ವಿದೇಶ

ತೀವ್ರ ವಿದ್ಯುತ್ ಬಿಕ್ಕಟ್ಟು.. ಕತ್ತಲಲ್ಲಿ ಚೀನಾ!; ಕಾರ್ಖಾನೆಗಳಲ್ಲಿ ಪಾತಾಳಕ್ಕೆ ಕುಸಿದ ಉತ್ಪಾದನೆ

Srinivasamurthy VN

ಷೆನ್‌ ಯಾಂಗ್‌: ನೆರೆಯ ಚೀನಾದೇಶದಲ್ಲಿ ತೀವ್ರ ವಿದ್ಯುತ್ ಅಭಾವ ಎದುರಾಗಿದ್ದು, ಪರಿಣಾಮ ಇಡೀ ಚೀನಾ ಕತ್ತಲಲ್ಲಿ ಮುಳುಗುವ ಭೀತಿ ಎದುರಾಗಿದೆ. ಅಲ್ಲದೆ ಕಾರ್ಖಾನೆಗಳಲ್ಲಿ ಉತ್ಪಾದನೆ ಪಾತಾಳಕ್ಕೆ ಕುಸಿದಿದ್ದು, ಮಾಲೀಕರು ಸಂಕಷ್ಟ ಎದುರಿಸುವಂತಾಗಿದೆ.

ಚೀನಾದಲ್ಲಿ ಸ್ಮಾರ್ಟ್ ಫೋನ್‌ಗಳ ಬೆಳಕಿನಲ್ಲಿ ಜನರು ಉಪಾಹಾರ ಸೇವಿಸುತ್ತಿದ್ದಾರೆ. ಹೆಚ್ಚಿನ ನಗರಗಳಲ್ಲಿ ವಿದ್ಯುತ್ ಕಡಿತ ಜಾರಿಗೊಳಿಸಲಾಗಿದೆ. ಇಂಧನ ಬಳಕೆಯನ್ನು ತಗ್ಗಿಸುವ ಗುರಿ ಸಾಧಿಸಲು ವಿದ್ಯುತ್ ಕಡಿತವನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಕೆಲವು ಅರ್ಥಶಾಸ್ತ್ರಜ್ಞರು ವಿಶ್ಲೇಷಿಸುತ್ತಿದ್ದಾರೆ. 

ಆದರೆ ಇತ್ತೀಚಿನ ದಿನಗಳಲ್ಲಿ ಕಲ್ಲಿದ್ದಲು ಬೆಲೆಗಳು ಗಗನಕ್ಕೇರಿರುವುದರಿಂದ ಬೇಡಿಕೆಯಷ್ಟು ವಿದ್ಯುತ್‌ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯುತ್ ಕಂಪನಿಗಳು ಹೇಳಿವೆ ಎಂಬ ಸುದ್ದಿಗಳು ಬರುತ್ತಿವೆ. ಚೀನಾದ ಕೆಲವು ಕಾರ್ಖಾನೆಗಳಲ್ಲಿ ಉತ್ಪಾದನೆ ನಿಲ್ಲಿಸಲು ಆದೇಶ ನೀಡಲಾಗಿದೆ. ಇದರ ಪರಿಣಾಮ ಸ್ಮಾರ್ಟ್ ಫೋನ್, ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ರಫ್ತಿನ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆ ಗುರಿಯಾಗುವ ಭೀತಿ
ಇತ್ತೀಚಿಗೆ ಚೀನಾದ ವಿದ್ಯುತ್ ಬಳಕೆ ದ್ವಿಗುಣಗೊಂಡಿದೆ. ಇದರಿಂದ ಹೆಚ್ಚಿನ ಇಂಗಾಲದ ಹೊರಸೂಸುವಿಕೆಯಿಂದ ವಾಯು ಮಾಲಿನ್ಯ ಹೆಚ್ಚುತ್ತಿದೆ. ವಿಶ್ವಸಂಸ್ಥೆಯ ಪರಿಸರ ಸಮ್ಮೇಳನ ಅಕ್ಟೋಬರ್ 12- 13ರಂದು ಚೈನಾದ ಕುನ್ಮಿಂಗ್‌ನಲ್ಲಿ ನಡೆಯಲಿದೆ. ಆತಿಥೇಯ ರಾಷ್ಟ್ರವಾಗಿ ಈ ಮಟ್ಟದಲ್ಲಿ ಇಂಧನ ಬಳಸುವುದು ಅಂತಾರಾಷ್ಟ್ರೀಯ ಟೀಕೆ ವ್ಯಕ್ತವಾಗುತ್ತಿವೆ.

ಇದರೊಂದಿಗೆ ಅಧ್ಯಕ್ಷ ಜಿನ್ ಪಿಂಗ್ ಅವರ ಮೇಲೆ ಸಾಂಪ್ರದಾಯಿಕ ಇಂಧನ ಬಳಕೆ ತಗ್ಗಿಸುವಂತೆ ಒತ್ತಡ ಹೆಚ್ಚಿತ್ತಿದೆ. ಆ ಗುರಿ ತಲುಪಲು ಬೃಹತ್ ಪ್ರಮಾಣದ ವಿದ್ಯುತ್ ಕಡಿತವನ್ನು ವಿಧಿಸಲಾಗಿದೆ ಎಂದು ಕಂಡು ಬರುತ್ತಿದೆ. ಸುಮಾರು 20 ಪ್ರದೇಶಗಳಲ್ಲಿ ಚೀನಾ ಅತಿಹೆಚ್ಚು ಇಂಧನ ಬಳಸುತ್ತಿದ್ದು ಇದರಿಂದ ಮಾಲಿನ್ಯ ಹೆಚ್ಚಾಗಿದೆ. ಚೀನಾದ ಮನೆಗಳಲ್ಲಿ ಸೆಲ್ ಫೋನ್ ಗಳ ಬೆಳಕಿನಲ್ಲಿ ಕುಟುಂಬ ಸದಸ್ಯರು ಆಹಾರ ಸೇವಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.
 

SCROLL FOR NEXT