ವಿದೇಶ

ಮಾಡರ್ನಾ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

Srinivasamurthy VN

ಜಿನೀವಾ: ಜಗತ್ತಿನಾದ್ಯಂತ ಮಾರಕ ಕೊರೋನಾ ವೈರಸ್ ಅಬ್ಬರದ ನಿಯಂತ್ರಣಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಾಡರ್ನಾ ಸಂಸ್ಥೆಯ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ.

ಅಮೆರಿಕ ಮೂಲದ ಮಾಡರ್ನಾ ಸಂಸ್ಥೆ ಸಂಶೋಧಿಸಿರುವ mRNA ಲಸಿಕೆಯನ್ನು ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದ್ದು, ಆ ಮೂಲಕ ಮಾಡರ್ನಾ ಲಸಿಕೆ ಕೂಡ ಅಸ್ಟ್ರಾಜೆನೆಕಾ, ವಿಶ್ವಸಂಸ್ಥೆಯಿಂದ ಅನುಮೋದನೆ ಪಡೆದಿರುವ ಫಿಜರ್-ಬಯೋಟೆಕ್ ಮತ್ತು ಜಾನ್ಸನ್ ಮತ್ತು ಜಾನ್ಸನ್ ಪಟ್ಟಿಗೆ  ಸೇರಿದಂತಾಗಿದೆ.

ಅಂತೆಯೇ ಮುಂಬರುವ ದಿನಗಳಲ್ಲಿ ಚೀನಾದ ಸಿನೋಫಾರ್ಮ್ ಮತ್ತು ಸಿನೋವಾಕ್ ಲಸಿಕೆಗಳಿಗೆ ಇದೇ ರೀತಿಯ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮೂಲಗಳು ತಿಳಿಸಿವೆ. ಇದಕ್ಕೂ ಮೊದಲೇ ಮಾಡರ್ನಾ ಸಂಸ್ಥೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಬೇಕಿತ್ತು. ಆದರೆ  ಲಸಿಕೆ ತಯಾರಿಕರ ಅಂತಿಮ ಹಂತದ ಪರೀಕ್ಷಾ ದತ್ತಾಂಶಗಳು ತಜ್ಞರ ಕೈ ಸೇರುವುದು ತಡವಾದ ಹಿನ್ನಲೆಯಲ್ಲಿ ತುರ್ತು ಬಳಕೆಗೆ ಅನುಮತಿ ನೀಡುವಲ್ಲಿ ತಡವಾಗಿತ್ತು.

ತಮ್ಮದೇ ಆದ ಸುಧಾರಿತ ವೈದ್ಯಕೀಯ ನಿಯಂತ್ರಣ ಮತ್ತು ಮೌಲ್ಯಮಾಪನ ಕಚೇರಿಗಳಿಲ್ಲದ ಅನೇಕ ದೇಶಗಳು ಲಸಿಕೆಗಳನ್ನು ಬಳಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಬಯಸುತ್ತಿದೆ. ಅದರಂತೆ ಬಡರಾಷ್ಟ್ರಗಳ ಪಟ್ಟಿ ಮಾಡಿದ್ದು, ಸಾಂಕ್ರಾಮಿಕ ರೋಗದಂತಹ ತುರ್ತು ಪರಿಸ್ಥಿತಿಯಲ್ಲಿ ಲಸಿಕೆಗಳನ್ನು  ನಿಯೋಜಿಸಲು ವಿಸ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಕೂಡ ಇದೇ ಪಟ್ಟಿಯನ್ನು ಬಳಸುತ್ತದೆ. ಆದಾಗ್ಯೂ, ವಿಶ್ವ ಆರೋಗ್ಯ ಸಂಸ್ಥೆಯ ಈ ನಿರ್ಧಾರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಾಡರ್ನಾದ ಲಸಿಕೆಯ ಸರಬರಾಜಿನ ಮೇಲೆ ತಕ್ಷಣದ ಯಾವುದೇ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ಮೂಲಗಳು  ತಿಳಿಸಿವೆ.

ಇನ್ನು ಮಾಡರ್ನಾ ಸಂಸ್ಥೆ ಈಗಾಗಲೇ ಹಲವು ದೇಶಗಳೊಂದಿಗೆ ಲಸಿಕೆ ಸರಬರಾಜಿನ ಒಪ್ಪಂದ ಮಾಡಿಕೊಂಡಿದ್ದು, ಈಗಾಗಲೇ ಲಕ್ಷಾಂತರ ಡೋಸ್ ಲಸಿಕೆಗಳನ್ನು ಸರಬರಾದು ಮಾಡುತ್ತಿದೆ ಎಂದು ಹೇಳಲಾಗಿದೆ.

SCROLL FOR NEXT