ಇಮ್ರಾನ್ ಖಾನ್ 
ವಿದೇಶ

ಸ್ವತಂತ್ರ ದೇಶವೆಂದರೆ ಇದು: ವಿದೇಶಾಂಗ ಸಚಿವ ಜೈಶಂಕರ್ ವಿಡಿಯೋ ತೋರಿಸಿ ಮತ್ತೆ ಭಾರತ ಕೊಂಡಾಡಿದ ಇಮ್ರಾನ್ ಖಾನ್

ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಮತ್ತೊಮ್ಮೆ ಶ್ಲಾಘಿಸಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ವಿದೇಶಾಂಗ ಸಚಿವ ಜೈಶಂಕರ್ ವಿಡಿಯೋ ತೋರಿಸಿ ಮತ್ತೆ ಭಾರತವನ್ನು ಕೊಂಡಾಡಿದ್ದಾರೆ.

ಇಸ್ಲಾಮಾಬಾದ್: ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಮತ್ತೊಮ್ಮೆ ಶ್ಲಾಘಿಸಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ವಿದೇಶಾಂಗ ಸಚಿವ ಜೈಶಂಕರ್ ವಿಡಿಯೋ ತೋರಿಸಿ ಮತ್ತೆ ಭಾರತವನ್ನು ಕೊಂಡಾಡಿದ್ದಾರೆ.

ಲಾಹೋರ್‌ನಲ್ಲಿ ಸೇರಿದ್ದ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದಕ್ಕೆ ಭಾರತವನ್ನು ಟೀಕಿಸುತ್ತಿರುವ ಪಾಶ್ಚಿಮಾತ್ಯ ದೇಶಗಳ ವಿರುದ್ಧ ಕಿಡಿಕಾರಿದರು. ಅಲ್ಲದೆ ಈ ಸಂಬಂಧ ಸ್ಲೋವಾಕಿಯಾದಲ್ಲಿ ನಡೆದ ಬ್ರಟಿಸ್ಲಾವಾ ವೇದಿಕೆಯ ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಮಾತುಗಳ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಖರೀದಿ ಮಾಡುವುದರ ವಿರುದ್ಧ ಅಮೆರಿಕದ ಒತ್ತಡವನ್ನು ಲೆಕ್ಕಿಸದೆ ದೃಢವಾಗಿ ನಿಂತಿದ್ದಕ್ಕೆ ಜೈಶಂಕರ್ ಅವರನ್ನು ಹೊಗಳಿದ್ದಾರೆ.

