ವಿದೇಶ

ಸ್ವೀಡನ್ ಪ್ರಥಮ ಮಹಿಳಾ ಪ್ರಧಾನಿಯಾಗಿ ಮ್ಯಾಗ್ಡಲೀನಾ ಆಂಡರ್ಸನ್ ನೇಮಕ

Lingaraj Badiger

ಜ್ಯೂರಿಚ್: ಸ್ವೀಡಿಷ್ ಸಂಸತ್ತು ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಪ್ರಧಾನಿಯನ್ನು ಆಯ್ಕೆ ಮಾಡಿದೆ.

ಸ್ವೀಡನ್‌ ಸಂಸತ್ತು ರಿಕ್ಸ್‌ಡಾಗ್ ಬುಧವಾರ ಸ್ವೀಡನ್‌ನ ಸೋಶಿಯಲ್ ಡೆಮಾಕ್ರಟಿಕ್ ಲೇಬರ್ ಪಾರ್ಟಿಯ ನಾಯಕಿ, ಹಣಕಾಸು ಸಚಿವೆ ಮ್ಯಾಗ್ಡಲೀನಾ ಆಂಡರ್ಸನ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದ್ದು, ದೇಶದ ಇತಿಹಾಸದಲ್ಲಿ ಉನ್ನತ ಅಧಿಕಾರ ವಹಿಸಿಕೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸ್ವೀಡನ್‌ನ ಸಂಸತ್ತು ರಿಕ್ಸ್‌ಡಾಗ್ 349 ಸದಸ್ಯ ಬಲ ಹೊಂದಿದ್ದು, ಆಂಡರ್ಸನ್ ಅವರ ಉಮೇದುವಾರಿಕೆ ಪರವಾಗಿ 117 ಮತ ಚಲಾವಣೆಯಾದರೆ, 174 ಮಂದಿ ವಿರುದ್ಧವಾಗಿ ಮತ ಚಲಾಯಿಸಿದರು ಮತ್ತು 57 ಸದಸ್ಯರು ಗೈರುಹಾಜರಾಗಿದ್ದರು.

ಡೆಮಾಕ್ರಟಿಕ್ ಲೇಬರ್ ಪಕ್ಷದ ನಾಯಕ, ಪ್ರಧಾನಿ ಸ್ಟೀಫನ್ ಲೋಫ್ವೆನ್ ಈ ವರ್ಷಾರಂಭದಲ್ಲಿ ತಮ್ಮ ಸ್ಥಾನ ತ್ಯಜಿಸಿದ್ದರು.  ಇದೀಗ ಅವರ ಸ್ಥಾನಕ್ಕೆ ಆಂಡರ್ಸನ್ ಅವರನ್ನು ಆಯ್ಕೆಮಾಡಲಾಗಿದೆ.

ಈ ಬೆಳವಣಿಗೆಯು ಸ್ವೀಡನ್‌ನಲ್ಲಿ ಒಂದು ಮೈಲಿಗಲ್ಲು ಎನ್ನಲಾಗಿದೆ. ಲಿಂಗಸಂಬಂಧಿ ವಿಚಾರಗಳಲ್ಲಿ ಯುರೋಪಿನ ಅತ್ಯಂತ ಪ್ರಗತಿಪರ ರಾಷ್ಟ್ರಗಳಲ್ಲಿ ಒಂದಾಗಿರುವ ಸ್ವೀಡನ್‌ನಲ್ಲಿ ಇದುವರೆಗೆ ರಾಜಕೀಯದ ಉನ್ನತ ಹುದ್ದೆಯಲ್ಲಿ ಮಹಿಳೆಯರಿಗೆ ಸ್ಥಾನ ದೊರೆತಿರಲಿಲ್ಲ.

SCROLL FOR NEXT