ವಿದೇಶ

ಜಾಗತಿಕವಾಗಿ ಹೊಸ ಕೊರೋನಾ ಪ್ರಕರಣಗಳಲ್ಲಿ ಭಾರಿ ಕುಸಿತ: ಡಬ್ಲ್ಯುಎಚ್ಒ

Vishwanath S

ಜಿನೀವಾ: ಕಳೆದ ವಾರ ಹೊಸ ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದು, ಜಾಗತಿಕವಾಗಿ 3.6 ಮಿಲಿಯನ್ ಹೊಸ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಹಿಂದಿನ ವಾರ 4 ಮಿಲಿಯನ್ ಹೊಸ ಸೋಂಕುಗಳು ವರದಿಯಾಗುತ್ತಿದ್ದು ಇದೀಗ ಈ ವಾರ ಇದರ ಸಂಖ್ಯೆಯಲ್ಲಿ ಇನ್ನು ಕಡಿಮೆಯಾಗುತ್ತಿದೆ ಎಂದು ಡಬ್ಲ್ಯುಎಚ್ಒ ತಿಳಿಸಿದೆ.

ಮಂಗಳವಾರ ಬಿಡುಗಡೆಯಾದ ಸಾಂಕ್ರಾಮಿಕ ರೋಗದ ಇತ್ತೀಚಿನ ಅಪ್‌ಡೇಟ್‌ನಲ್ಲಿ, ಎರಡು ಪ್ರದೇಶಗಳಲ್ಲಿ ಪ್ರಕರಣಗಳಲ್ಲಿ ಪ್ರಮುಖ ಇಳಿಕೆ ಕಂಡುಬಂದಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ. ಮಧ್ಯಪ್ರಾಚ್ಯದಲ್ಲಿ 22 ಪ್ರತಿಶತದಷ್ಟು ಕುಸಿತ ಮತ್ತು ಆಗ್ನೇಯ ಏಷ್ಯಾದಲ್ಲಿ 16 ಪ್ರತಿಶತದಷ್ಟು ಕುಸಿತ ಕಂಡಿದೆ.

ಯುಎನ್ ಆರೋಗ್ಯ ಸಂಸ್ಥೆ ಕಳೆದ ವಾರದಲ್ಲಿ ಕೇವಲ 60,000ಕ್ಕಿಂತ ಕಡಿಮೆ ಸಾವುಗಳು ಸಂಭವಿಸಿವೆ. ಇದು 7 ಪ್ರತಿಶತದಷ್ಟು ಕುಸಿತವಾಗಿದೆ. ಆಗ್ನೇಯ ಏಷ್ಯಾದಲ್ಲಿ ಕೋವಿಡ್ -19 ಸಾವುಗಳಲ್ಲಿ ಶೇಕಡಾ 30ರಷ್ಟು ಇಳಿಕೆ ಕಂಡುಬಂದಿದ್ದರೆ, ಪಶ್ಚಿಮ ಪೆಸಿಫಿಕ್ ಪ್ರದೇಶವು ಶೇ. 7ರಷ್ಟು ಹೆಚ್ಚಳವಾಗಿದೆ ಎಂದು ಅದು ಹೇಳಿದೆ.

ಅಮೆರಿಕಾ, ಭಾರತ, ಬ್ರಿಟನ್, ಟರ್ಕಿ ಮತ್ತು ಫಿಲಿಪೈನ್ಸ್ ನಲ್ಲಿ ಹೆಚ್ಚು ಕರೋನವೈರಸ್ ಪ್ರಕರಣಗಳು ಕಂಡುಬಂದಿವೆ. ವೇಗವಾಗಿ ಹರಡುವ ಡೆಲ್ಟಾ ರೂಪಾಂತರವು ಈಗ 185 ದೇಶಗಳಲ್ಲಿ ಕಂಡುಬಂದಿದೆ. ಪ್ರಪಂಚದ ಪ್ರತಿಯೊಂದು ಭಾಗದಲ್ಲೂ ಇದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.

SCROLL FOR NEXT