ವಿದೇಶ

ನ.15 ರಂದು ಷಿ ಜಿನ್ಪಿಂಗ್, ಜೋ ಬೈಡನ್ ವರ್ಚ್ಯುಯಲ್ ಸಭೆ

Srinivas Rao BV

ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ನ.15 ರಂದು ವರ್ಚ್ಯುಯಲ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. 

ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಪೈಪೋಟಿಯನ್ನು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಹಾಗೂ ಉಭಯ ರಾಷ್ಟ್ರಗಳ ಹಿತಾಸಕ್ತಿಗಳು ಹೊಂದಾಣಿಕೆಯಾಗುವ ನಿಟ್ಟಿನಲ್ಲಿ ಕೆಲಸ ಮಾಡುವ ಸಂಬಂಧ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಶ್ವೇತ ಭವನ ಮಾಹಿತಿ ನೀಡಿದೆ.

ಬೈಡನ್- ಜಿನ್ಪಿಂಗ್ ನಡುವೆ ವರ್ಷಾಂತ್ಯದಲ್ಲಿ  ವರ್ಚ್ಯುಯಲ್ ಮಾತುಕತೆ ಏರ್ಪಡಿಸುವ ಸಂಬಂಧ ಕಳೆದ ತಿಂಗಳೇ ಒಮ್ಮತಕ್ಕೆ ಬಂದಿದ್ದರ ಬಗ್ಗೆ ಅಮೆರಿಕ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಸದ್ಯಕ್ಕೆ ಅಮೆರಿಕ-ಚೀನಾದ್ದು ಜಗತ್ತಿನ ಅತಿ ಸಂಕೀರ್ಣ ದ್ವಿಪಕ್ಷೀಯ ಸಂಬಂಧವಾಗಿದೆ. ಇದಕ್ಕೂ ಮುನ್ನ ಸೆ.09 ರಂದು ಇಬ್ಬರೂ ನಾಯಕರು ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದರು.

ಅಮೆರಿಕ-ಚೀನಾದ ನಡುವೆ ದ್ವಿಪಕ್ಷೀಯ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಹದಗೆಟ್ಟಿತ್ತು. ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ವಿರುದ್ಧ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದರು.

SCROLL FOR NEXT