ಆಸ್ಟ್ರಾಜೆನಿಕಾ-ಆಕ್ಸ್ಫರ್ಡ್ 
ವಿದೇಶ

ಆಕ್ಸ್‌ಫರ್ಡ್/ಅಸ್ಟ್ರಾಜೆನೆಕಾ ಲಸಿಕೆ ಬಿ1.617.2 ರೂಪಾಂತರಿಗೆ ಶೇ.80ರಷ್ಟು ಪರಿಣಾಮಕಾರಿ: ಯುಕೆ ಅಧ್ಯಯನ

ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ 19ರ B1.617.2 ರೂಪಾಂತರಿ ಸೋಂಕನ್ನು ತಡೆಗಟ್ಟುವಲ್ಲಿ ಆಕ್ಸ್‌ಫರ್ಡ್ ನ ಅಸ್ಟ್ರಾಜೆನೆಕಾ ಅಥವಾ ಫಿಜರ್ ಲಸಿಕೆಯ ಎರಡು ಡೋಸ್ ಗಳು ಶೇಕಡಾ 80 ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು ಯುಕೆ ಸರ್ಕಾರದ ಹೊಸ ಅಧ್ಯಯನವು ಕಂಡುಹಿಡಿದಿದೆ.

ಲಂಡನ್: ಭಾರತದಲ್ಲಿ ಮೊದಲು ಪತ್ತೆಯಾದ ಕೋವಿಡ್ 19ರ B1.617.2 ರೂಪಾಂತರಿ ಸೋಂಕನ್ನು ತಡೆಗಟ್ಟುವಲ್ಲಿ ಆಕ್ಸ್‌ಫರ್ಡ್ ನ ಅಸ್ಟ್ರಾಜೆನೆಕಾ ಅಥವಾ ಫಿಜರ್ ಲಸಿಕೆಯ ಎರಡು ಡೋಸ್ ಗಳು ಶೇಕಡಾ 80 ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು ಯುಕೆ ಸರ್ಕಾರದ ಹೊಸ ಅಧ್ಯಯನವು ಕಂಡುಹಿಡಿದಿದೆ.

ಆಕ್ಸ್‌ಫರ್ಡ್ ನ ಅಸ್ಟ್ರಾಜೆನೆಕಾ ಲಸಿಕೆಯನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಹೆಸರಲ್ಲಿ ಆಗಿ ಉತ್ಪಾದಿಸುತ್ತಿದೆ. ಇನ್ನು ಭಾರತದಲ್ಲಿ ಮಹಾಮಾರಿಯಿಂದ ರಕ್ಷಿಸಲು ಜನರಿಗೆ ಲಸಿಕೆ ನೀಡಲಾಗುತ್ತಿದೆ.

ಯುಕೆ ಸಂಶೋಧನೆಗಳು ಪಬ್ಲಿಕ್ ಹೆಲ್ತ್ ಇಂಗ್ಲೆಂಡ್(ಪಿಹೆಚ್‌ಇ)ದ ದತ್ತಾಂಶವನ್ನು ಆಧರಿಸಿದ್ದು ಎರಡು ಡೋಸ್  ಬಿ .117 ರೂಪಾಂತರದಿಂದ ಶೇಕಡಾ 87 ರಷ್ಟು ರಕ್ಷಣೆಯನ್ನು ಒದಗಿಸುತ್ತವೆ ಎಂದು ಬಹಿರಂಗಪಡಿಸಿದೆ. ಇದನ್ನು ಮೊದಲು ಇಂಗ್ಲೆಂಡ್‌ನ ಕೆಂಟ್ ಪ್ರದೇಶದಲ್ಲಿ ಕಂಡುಹಿಡಿಯಲಾಯಿತು. ಅಲ್ಲದೆ ಸೋಂಕು ಹೆಚ್ಚು ಹರಡುವಂತೆ ಪರಿಗಣಿಸಲಾಗಿದೆ.

