ವಿದೇಶ

ಕಾಬುಲ್‌ನಲ್ಲಿ ಬಾಂಬ್ ಸ್ಫೋಟ: 8 ಜನರು ಸಾವು, 20ಕ್ಕೂ ಅಧಿಕ ಜನರಿಗೆ ಗಾಯ

Ramyashree GN

ಕಾಬುಲ್: ಅಫ್ಗಾನಿಸ್ತಾನದ ರಾಜಧಾನಿ ಕಾಬುಲ್‌ನಲ್ಲಿ ಜನನಿಬಿಡ ಶಾಪಿಂಗ್ ಸ್ಟ್ರೀಟ್‌ನಲ್ಲಿ ಶನಿವಾರ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದು, 22 ಮಂದಿ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಶಿಯಾ ಮುಸ್ಲಿಂ ಸಮುದಾಯದ ಸದಸ್ಯರು ನಿಯಮಿತವಾಗಿ ಭೇಟಿನೀಡುವ ನಗರದ ಪಶ್ಚಿಮ ಜಿಲ್ಲೆಯಲ್ಲಿ ಬಾಂಬ್ ಸ್ಫೋಟಗೊಂಡಿದೆ. ಸುನ್ನಿ ಮುಸ್ಲಿಂ ಉಗ್ರಗಾಮಿ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ತನ್ನ ಟೆಲಿಗ್ರಾಂ ಚಾನೆಲ್‌ನಲ್ಲಿ ದಾಳಿಯ ಹೊಣೆ ಹೊತ್ತುಕೊಂಡಿರುವುದಾಗಿ ತಿಳಿಸಿದೆ.

ಘಟನೆ ಬಳಿಕ ಪರಿಸ್ಥಿತಿಯನ್ನು ನಿಭಾಯಿಸಲು ತನಿಖಾ ತಂಡವು ಬಾಂಬ್ ಸ್ಫೋಟಗೊಂಡ  ಸ್ಥಳದಲ್ಲಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಪ್ರವಾದಿ ಮೊಹಮ್ಮದ್ ಅವರ ಮೊಮ್ಮಗ ಹುಸೇನ್ ಹುತಾತ್ಮರಾದ ಸ್ಮರಣಾರ್ಥ ಅಶುರಾಗೆ ಮುಂಚಿತವಾಗಿ ಈ ದಾಳಿ ನಡೆದಿದೆ. ಈ ದಾಳಿಯು ಮುಖ್ಯವಾಗಿ ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ.

ಇಸ್ಲಾಮಿಕ್ ಸ್ಟೇಟ್ ಸಂಘಟನೆಯು ಅಫ್ಗಾನಿಸ್ತಾನದಲ್ಲಿ ಯಾವುದೇ ಪ್ರದೇಶದ ನಿಯಂತ್ರಣವನ್ನು ಹೊಂದಿಲ್ಲ. ಆದರೆ, ಇದು ಈ ದೇಶದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ದಾಳಿ ನಡೆಸುವ ಸ್ಲೀಪರ್ ಸೆಲ್‌ಗಳನ್ನು ಹೊಂದಿದೆ ಮತ್ತು ಆಡಳಿತಾರೂಢ ತಾಲಿಬಾನ್‌ನಿಂದ ಗಸ್ತು ತಿರುಗುತ್ತಿದೆ.

ಎರಡು ದಶಕಗಳ ದಂಗೆಯ ನಂತರ ಕಳೆದ ವರ್ಷ ಆಗಸ್ಟ್‌ನಲ್ಲಿ ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡಿರುವ ಸುನ್ನಿ ಮುಸ್ಲಿಂ ಸಮುದಾಯದ ತಾಲಿಬಾನ್ ಅಧಿಕಾರಿಗಳು, ಶಿಯಾ ಮುಸ್ಲಿಂ ಸಮುದಾಯದ ಮಸೀದಿಗಳು ಮತ್ತು ಇತರ ಸ್ಥಳಗಳಿಗೆ ಹೆಚ್ಚಿನ ರಕ್ಷಣೆ ನೀಡುವುದಾಗಿ ಹೇಳಿದ್ದಾರೆ.

ಕಾಬುಲ್‌ನಲ್ಲಿರುವ ಶಿಯಾ ಧಾರ್ಮಿಕ ವಿದ್ವಾಂಸರಾದ ಸೈಯದ್ ಕಾಜುಮ್ ಹೊಜಾತ್ ಮಾತನಾಡಿ, 'ತಾಲಿಬಾನ್ ಸರ್ಕಾರವು ಅಶುರಾಕ್ಕಿಂತ ಮುಂಚಿತವಾಗಿ ಭದ್ರತೆಯನ್ನು ಹೆಚ್ಚಿಸಿದೆ. ಆದರೆ, ಮತ್ತಷ್ಟು ಕಣ್ಗಾವಲನ್ನು ಹೆಚ್ಚಿಸಬೇಕಿದೆ ಎಂದು ಹೇಳಿದ್ದಾರೆ.

ಯಾವುದೇ ನವೀಕೃತ ಜನಗಣತಿ ಮಾಹಿತಿಯು ಲಭ್ಯವಿಲ್ಲದಿದ್ದರೂ, ಅಂದಾಜಿನ ಪ್ರಕಾರ ಪರ್ಷಿಯನ್ ಮಾತನಾಡುವ ತಾಜಿಕ್‌ಗಳು ಮತ್ತು ಪಶ್ತೂನ್‌ಗಳು ಹಾಗೂ ಹಜಾರಾಗಳನ್ನು ಒಳಗೊಂಡಂತೆ ಒಟ್ಟು ಜನಸಂಖ್ಯೆಯ (39 ಮಿಲಿಯನ್) ಶೇ 10 ರಿಂದ 20 ರಷ್ಟು ಶಿಯಾ ಸಮುದಾಯದ ಜನರು ಅಫ್ಗಾನಿಸ್ತಾದಲ್ಲಿ ಇದ್ದಾರೆ.

SCROLL FOR NEXT