ವಿದೇಶ

ಕಾಬುಲ್ ಆತ್ಮಾಹುತಿ ದಾಳಿಯಲ್ಲಿ ತಾಲಿಬಾನ್ ನ ಪ್ರಮುಖ ಮೌಲ್ವಿ ರಹೀಮುಲ್ಲಾ ಹಕ್ಕಾನಿ ಹತ್ಯೆ: ಐಎಸ್

Srinivas Rao BV

ಕಾಬುಲ್: ಇಸ್ಲಾಮಿಕ್ ಸ್ಟೇಟ್ ವಿರುದ್ಧ ಕಟು ಶಬ್ದಗಳಲ್ಲಿ ಟೀಕೆ ಮಾಡುತ್ತಿದ್ದ ತಾಲೀಬಾನ್ ನ ಹಿರಿಯ ಮೌಲ್ವಿಯನ್ನು ಅಫ್ಘಾನಿಸ್ತಾನದ ತಮ್ಮ ಮದರಸಾದಲ್ಲಿ ಆತ್ಮಾಹುತಿ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಐಎಸ್ ಉಗ್ರ ಸಂಘಟನೆ ಹೇಳಿದೆ. 

ರಹೀಮುಲ್ಲಾ ಹಕ್ಕಾನಿ ಇತ್ತೀಚಿನ ಸಾರ್ವಜನಿಕ ಭಾಷಣದಲ್ಲಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸುವುದಕ್ಕೆ ಅವಕಾಶ ನೀಡುವುದರ ಪರವಾಗಿ ಮಾತನಾಡಿದ್ದರು, ಅವರ ವಿರುದ್ಧ ಈ ಹಿಂದೆ 2 ಬಾರಿ ಹತ್ಯೆ ಯತ್ನ ನಡೆದಿತ್ತಾದರೂ ಅಪಾಯದಿಂದ ಪಾರಾಗಿದ್ದರು. 

"ಶೇಖ್ ರಹೀಮುಲ್ಲಾ ಅವರ ಮದರಸಾವನ್ನು ಟಾರ್ಗೆಟ್ ಮಾಡಲಾಯಿತು, ಪರಿಣಾಮವಾಗಿ ಅವರು ಹಾಗೂ ಅವರ ಓರ್ವ ಸಹೋದರ ಹುತಾತ್ಮರಾಗಿದ್ದಾರೆ" ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲೀದ್ ಝಾದ್ರಾನ್ ಹೇಳಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ" ಎಂದು ತಿಳಿಸಿದ್ದಾರೆ. 

ಇದಕ್ಕೂ ಮುನ್ನ, ಘಟನೆಯಲ್ಲಿ ಹಕ್ಕಾನಿ ಮಾತ್ರ ಮೃತಪಟ್ಟಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಖಾಲೀದ್ ಝಾದ್ರಾನ್ ಹೇಳಿದ್ದರು. 

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಐಎಸ್ ಹೊಣೆ ಹೊತ್ತುಕೊಂಡಿದ್ದು, ಮೌಲ್ವಿಯ ಕಚೇರಿಯಲ್ಲಿ ಆತ್ಮಹತ್ಯಾ ಬಾಂಬರ್ ಓರ್ವ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಉಗ್ರ ಸಂಘಟನೆ ಹೇಳಿದೆ. 

SCROLL FOR NEXT