸ್ಎ ಮಟ್ಟದ ಮಾತುಕತೆ ಬಗ್ಗೆ ಪಾಕ್ ಪ್ರತಿಕ್ರಿಯೆ ಹೀಗಿದೆ...

Srinivas Rao BV

ನವದೆಹಲಿ: ಜೂನ್ 23-24 ರಂದು ಶಾಂಘೈ ಸಹಕಾರ ಸಭೆ (ಎಸ್ ಸಿಒ) ತಜಕಿಸ್ತಾನದ ದುಶನ್ಬೆ ನಲ್ಲಿ ನಡೆಯಲಿದ್ದು ಭಾರತ-ಪಾಕ್ ದ್ವಿಪಕ್ಷೀಯ ಮಾತುಕತೆ ನಡೆಯುವುದರ ಬಗ್ಗೆ ಊಹಾಪೋಗಳು ಇವೆ. 

ಸಹಕಾರ ಒಕ್ಕೂಟದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಸಭೆಯಲ್ಲಿ ಭಾಗವಹಿಸಲಿದ್ದು, ಭಾರತ-ಪಾಕ್ ಭದ್ರತಾ ಸಲಹೆಗಾರರು ಭಾಗವಹಿಸುತ್ತಿದ್ದಾರೆ. ಈ ಸಭೆಯ ಪಾರ್ಶ್ವದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸುವುದರ ಬಗ್ಗೆ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸೂಫ್ ಪ್ರತಿಕ್ರಿಯೆ ನೀಡಿದ್ದು, "ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇಲ್ಲ" ಎಂದು ಹೇಳಿದ್ದಾರೆ.

ದೋವಲ್ ಹಾಗೂ ಯೂಸೂಫ್ 16 ನೇ ಸಭೆಯಲ್ಲಿ ಭಾಗವಹಿಸುತ್ತಿದ್ದು ಈ ಸಭೆಯನ್ನು ತಜಕಿಸ್ತಾನ ಆಯೋಜಿಸಿದೆ. ರಷ್ಯಾ, ಚೀನಾ, ಭಾರತ, ಪಾಕಿಸ್ತಾನ, ಕಜಕಸ್ತಾನ, ಕಿರ್ಜಕಿಸ್ತಾನ, ತಜಕಿಸ್ತಾನ, ಉಜ್ಬೇಕಿಸ್ತಾನಗಳು ಎಸ್ ಸಿಒ ಒಕ್ಕೂಟದ ರಾಷ್ಟ್ರಗಳಾಗಿವೆ.

ಕಳೆದ ವರ್ಷ ನಡೆದಿದ್ದ ಸಭೆಯಲ್ಲಿ ಪಾಕಿಸ್ತಾನ ತನ್ನ ಭೂಪಟದಲ್ಲಿ ಭಾರತದ ಭಾಗವನ್ನೂ ತೋರಿಸಿದ್ದನ್ನು ವಿರೋಧಿಸಿದ್ದ ಅಜಿತ್ ದೋವಲ್ ಸಭೆಯ ಅರ್ಧದಲ್ಲೇ ಪ್ರತಿಭಟಿಸಿ ಹೊರ ನಡೆದಿದ್ದರು. ಈ ಘಟನೆಗಳ ಬಳಿಕ ಭಾರತದೆಡೆಗಿನ ಮಾತುಗಳಲ್ಲಿ ಪಾಕಿಸ್ತಾನ ಮೃದು ಧೋರಣೆ ತಳೆಯುತ್ತಿದೆ. 

ಏಪ್ರಿಲ್ ತಿಂಗಳಲ್ಲಿ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಕಾಮರ್ ಜಾವೇದ್ ಬಾಜ್ವಾ, ಭಾರತ-ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧ ದಕ್ಷಿಣ ಹಾಗೂ ಕೇಂದ್ರ ಏಷ್ಯಾದ ಸಾಮರ್ಥ್ಯದ ಕೀಲಿಯಾಗಿದೆ ಎಂದು ಹೇಳಿದ್ದರು. "ಹಳೆಯದನ್ನು ಮರೆತು ಮುನ್ನಡೆಯುವ ಸಮಯ ಇದಾಗಿದೆ, ಸಾರ್ಥಕ ದ್ವಿಪಕ್ಷೀಯ ಮಾತುಕತೆಯ ಜವಾಬ್ದಾರಿ ಭಾರತದ ಮೇಲಿದೆ" ಎಂದು ಬಾಜ್ವಾ ಹೇಳಿದ್ದರು.

SCROLL FOR NEXT