ವಿದೇಶ

ವಿವಾದಾತ್ಮಕ ಚೀನಾ ಹಡಗು ಪ್ರವೇಶಕ್ಕೆ ಲಂಕಾ ಅನುಮತಿ! 

Srinivas Rao BV

ಕೊಲಂಬೋ: ಭಾರತದ ವಿರೋಧ, ಆತಂಕದ ನಡುವೆಯೂ ಶ್ರೀಲಂಕ ಚೀನಾದ ವಿವಾದಾತ್ಮಕ ಸಂಶೋಧನಾ ಹಡಗು ಪ್ರವೇಶಕ್ಕೆ ಅನುಮತಿ ನೀಡಿದೆ. 

ಚೀನಾದ ಈ ಹಡಗು ಪ್ರವೇಶಕ್ಕೆ ಅನುಮತಿ ನೀಡಿದರೆ, ಭಾರತದ ಸೇನೆಗೆ ಸಂಬಂಧಿಸಿದಂತೆ ಚೀನಾ ಗೂಢಾಚಾರಿಕೆ ನಡೆಸುವ ಸಾಧ್ಯತೆ ಇದೆ ಎಂದು ಭಾರತ ಆತಂಕ ವ್ಯಕ್ತಪಡಿಸಿತ್ತು. ವಿರೋಧದ ನಡುವೆಯೂ, ಲಂಕಾ, ಚೀನಾ ಹಡಗು ಪ್ರವೇಶಕ್ಕೆ ಅನುಮತಿ ನೀಡಿದೆ. ಯುವಾನ್ ವಾಂಗ್ 5 ಹಡಗನ್ನು ಅಂತಾರಾಷ್ಟ್ರೀಯ ಶಿಪ್ಪಿಂಗ್ ಮತ್ತು ಅನಾಲಿಟಿಕ್ಸ್ ಸೈಟ್‌ಗಳಿಂದ ಸಂಶೋಧನಾ ಹಾಗೂ ಸಮೀಕ್ಷೆ ಹಡಗು ಎಂದು ವಿವರಿಸಲಾಗಿದೆ. ಆದರೆ ಭಾರತದ ಪ್ರಕಾರ, ಇದು ಉಭಯ ಬಳಕೆಯ ಪತ್ತೇದಾರಿ ಹಡಗು ಆಗಿದೆ. 

ಭಾರತ ಸರ್ಕಾರ ಚೀನಾ ಹಿಂದೂ ಮಹಾಸಾಗರದಲ್ಲಿ ತನ್ನ ಇರುವಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಲಂಕಾದಲ್ಲೂ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದೆ ಎಂಬ ಶಂಕೆಯನ್ನು ಹೊಂದಿದ್ದು, ಚೀನಾದ ನಡೆ ಭಾರತದ ಹಿತಾಸಕ್ತಿಗಳಿಗೆ ಅಪಾಯಕಾರಿ ಎಂದು ವಿಶ್ಲೇಷಿಸಲಾಗುತ್ತಿದೆ. 

ಲಂಕಾದಲ್ಲಿರುವ ಚೀನಾ ನಿರ್ವಹಣೆಯಲ್ಲಿರುವ ಹಂಬಂತೋಟ ಬಂದರಿಗೆ ಆ.11 ರಂದು ಬರಬೇಕಿತ್ತು. ಆದರೆ ಭಾರತದ ಆಕ್ಷೇಪಗಳ ಹಿನ್ನೆಲೆಯಲ್ಲಿ ಲಂಕಾ ಚೀನಾದ ಹಡಗು ಪ್ರವೇಶವನ್ನು ಅನಿರ್ದಿಷ್ಟವಾಗಿ ಮುಂದೂಡಲು ಮನವಿ ಮಾಡಿತ್ತು. ಈಗ ಲಂಕಾಗೆ ಪ್ರವೇಶಿಸಲು ಅನುಮತಿ ನೀಡಿದ್ದು, ಆ.16-22 ರ ವರೆಗೆ ಹಂಬಂತೋಟ ಪ್ರವೇಶಕ್ಕೆ ಶ್ರೀಲಂಕಾ ಒಪ್ಪಿಗೆ ನೀಡಿದೆ.

SCROLL FOR NEXT