'ದಿ ಟೆಲಿಗ್ರಾಫ್' ಪತ್ರಿಕೆ ಪ್ರಕಾರ, ಇತ್ತೀಚಿನ ಅಧ್ಯಯನದ ಸಂಶೋಧನೆಗಳನ್ನು ಈ ವಾರ ಸರ್ಕಾರದ ಹೊಸ ಮತ್ತು ಉದಯೋನ್ಮುಖ ಉಸಿರಾಟದ ವೈರಸ್ ಬೆದರಿಕೆ ಸಲಹಾ ಗುಂಪು(ನರ್ವ್‌ಟ್ಯಾಗ್) ಸಭೆಯಲ್ಲಿ ಮಂಡಿಸಲಾಗಿದೆ.

ಈ ವಾರದ ಆರಂಭದಲ್ಲಿ ಬಿಡುಗಡೆಯಾದ ಇತ್ತೀಚಿನ ಪಿಹೆಚ್‌ಇ ಅಂಕಿಅಂಶಗಳಲ್ಲಿ ಕಳೆದ ವಾರದಲ್ಲಿ ಬಿ 1.617.2 ರೂಪಾಂತರದ ಪ್ರಕರಣಗಳ ಸಂಖ್ಯೆ 2,111ರಷ್ಟು ಏರಿಕೆಯಾಗಿದ್ದು, ದೇಶಾದ್ಯಂತ 3,424 ಪ್ರಕರಣಗಳು ದಾಖಲಾಗಿವೆ. 

ಸೋಂಕಿನ ಸಂಖ್ಯೆ ಕ್ರಮವಾಗಿ ಹೆಚ್ಚಾಗುತ್ತಿದೆ ಎಂದು ನಾನು ಭಾವಿಸುತ್ತೇನೆ. ವಾರದಿಂದ ವಾರಕ್ಕೆ ಸೋಂಕು ಹೆಚ್ಚಾಗುತ್ತಿರುವುದನ್ನು ಸಂಖ್ಯೆಗಳ ಮೂಲಕ ತಿಳಿಯಬಹುದಾಗಿದೆ ಎಂದು ಸ್ಯಾಂಗರ್ ಇನ್ಸ್ಟಿಟ್ಯೂಟ್ನ ಕೋವಿಡ್ 19 ಜೀನೋಮಿಕ್ಸ್ ನಿರ್ದೇಶಕ ಡಾ. ಜೆಫ್ರಿ ಬ್ಯಾರೆಟ್ ಬಿಬಿಸಿಗೆ ತಿಳಿಸಿದರು.

ನನ್ನ ಊಹೆ ಪ್ರಕಾರ, ಕೆಂಟ್ ರೂಪಾಂತರಕ್ಕಿಂತ ಭಾರತದಲ್ಲಿ ಮೊದಲು ಪತ್ತೆಯಾಗಿರುವ ರೂಪಾಂತರಿ ಹೆಚ್ಚು ಸಾಂಕ್ರಾಮಿಕ. ಶೇಕಡ 20 ಅಥವಾ 30ರಷ್ಟು ಇರಬೇಕಿತ್ತು. ಆದರೆ 50ಪ್ರತಿಶತ ಆಗಿದ್ದು ಇದು ಕೆಟ್ಟ ಸನ್ನಿವೇಶ ಎಂದು ಅವರು ಹೇಳಿದರು. ಏತನ್ಮಧ್ಯೆ, ಪಿಎಚ್‌ಇ ಅಧಿಕಾರಿಗಳು ಇಂಗ್ಲೆಂಡ್‌ನ ಯಾರ್ಕ್‌ಷೈರ್ ಪ್ರದೇಶದಲ್ಲಿ ವಿಯುಐ ರೂಪಾಂತರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇದು ಹೆಚ್ಚಿನ ಹರಡುವಿಕೆಯನ್ನು ತೋರಿಸುತ್ತಿದೆ. ಹೀಗಾಗಿ ರಾಷ್ಟ್ರೀಯ ಆರೋಗ್ಯ ಸೇವೆ(ಎನ್‌ಎಚ್‌ಎಸ್) ತನ್ನ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಮತ್ತಷ್ಟು ವಿಸ್ತರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಪ್ರಕರಣ: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT