ವಿವೇಕ್ ಗುರವ್ 
ವಿದೇಶ

ಬ್ರಿಟನ್ ಬೀದಿಗಳನ್ನು ಸ್ವಚ್ಛಗೊಳಿಸುವ 'ಪ್ಲಾಗಿಂಗ್' ಮಿಷನ್‌ಗೆ ಭಾರತೀಯ ವಿದ್ಯಾರ್ಥಿ ವಿವೇಕ್ ಗುರವ್ ನೇತೃತ್ವ

ನೈಋತ್ಯ ಇಂಗ್ಲೆಂಡ್‌ನ ಬ್ರಿಸ್ಟಲ್ ವಿಶ್ವವಿದ್ಯಾಲಯದ ಭಾರತೀಯ ವಿದ್ಯಾರ್ಥಿ ಮತ್ತು ಪ್ರಶಸ್ತಿ ವಿಜೇತ ಪರಿಸರವಾದಿ ವಿವೇಕ್ ಗುರವ್ ಅವರು ವಿವಿಧ ನಗರಗಳಲ್ಲಿ ಕಸ ಆರಿಸುವುದರೊಂದಿಗೆ 'ಪ್ಲಾಗಿಂಗ್' ಅಥವಾ ಜಾಗಿಂಗ್ ಮಾಡುವ ಟ್ರೆಂಡ್ ಗೆ ಪ್ರೇರಣೆಯಾಗಿದ್ದಾರೆ.

ಲಂಡನ್: ನೈಋತ್ಯ ಇಂಗ್ಲೆಂಡ್‌ನ ಬ್ರಿಸ್ಟಲ್ ವಿಶ್ವವಿದ್ಯಾಲಯದ ಭಾರತೀಯ ವಿದ್ಯಾರ್ಥಿ ಮತ್ತು ಪ್ರಶಸ್ತಿ ವಿಜೇತ ಪರಿಸರವಾದಿ ವಿವೇಕ್ ಗುರವ್ ಅವರು ವಿವಿಧ ನಗರಗಳಲ್ಲಿ ಕಸ ಆರಿಸುವುದರೊಂದಿಗೆ 'ಪ್ಲಾಗಿಂಗ್' ಅಥವಾ ಜಾಗಿಂಗ್ ಮಾಡುವ ಟ್ರೆಂಡ್ ಗೆ ಪ್ರೇರಣೆಯಾಗಿದ್ದಾರೆ.

ಮೂಲತಃ ಪುಣೆಯವರಾದ ವಿವೇಕ್ ಗುರವ್ ಅವರು ಸ್ಥಳೀಯ ಬೀದಿಗಳನ್ನು ಹೆಚ್ಚು ಬಳಸುವ ಜನರನ್ನು ಪ್ರೋತ್ಸಾಹಿಸಲು 'ಜೋಗ್ಗಾ'(ಜಾಗಿಂಗ್) ಜೊತೆಗೆ 'ಪ್ಲೋಕಾ ಅಪ್' (ಕಸ ಎತ್ತಿಕೊಳ್ಳುವುದು)ಅನ್ನು ಸಂಯೋಜಿಸುವ 'ಪ್ಲಾಗಿಂಗ್' ಎಂಬ ಸ್ವೀಡಿಷ್ ಪರಿಕಲ್ಪನೆಯಿಂದ ಸ್ಫೂರ್ತಿ ಪಡೆದಿದ್ದಾರೆ. 

ಭಾರತದಲ್ಲಿ, ಅವರು 2018 ರಲ್ಲಿ 'ಪುಣೆ ಪ್ಲಾಗರ್ಸ್' ಎಂದು ಕರೆಯಲ್ಪಡುವ 'ಪ್ಲಾಗಿಂಗ್' ಸಮುದಾಯವನ್ನು ಸ್ಥಾಪಿಸಿದರು. ಅದರ 10,000 ಕ್ಕೂ ಹೆಚ್ಚು ಸದಸ್ಯರು 1 ಮಿಲಿಯನ್ ಕಿಲೋಗ್ರಾಂಗಳಷ್ಟು ಕಸವನ್ನು ಸಂಗ್ರಹಿಸಿದ್ದಾರೆ ಮತ್ತು ಕಳೆದ ಸೆಪ್ಟೆಂಬರ್‌ನಲ್ಲಿ ಬ್ರಿಸ್ಟಲ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿರುವ ವಿವೇಕ್ ಅಲ್ಲಿಯು 'ಪ್ಲಾಗಿಂಗ್' ಟ್ರೆಂಡ್ ಮುಂದುವರಿಸಿದ್ದಾರೆ.

ಅಲ್ಲಿಂದೀಚೆಗೆ, ಅವರು 180 ದೇಶಗಳ ಸ್ವಯಂಸೇವಕರಿಂದ ಸೇರಿಕೊಂಡ 120 'ಪ್ಲಾಗಿಂಗ್ ಮಿಷನ್'ಗಳಲ್ಲಿ 420 ಮೈಲಿಗಳನ್ನು ಕ್ರಮಿಸಿದ್ದಾರೆ ಮತ್ತು ಈಗ ಬ್ರಿಟನ್ ನ 30 ನಗರಗಳಿಗೆ ಅದನ್ನು ವಿಸ್ತರಿಸಿದ್ದಾರೆ ಎಂದು ಅವರ ವಿಶ್ವವಿದ್ಯಾಲಯ ತಿಳಿಸಿದೆ.

"ನಾನು ಬ್ರಿಸ್ಟಲ್‌ನಲ್ಲಿ ಮಾತ್ರ 'ಪ್ಲಾಗಿಂಗ್' ಮಾಡುತ್ತಿದ್ದೇನೆ. ಆದರೆ ಮ್ಯಾಂಚೆಸ್ಟರ್, ಲೀಡ್ಸ್, ಡರ್ಬಿಯ ಜನರು ಅಲ್ಲಿಗೆ 'ಪ್ಲಾಗಿಂಗ್' ಮಾಡಲು ಬರಲು ನನ್ನನ್ನು ಕೇಳುತ್ತಿದ್ದರು. ಆದ್ದರಿಂದ, ನಾನು ಬ್ರಿಟನ್ ನ 30 ನಗರಗಳಲ್ಲಿ 'ಪ್ಲಾಗಿಂಗ್' ಮಾಡಲು ನಿರ್ಧರಿಸಿದೆ ಎಂದು ವಿವೇಕ್ ಗುರವ್ ಹೇಳಿದ್ದಾರೆ.

ಪ್ಲಾಗಿಂಗ್ ಅಂದರೆ ಜಾಗಿಂಗ್ ಮಾಡುತ್ತ ಕಸ ಎತ್ತುವ ಹೊಸ ಫಿಟ್‌ನೆಸ್ ಟ್ರೆಂಡ್. ಇದು ಜಾಗಿಂಗ್ಗಿಂತಲೂ ಹೆಚ್ಚು ಪರಿಣಾಮಕಾರಿ ಅಂತ ಸಾಬೀತಾಗಿದೆ. ಪರಿಸರದ ಬಗ್ಗೆ ಕಾಳಜಿ ಹೊಂದಿರುವ ಫಿಟ್‌ನೆಸ್ ಪ್ರಿಯರಿಗೆ ಇದು ಹೆಚ್ಚು ಆಕರ್ಷಕವಾಗಿ ಕಾಣುತ್ತಿದ್ದು, ಪ್ಲಾಗಿಂಗ್ ನಿಂದ ಹೆಚ್ಚು ಕ್ಯಾಲೊರಿ ಇಳಿಸಬಹುದು ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT