ವಿದೇಶ

ಅಮೆರಿಕ- ಭಾರತ ನಡುವೆ ಈಗಿರುವಂತೆ ಪಾಕಿಸ್ತಾನ ಯುಎಸ್ ಜೊತೆ ಸುಸಂಸ್ಕೃತ ಸಂಬಂಧ ಬಯಸುತ್ತದೆ: ಇಮ್ರಾನ್ ಖಾನ್

Nagaraja AB

ಇಸ್ಲಾಮಾಬಾದ್: ಅಮೆರಿಕ ಮತ್ತು ಇಂಗ್ಲೆಂಡ್ ಅಥವಾ ಭಾರತದೊಂದಿಗೆ ಈಗ ಇರುವ ಸಂಬಂಧದಂತೆ ಅಮೆರಿಕಾದೊಂದಿಗೆ ಸುಸಂಸ್ಕೃತ ಸಂಬಂಧವನ್ನು ಹೊಂದಲು ಪಾಕಿಸ್ತಾನ ಬಯಸುವುದಾಗಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಯುದ್ಧ ಪೀಡಿತ ದೇಶವನ್ನು ಅಮೆರಿಕ ತೊರೆದ ನಂತರ ಅಫ್ಘಾನಿಸ್ತಾನ ಸೇರಿದಂತೆ ಈ ಪ್ರದೇಶದಲ್ಲಿ ಇಸ್ಲಾಮಾಬಾದ್ ವಹಿಸಬಹುದಾದ ಪಾತ್ರವನ್ನು ಅವರು ಒತ್ತಿ ಹೇಳಿದ್ದಾರೆ.

ದಿ ನ್ಯೂಯಾರ್ಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಖಾನ್ ಈ ಹೇಳಿಕೆ ನೀಡಿದ್ದು, ಆಗಸ್ಟ್ 2018 ರಲ್ಲಿ ಅಧಿಕಾರ ವಹಿಸಿಕೊಂಡ ಕೂಡಲೇ ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಪರ್ಕಿಸಿದರೂ ಭಾರತದೊಂದಿಗಿನ ಸಂಬಂಧವನ್ನು ಸಾಮಾನ್ಯಗೊಳಿಸುವ ಪ್ರಯತ್ನವು ಯಾವುದೇ ಪ್ರಗತಿಯನ್ನು ಸಾಧಿಸಲಿಲ್ಲ ಎಂಬ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. 

ಶುಕ್ರವಾರ ಶ್ವೇತಭವನದಲ್ಲಿ ಅಪ್ಘಾನಿಸ್ತಾನದ ಅಧ್ಯಕ್ಷರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಭೇಟಿಯಾದ ಬೆನ್ನಲ್ಲೇ, ಭಾರತ ಮತ್ತಿತರ ರಾಷ್ಟ್ರಗಳಿಗಿಂತ ಅಮೆರಿಕಾ ಜೊತೆಗೆ ಪಾಕಿಸ್ತಾನ ನಿಕಟ ಸಂಪರ್ಕವನ್ನು ಹೊಂದಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಮೆರಿಕಾ ಪಾಲುದಾರ ರಾಷ್ಟ್ರವಾಗಿರುವುದಾಗಿ ಇಮ್ರಾನ್ ಖಾನ್ ಹೇಳಿರುವುದಾಗಿ ಡಾನ್ ನ್ಯೂಸ್ ಪೇಪರ್ ವರದಿ ಮಾಡಿದೆ. 

ಅಪ್ಘಾನಿಸ್ತಾನವನ್ನು ಅಮೆರಿಕ ತೊರೆದ ನಂತರ ಇದೀಗ, ಪಾಕಿಸ್ತಾನ ಸುಸಂಸ್ಕೃತ ಸಂಬಂಧವನ್ನು ಬಯಸುತ್ತದೆ. ಅಮೆರಿಕದೊಂದಿಗೆ ವಾಣಿಜ್ಯ ಸಂಬಂಧವನ್ನು ಸುಧಾರಿಸಲು ಬಯಸುವುದಾಗಿ ಇಮ್ರಾನ್ ಖಾನ್ ಹೇಳಿದ್ದಾರೆ. 

SCROLL FOR NEXT