ವಿದೇಶ

ಕೆಲವು ವಾರಗಳ ಕಾಲ ಲಾಕ್ ಡೌನ್ ಜಾರಿ ಮಾಡಿ: ಭಾರತದ ಕೋವಿಡ್-19 ಪರಿಸ್ಥಿತಿ ಕುರಿತು ಡಾ. ಫೌಸಿ

Srinivas Rao BV

ವಾಷಿಂಗ್ ಟನ್: ಭಾರತದಲ್ಲಿ ಕೋವಿಡ್-19 2 ನೇ ಅಲೆ ಭೀತಿ ಮೂಡಿಸುವ ಪ್ರಮಾಣದಲ್ಲಿ ಹರಡುತ್ತಿದ್ದು, ದೇಶದಲ್ಲಿ ಕೆಲವು ವಾರಗಳ ಕಾಲ ಲಾಕ್ ಡೌನ್ ಜಾರಿಗೆ ತರುವುದು ಉತ್ತಮ ಎಂದು ಅಮೆರಿಕದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಫೌಸಿ ಸಲಹೆ ನೀಡಿದ್ದಾರೆ. 

ಎರಡನೇ ಅಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಜಾರಿಗೊಳಿಸುವುದರ ಜೊತೆಗೆ ತಕ್ಷಣ ಆಕ್ಸಿಜನ್ ಪೂರೈಕೆ ಮಾಡುವುದು, ವೈದ್ಯಕೀಯ ಸೇವೆ, ಪಿಪಿ ಇಗಳು ಅತ್ಯಂತ ಮುಖ್ಯವಾಗಿವೆ ಎಂದು ಹೇಳಿದ್ದಾರೆ. 

ಭಾರತದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪ್ರಮಾಣವನ್ನು ನೋಡಿದರೆ ಬಿಕ್ಕಟ್ಟು ನಿರ್ವಹಣೆಯ ತಂಡವನ್ನು ಒಗ್ಗೂಡಿಸಿ ಸಂಘಟಿತವಾಗಿರುವುದರತ್ತ ಭಾರತ ಗಮನಹರಿಸಬೇಕು ಎಂದು ಡಾ. ಫೌಸಿ ಹೇಳಿದ್ದಾರೆ. 

ಭಾರತದಲ್ಲಿ ಕೊರೋನಾ ವಿರುದ್ಧದ ಜಯವನ್ನು ಬಹುಬೇಗ ಘೋಷಣೆ ಮಾಡಲಾಯಿತು, ಸದ್ಯದ ಪರಿಸ್ಥಿತಿಯಲ್ಲಿ ತಾತ್ಕಾಲಿಕ ಲಾಕ್ ಡೌನ್ ಮೊರೆ ಹೋಗುವುದು ಅಗತ್ಯ ಎಂದು ಬೈಡನ್ ಆಡಳಿತದ ಮುಖ್ಯ ವೈದ್ಯಕೀಯ ಸಲಹೆಗಾರರೂ ಆಗಿರುವ ಫೌಸಿ ಹೇಳಿದ್ದಾರೆ. 

ಚೀನಾದಲ್ಲಿ ಅತಿ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಾಗ ಅವರು ನಗರಗಳನ್ನು ಸಂಪೂರ್ಣ ಬಂದ್ ಮಾಡಿದ್ದರು. ಆರು ತಿಂಗಳ ಕಾಲ ಲಾಕ್ ಡೌನ್ ಮಾಡುವುದು ಅಗತ್ಯವಿಲ್ಲವಾದರೂ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ತಾತ್ಕಾಲಿಕ ಲಾಕ್ ಡೌನ್ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

SCROLL FOR NEXT