"ಪಾಕಿಸ್ತಾನದ ಸಂದರ್ಭದಲ್ಲಿಯೇ ಭಾರತ ಸ್ವಾತಂತ್ರ್ಯ ಪಡೆದಿದ್ದಾಗ, ಹೊಸದಿಲ್ಲಿಯು ದೃಢವಾಗಿ ನಿಂತು ತನ್ನ ಜನರ ಅಗತ್ಯಕ್ಕೆ ಅನುಗುಣವಾಗಿ ವಿದೇಶಾಂಗ ನೀತಿಯನ್ನು ರೂಪಿಸಲು ಸಾಧ್ಯವಾಗುವುದಾದರೆ, ದಾರಿ ತಪ್ಪುತ್ತಿರುವ ಅವರು (ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರ) ಯಾರು?". ರಷ್ಯಾದಿಂದ ತೈಲ ಖರೀದಿಸದಂತೆ ಭಾರತಕ್ಕೆ ಅಮೆರಿಕ ಆದೇಶ ನೀಡಿತ್ತು. ಭಾರತವು ಅಮೆರಿಕ ಕಾರ್ಯತಂತ್ರ ಮಿತ್ರ ದೇಶ. ಪಾಕಿಸ್ತಾನ ಅಲ್ಲ. ಆದರೆ ರಷ್ಯಾದಿಂದ ತೈಲ ಖರೀದಿಸಬೇಡಿ ಎಂದು ಅಮೆರಿಕ ಸೂಚಿಸಿದಾಗ ಭಾರತದ ವಿದೇಶಾಂಗ ಸಚಿವರು ಹೇಳಿದ್ದೇನು ನೋಡಿ ಎಂದು ಎಸ್ ಜೈಶಂಕರ್ ಅವರ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ನೀವು ಯಾರು ಎಂದು ಜೈಶಂಕರ್ ಪ್ರಶ್ನಿಸುತ್ತಾರೆ. ರಷ್ಯಾದಿಂದ ಯುರೋಪ್ ಅನಿಲ ಖರೀದಿ ಮಾಡುತ್ತಿದೆ. ನಮ್ಮ ಜನರಿಗೆ ಅಗತ್ಯ ಇರುವುದರಿಂದ ನಾವೂ ಖರೀದಿ ಮಾಡುತ್ತೇವೆ ಎಂದು ಜೈಶಂಕರ್ ಹೇಳುತ್ತಾರೆ. ಇದೇ ವಿಡಿಯೋ ತೋರಿಸಿ ಇಮ್ರಾನ್ ಖಾನ್, ಸ್ವತಂತ್ರ ದೇಶವೆಂದರೆ ಇದು" ಎಂದು ಭಾರತವನ್ನು ಕೊಂಡಾಡಿದ್ದಾರೆ. ಅಂತೆಯೇ ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಅಮೆರಿಕದ ಒತ್ತಡಕ್ಕೆ ತಲೆಬಾಗಿದ ಶೆಹಬಾಜ್ ಷರೀಫ್ ಸರ್ಕಾರವನ್ನು ಇಮ್ರಾನ್ ಖಾನ್ ಟೀಕಿಸಿದ್ದಾರೆ.

"ರಷ್ಯಾದಿಂದ ಅಗ್ಗದ ತೈಲ ಖರೀದಿಗಾಗಿ ನಾವು ರಷ್ಯಾ ಜತೆ ಮಾತುಕತೆ ನಡೆಸಿದ್ದೆವು. ಆದರೆ ಅಮೆರಿಕದ ಒತ್ತಡಕ್ಕೆ ಇಲ್ಲ ಎನ್ನುವ ಧೈರ್ಯ ಈ ಸರ್ಕಾರಕ್ಕೆ ಇಲ್ಲ. ಇಂಧನ ದರಗಳು ಗಗನಕ್ಕೆ ಏರುತ್ತಿವೆ. ಜನರು ಬಡತನ ರೇಖೆಗಿಂತ ಕಡಿಮೆ ಇದ್ದಾರೆ. ನಾನು ಗುಲಾಮಗಿರಿಯ ವಿರುದ್ಧವಿದ್ದೇನೆ ಎಂದು ಹೇಳಿದ್ದಾರೆ. 

ಇಮ್ರಾನ್ ಖಾನ್ ಅವರು ಭಾರತವನ್ನು ಹೊಗಳುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ತಾವು ಅಧಿಕಾರ ಕಳೆದುಕೊಳ್ಳುವ ಸನ್ನಿವೇಶ ಸೃಷ್ಟಿಯಾದ ಸಂದರ್ಭದಿಂದಲೂ ಅವರು ಭಾರತ ಮತ್ತು ಅದರ ವಿದೇಶಾಂಗ ನೀತಿಯನ್ನು ಪಾಕಿಸ್ತಾನದ ನೀತಿ ಜತೆ ಹೋಲಿಸಿ ಹೊಗಳುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್‌ ಅಭಿಷೇಕ್​ ಸೇರಿ ಇಬ್ಬರು ಸಾವು; Video

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal flood: ಮೃತರ ಸಂಖ್ಯೆ 270ಕ್ಕೆ ಏರಿಕೆ, ಸುಮಾರು 288 ಭಾರತೀಯರು ನಾಪತ್ತೆ! 800ಕ್ಕೂ ಹೆಚ್ಚು ಜನರ ರಕ್ಷಣೆ