ವಿದೇಶ

ಯೋಗ ಗುರು ರಾಮ್ ದೇವ್ ಒಡೆತನದ 2 ಟಿವಿ ಚಾನೆಲ್‌ಗಳು ನೋಂದಣಿ ಇಲ್ಲದೇ ಕಾರ್ಯಾರಂಭ; ವಿವಾದ ಸೃಷ್ಟಿ

Srinivasamurthy VN

ಕಠ್ಮಂಡು: ಯೋಗ ಗುರು ರಾಮ್ ದೇವ್ ಒಡೆತನದ 2 ಟಿವಿ ಚಾನೆಲ್‌ಗಳು ನೋಂದಣಿ ಇಲ್ಲದೇ ಕಾರ್ಯಾರಂಭ ಮಾಡುವ ಮೂಲಕ ವಿವಾದಕ್ಕೀಡಾಗಿವೆ.

ಹೌದು.. ನೇಪಾಳದಲ್ಲಿ ಯೋಗ ಗುರು ರಾಮ್‌ದೇವ್ ಒಡೆತನದ ಎರಡು ಟೆಲಿವಿಷನ್ ಚಾನೆಲ್‌ಗಳನ್ನು ನೋಂದಣಿ ಇಲ್ಲದೆ ಆರಂಭಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, ಶುಕ್ರವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ನೇಪಾಳದ ಪ್ರಧಾನಿಯಾಗಿರುವ ಶೇರ್ ಬಹದ್ದೂರ್ ದೇವುಬಾ, ಆಸ್ತಾ ನೇಪಾಳ ಟಿವಿ ಮತ್ತು ಪತಂಜಲಿ ನೇಪಾಳ ಟಿವಿ ಎಂಬ 2 ಚಾನೆಲ್‌ಗಳನ್ನು ಪ್ರಾರಂಭಿಸಿದ್ದರು. ಈ ವೇಳೆ, ಸಮಾರಂಭದಲ್ಲಿ ರಾಮ್‌ದೇವ್, ಆಚಾರ್ಯ ಬಾಲಕೃಷ್ಣ ಮತ್ತು ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಉಪಸ್ಥಿತರಿದ್ದರು.

"ನೇಪಾಳಿ ಕಾನೂನಿನ ಪ್ರಕಾರ ಮಾಧ್ಯಮ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಯನ್ನು ನಿಷೇಧಿಸಲಾಗಿದೆ. ಆದರೆ, ಈ ಎರಡು ಟಿವಿ ಚಾನೆಲ್‌ಗಳು ನೋಂದಣಿ ಆಗಿಲ್ಲ. ಅಲ್ಲದೆ, ಈ ಬಗ್ಗೆ ಯಾವುದೇ ಅರ್ಜಿ ಸ್ವೀಕರಿಸಿಲ್ಲ ಎಂದು ಅಲ್ಲಿನ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಮಹಾನಿರ್ದೇಶಕ ಗೋಗೊನ್ ಬಹದ್ದೂರ್ ಹಮಾಲ್ ಹೇಳಿದ್ದಾರೆ. 

ನಿಯಮ ಉಲ್ಲಂಘನೆ ಕುರಿತು ತನಿಖೆಗೆ ತಂಡ ರಚನೆ
ಇನ್ನು ನೇಪಾಳದ ನಿಯಮ ಉಲ್ಲಂಘಿಸಿರುವ ಬಗ್ಗೆ ವಿಚಾರಣೆ ನಡೆಸಲು ತನಿಖಾ ತಂಡವನ್ನು ರಚಿಸಿದ್ದೇವೆ. ಅಲ್ಲದೆ, ಪೂರ್ವಾನುಮತಿ ಇಲ್ಲದೆ ಪ್ರಸಾರ ಆರಂಭಿಸಿದ್ದರೆ ಕ್ರಮ ಕೈಗೊಳ್ಳುತ್ತೇವೆ ಅಂತಾ ಗೋಗೇನ್ ತಿಳಿಸಿದ್ದಾರೆ. 
 

SCROLL FOR NEXT