ವಿದೇಶ

ಉಕ್ರೇನ್ ನಲ್ಲಿ ರಷ್ಯ ಆಕ್ರಮಿತ ಅಣುಘಟಕದ ತಪಾಸಣೆಗೆ ಪುಟಿನ್ ಒಪ್ಪಿಗೆ

Srinivas Rao BV

ಜಪೋರಿಝಿಯಾ: ರಷ್ಯಾದ ವಶದಲ್ಲಿರುವ ಉಕ್ರೇನ್ ನ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ಸ್ವತಂತ್ರ ತಪಾಸಕರು ಉಕ್ರೇನ್ ಮೂಲಕ ಭೇಟಿ ನೀಡುವುದಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಒಪ್ಪಿಗೆ ಸೂಚಿಸಿದ್ದಾರೆ. 

ಈ ಮಾಹಿತಿಯನ್ನು ಫ್ರೆಂಚ್ ಪ್ರೆಸಿಡೆನ್ಸಿ ಹೇಳಿದ್ದು, ತಪಾಸಕರು ರಷ್ಯಾದ ಮೂಲಕ ಪರಮಾಣು ವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಬೇಕೋ ಅಥವಾ ಉಕ್ರೇನ್ ಮೂಲಕ ಭೇಟಿ ನೀಡಬೇಕೋ ಎಂಬ ಬಗ್ಗೆ ವಿವಾದ ಉಂಟಾಗಿತ್ತು.

"ಯುದ್ಧರಂಗದಲ್ಲಿ ರಷ್ಯನ್ನರ ಪ್ರಗತಿ ಸಂಪೂರ್ಣ ಕುಗ್ಗಿದೆ" ಎಂದು ಅಮೆರಿಕ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಪ್ರಕಾರ, ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ರಷ್ಯಾ ಮೂಲಕವೇ ಅಣು ಸ್ಥಾವರಕ್ಕೆ ಭೇಟಿ ನೀಡುವ ಬೇಡಿಕೆಗೆ ಪುಟಿನ್ ಮರುಪರಿಶೀಲಿಸಿದ್ದರು. 

ಈಗ ಉಕ್ರೇನ್ ಮೂಲಕ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರವನ್ನು ತಪಾಸಣೆ ಮಾಡುವುದಕ್ಕೆ ವಿಶ್ವಸಂಸ್ಥೆಯ ಅಣು ಕಾವಲುಗಾರ ಸಂಸ್ಥೆಗೆ ಅವಕಾಶಕ್ಕೆ ಪುಟಿನ್ ಒಪ್ಪಿಗೆ ನೀಡಿದ್ದಾರೆ.

SCROLL FOR NEXT