ವಿದೇಶ

ವಿಶೇಷ ವಿಮಾನ: ಕೊರೋನಾ ಪಾಸಿಟಿವ್ ಬಂದಿದ್ದರಿಂದ ಸ್ವದೇಶಕ್ಕೆ ಹಿಂದಿರುಗಲಾಗದೆ ಇಲ್ಲಿಯೆ ಉಳಿದ ಆಸ್ಟ್ರೇಲಿಯನ್ನರು!

Vishwanath S

ಮೆಲ್ಬೋರ್ನ್: ಭಾರತದಲ್ಲಿ ಸಿಲುಕಿದ್ದ ಆಸ್ಟ್ರೇಲಿಯನ್ನರನ್ನು ಹಿಂದಕ್ಕೆ ಕರೆಸಿಕೊಳ್ಳಲು ಆಸೀಸ್ ಸರ್ಕಾರವು ಆರಂಭಿಸಿದ್ದ ಏರ್ ಲಿಫ್ಟ್ ಗೆ ಅಡ್ಡಿಯಾಗಿದ್ದು ಇಂದು ತೆರಳಬೇಕಿದ್ದ ಹಲವರಿಗೆ ಕೊರೋನಾ ವಕ್ಕರಿಸಿದ್ದರಿಂದ ಅವರು ಭಾರತದಲ್ಲೇ ಉಳಿಯುವಂತಾಗಿದೆ.

ಭಾರತದಲ್ಲಿ ಕೋವಿಡ್ ಎರಡನೇ ಅಲೆಯ ಬಿಕ್ಕಟ್ಟಿನಿಂದಾಗಿ ಬಿಕ್ಕಟ್ಟಿನಿಂದಾಗಿ ಎರಡು ವಾರಗಳ ನಿಷೇಧದ ನಂತರ ಆಸ್ಟ್ರೇಲಿಯಾ ಸರ್ಕಾರವು ಭಾರತದಲ್ಲಿ ಸಿಲುಕಿರುವ ನಾಗರಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ವಿಮಾನ ಸೇವೆ ಪುನರರಾಂಭಿಸಿತ್ತು. 

ಇಂದು ಭಾರತದಿಂದ ತೆರಳಬೇಕಿದ್ದ ಮೊದಲ ವಿಮಾನದಲ್ಲಿದ್ದ ಅನೇಕ ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ಬಂದಿದ್ದರಿಂದ ಅವರನ್ನು ಇಲ್ಲೆ ಬಿಡಲಾಗಿದೆ ಎಂದು ಭಾರತದಲ್ಲಿರುವ ಆಸ್ಟ್ರೇಲಿಯಾ ರಾಯಭಾರಿ ಅಧಿಕಾರಿ ಬ್ಯಾರಿ ಒ'ಫಾರೆಲ್ ಹೇಳಿರುವುದಾಗಿ ಎಬಿಸಿ ನ್ಯೂಸ್ ವರದಿ ಮಾಡಿದೆ.

ಶುಕ್ರವಾರ ರಾತ್ರಿ ನವದೆಹಲಿಯಿಂದ 150 ಪ್ರಯಾಣಿಕರಿದ್ದ ವಿಮಾನ ಹೊರಡಬೇಕಿತ್ತು ಆದರೆ ಇದರಲ್ಲಿ 40 ಕ್ಕೂ ಹೆಚ್ಚು ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಅಲ್ಲದೆ ಇನ್ನುಳಿದ 70 ಮಂದಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನು ಕೊರೋನಾ ಪಾಸಿಟಿವ್ ಬಂದಿರುವವರಿಗೆ ಹೋಟೆಲ್‌ಗಳಲ್ಲಿ ಇರಿಸಲಾಗಿದೆ ಎಂದರು. 

ಭಾರತದಲ್ಲಿ ಖಾಯಂ ಆಗಿ ನೆಲೆಸಿರುವ ಸುಮಾರು 10,000 ಆಸ್ಟ್ರೇಲಿಯನ್ನರು ಬಯಸಿದ್ದಾರೆ. ಇದರಲ್ಲಿ 1000 ಮಂದಿಗೆ ಆಸ್ಟ್ರೇಲಿಯಾಗೆ ಪ್ರಯಾಣಿಸಲು ಅನುಮತಿ ನೀಡಲಾಗಿತ್ತು ಆದರೆ ಅವರಲ್ಲಿ ಅನೇಕರು ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಪರಿಗಣಿಸಲಾಗಿದೆ ಎಂದರು. 

ಭಾರತದಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರಿ ವೈರಸ್ ಹರಡದಂತೆ ನೋಡಿಕೊಳ್ಳುವ ಸಲುವಾಗಿ ಪ್ರಯಾಣಿಕರನ್ನು ಕಟ್ಟುನಿಟ್ಟಾದ ಸಂಪರ್ಕತಡೆಗೆ ಕಳುಹಿಸಲಾಗುತ್ತದೆ ಎಂದು ಪೇನ್ ಹೇಳಿದರು. ಎಲ್ಲಾ ಪ್ರಯಾಣಿಕರು ಪ್ರಯಾಣಿಸುವ ಮೊದಲು ಪಿಸಿಆರ್ ಮತ್ತು ರಾಪಿಡ್ ಆಂಟಿಜೆನ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದಿದ್ದರು. 

SCROLL FOR NEXT