ಫೇಸ್ ಬುಕ್-ಮೆಟಾ 
ವಿದೇಶ

ಇನ್ಮುಂದೆ ಫೇಸ್​​ಬುಕ್​​ ಹೆಸರು 'Meta': ಸೋಶಿಯಲ್ ಮೀಡಿಯಾ ದಿಗ್ಗಜ ಸಂಸ್ಧೆ ಹೆಸರು ಬದಲಾಗಿದ್ದೇಕೆ?

ಫೇಸ್‌ಬುಕ್ ತನ್ನ ಮೂಲ ಕಂಪನಿಯ ಹೆಸರನ್ನು 'ಮೆಟಾ' ಎಂದು ಬದಲಾಯಿಸಿದೆ.

ಸ್ಯಾನ್ ಫ್ರಾನ್ಸಿಸ್ಕೋ: ಫೇಸ್‌ಬುಕ್ ತನ್ನ ಮೂಲ ಕಂಪನಿಯ ಹೆಸರನ್ನು 'ಮೆಟಾ' ಎಂದು ಬದಲಾಯಿಸಿದೆ.

ಫೇಸ್‌ಬುಕ್‌ನ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್(Mark Zuckerberg)ಅವರು ಡೆವಲಪರ್‌ಗಳ ವಾರ್ಷಿಕ ಸಮ್ಮೇಳನದಲ್ಲಿ ಈ ವಿಷಯವನ್ನು ಘೋಷಣೆ ಮಾಡಿದ್ದಾರೆ. ಈ ಹೆಸರನ್ನು ಫೇಸ್‌ಬುಕ್‌ನ ಮಾಜಿ ಸಿವಿಕ್ ಇಂಟೆಗ್ರಿಟಿ ಮುಖ್ಯಸ್ಥ ಸಮಿದ್ ಚಕ್ರವರ್ತಿ ಸೂಚಿಸಿದ್ದಾರೆ. ಫೇಸ್‌ಬುಕ್ ಅಡಿಯಲ್ಲಿ ಇರುವ ಜಾಲತಾಣಗಳು, ಕಾರ್ಪೋರೇಟ್ ವ್ಯವಹಾರಗಳೆಲ್ಲವೂ ಈಗ ‘ಮೆಟಾ’ದ ಅಡಿಯಲ್ಲಿ ಕಾರ್ಯ ನಿರ್ವಹಿಸಲಿವೆ.

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್​​ಗಳನ್ನು ಪ್ರಪಂಚದಾದ್ಯಂತ ಶತಕೋಟಿ ಜನರು ಬಳಸುತ್ತಾರೆ. ಕಂಪನಿಯು ತನ್ನ ಮಾರುಕಟ್ಟೆ, ಅದರ ನಿರ್ಧಾರಗಳು ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿನ ದುರುಪಯೋಗಗಳ ಮೇಲೆ ಜನಪ್ರತಿನಿಧಿಗಳು ಹಾಗೂ ನಿಯಂತ್ರಕರಿಂದ ಟೀಕೆಗಳನ್ನು ಎದುರಿಸುತ್ತಿರುವಾಗ ಈ ಹೆಸರು ಬದಲಾವಣೆಯಾಗಿದೆ.

ನಮ್ಮ ಕಂಪನಿಯು ಈಗ ಮೆಟಾ ಆಗಿದೆ ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ. ನಮ್ಮ ಧ್ಯೇಯ ಒಂದೇ ಆಗಿದೆ. ಅದು ಎಲ್ಲಾರನ್ನು ಒಟ್ಟಿಗೆ ತರುವುದು. ಆದ್ರೆ ನಮ್ಮ ಅಪ್ಲಿಕೇಶನ್‌ಗಳು ಹಾಗೂ ಬ್ರ್ಯಾಂಡ್‌ಗಳು ಬದಲಾಗುವುದಿಲ್ಲ ಎಂದು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT